Startv News | Hubli | Kannada News
Uncategorized

ಹುಬ್ಬಳ್ಳಿ – ಧಾರವಾಡಕ್ಕೆ ಹೊಸ ಪೊಲೀಸ್ ಕಮಿಷನರ್ ನೇಮಕ. ಶ್ರೀ ಬೊರಸೆ ಭೂಷಣ್ ಗುಲಾಬ್ ರಾವ್ – ಐಪಿಸ್.

ಪೂರ್ಣ ಮಾಹಿತಿ: ರಾಜ್ಯ ಸರ್ಕಾರದ ಆದೇಶದ ಮೇರೆಗೆ ಹುಬ್ಬಳ್ಳಿ – ಧಾರವಾಡಕ್ಕೆ ಹೊಸ ಪೊಲೀಸ್ ಕಮಿಷನರ್ ನೇಮಕ. ಶ್ರೀ ಬೊರಸೆ ಭೂಷಣ್ ಗುಲಾಬ್ ರಾವ್ – ಐಪಿಸ್.

ಪ್ರಸ್ತುತ ಬೆಳಗಾವಿ ನಗರದ ಉಪ ಪೊಲೀಸ್ ಮಹಾ ನಿರೀಕ್ಷಕರು ಹಾಗೂ ಪೊಲೀಸ್ ಆಯುಕ್ತರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶ್ರೀ ಭೂಷಣ್ ಗುಲಾಬ್ ರಾವ್ ಐಪಿಎಸ್ ಅಧಿಕಾರಿ ಅವರನ್ನು ತಕ್ಷಣ ಜಾರಿಗೆ ಬರುವಂತೆ ವರ್ಗಾವಣೆ ಮಾಡಲಾಗಿದೆ.

ಮುಂದಿನ ರಾಜ್ಯ ಸರ್ಕಾರದ ಆದೇಶದ ಮೇರೆಗೆ ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತರು ಹಾಗೂ ಮಹಾನಿರ್ಷಿಕರಾಗಿ ನೇಮಕ ಮಾಡಲಾಗಿದೆ. ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತರಾಗಿದ್ದ ಎನ್ ಶಶಿಕುಮಾರ್ ಅವರಿಗೆ ವರ್ಗಾವಣೆ ಮಾಡಲಾಗಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.

ವೃತ್ತಿಜೀವನ ಮತ್ತು ಹಿನ್ನೆಲೆ:

ಬ್ಯಾಚ್ ಮತ್ತು ಕ್ಯಾಡರ್: ಕರ್ನಾಟಕ ಕ್ಯಾಡರ್‌ನ 2009 ರ ಬ್ಯಾಚ್.

ತವರೂರು: ಮೂಲತಃ ಮಹಾರಾಷ್ಟ್ರದ ಧುಳೆ ಜಿಲ್ಲೆಯವರು.

ಶಿಕ್ಷಣ: ಪುಣೆ ವಿಶ್ವವಿದ್ಯಾಲಯದಿಂದ ಕೆಮಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಹಾಗೂ ಎನ್‌ಐಟಿ ಜಂಶೆಡ್‌ಪುರದಿಂದ ಎಂ.ಟೆಕ್ (MTech) ಪದವಿ ಪಡೆದಿದ್ದಾರೆ.

Share

Related posts

ಜನಸೇವೆ ನನ್ನ ಗುರಿ.! HDMC 53ನೇ ವಾರ್ಡಿನ ಜನಪ್ರತಿನಿಧಿ ಶ್ರೀ ಎಂ.ಎಂ ಬದ್ರಾಪುರ. ಜನರ ಸಮಸ್ಯೆಗೆ ಕೂಡಲೇ ಸಹಕರಿಸುವಂತಹ ಜನಪ್ರತಿನಿಧಿ. ವಿಶೇಷ ವರದಿ.

admin

ಹುಬ್ಬಳ್ಳಿ ಚನ್ನಮ್ಮ ವೃತ್ತದಲ್ಲಿ ರೈತರ ಶಕ್ತಿ ಪ್ರದರ್ಶನ! ಚನ್ನಮ್ಮ ವೃತ್ತದಿಂದ ಪ್ರಲ್ಹಾದ್ ಜೋಶಿ ನಿವಾಸದವರೆಗೆ ರೈತರ ಮೆರವಣಿಗೆ.

admin

ಚಿಕ್ಕ ಮಕ್ಕಳ ಫ್ಯಾನ್ಸಿ ಡ್ರೆಸ್ ಸ್ಪರ್ದೆ ಅಂಕುರಾ ಪ್ರೀ ಪ್ರೈಮರಿ ಸ್ಕೂಲ್ ರಾಜನಗರ್ ಹುಬ್ಬಳ್ಳಿ. Complete Video..

admin

Leave a Comment