August 4, 2026
Startv News | Hubli | Kannada News
ಕರ್ನಾಟಕ ಸುದ್ದಿ

ಖಾದಿ ನೆಲದಲ್ಲಿ ಪಾಲಿಸ್ಟರ್‌ ಧ್ವಜದ ಹಾವಳಿ: ನೆರೆರಾಜ್ಯಗಳಿಂದ ಅವಳಿ ನಗರಕ್ಕೆ 300ಕ್ಕೂ ಅಧಿಕ ಮಾರಾಟಗಾರರು!

ಹುಬ್ಬಳ್ಳಿ: ಹಳ್ಳಿಯಿಂದ ಹಿಡಿದು ದೆಹಲಿ ಕೆಂಪು ಕೋಟೆಯವರಗೆ ಅಧಿಕೃತವಾಗಿ ರಾಷ್ಟ್ರಧ್ವಜಗಳನ್ನು ಸರಬರಾಜು ಮಾಡುವ ಏಕೈಕ ರಾಷ್ಟ್ರಧ್ವಜ ತಯಾರಿಕಾ ಕೇಂದ್ರ ಇರುವ ಊರಿನಲ್ಲಿಯೇ ಪಾಲಿಸ್ಟರ್ ಧ್ವಜದ ಹಾವಳಿ ‌ಹೆಚ್ಚಾಗಿದೆ. ಪಾಲಿಸ್ಟರ್‌ ನಿಂದ ತಯಾರಿಸಿದ ತ್ರಿವರ್ಣ ಧ್ವಜವನ್ನು ಬೇಕಾಬಿಟ್ಟಿ ಮಾರಾಟ ಮಾಡಲಾಗುತ್ತಿದ್ದು ಆಂಧ್ರಪ್ರದೇಶ, ಬಿಹಾರ, ತಮಿಳುನಾಡಿನಿಂದ ರಾಜ್ಯದ 22 ಕ್ಕೂ ಅಧಿಕ ಜಿಲ್ಲೆಗಳಿಗೆ ಪಾಲಿಸ್ಟರ್‌ ಧ್ವಜ ಮಾರಾಟ ಮಾಡಲು ಬಂದಿಳಿದಿದ್ದಾರೆ.ದೇಶದ ಪ್ರತಿ ರಾಜ್ಯಗಳಿಗೂ ಕರ್ನಾಟಕದಿಂದ ಅದರಲ್ಲೂ ಧಾರವಾಡ ಜಿಲ್ಲೆಯ ಹುಬ್ಬಳ್ಳಿಯ ಬೆಂಗೇರಿ ಖಾದಿ ಗ್ರಾಮೋ ದ್ಯೋಗದಲ್ಲಿ ತಯಾರಿಸಲಾದ ತ್ರಿವರ್ಣ ಧ್ವಜ ಸರಬರಾಜು ಆಗುತ್ತದೆ. ಗ್ರಾಮದಿಂದ ಹಿಡಿದು ದೆಹಲಿಯ ಕೆಂಪುಕೋಟೆ ವರೆಗೆ ಈ ಧ್ವಜ ಹಾರಾಡುತ್ತಿರುವುದು ರಾಜ್ಯದ ಮೆರಗು ಹೆಚ್ಚಿಸಿದೆ. ಆದರೆ, ಕಳೆದ 2-3 ವರ್ಷಗಳಿಂದ ರಾಜ್ಯಾದ್ಯಂತ ಪಾಲಿಸ್ಟರ್‌ ತ್ರಿವರ್ಣ ಧ್ವಜಗಳ ಮಾರಾಟ ಅವ್ಯಾಹತವಾಗಿ ನಡೆಯುತ್ತಿದೆ. ಖಾದಿ ಗ್ರಾಮೋದ್ಯೋಗದ ಮೇಲೆ ಇದು ದುಷ್ಪರಿಣಾಮ ಬೀರಿದೆ.

Share

Related posts

ಹುಬ್ಬಳ್ಳಿ: ಸಿ ಎಂ ಸಿದ್ದರಾಮಯ್ಯ ಅವರ ಅದ್ಭುತ ಮಾತುಗಳು.! ಅಲ್ಪ ಸಂಖ್ಯಾತರಿಗೆ ಅನುದಾನ ಕೊಟ್ಟೆ ಕೊಡ್ತೀನಿ. ಹಜರತ್ ಭಾಷಾ ಖಾದ್ರಿ ಆಶ್ತಾನಾ ದಲ್ಲಿ ಮುಸ್ಲಿಂ ಕಾನ್ಫರೆನ್ಸ್!

admin

2975 ಕೆಪಿಟಿಸಿಎಲ್‌ ಹುದ್ದೆ, ಎಸ್‌ಎಸ್‌ಎಲ್‌ಸಿ ಪಾಸಾದ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ನವೆಂಬರ್ 20 ರವರೆಗೆ ಅರ್ಜಿ ಸಲ್ಲಿಸಬಹುದು ಅಪ್ಲಿಕೇಶನ್‌ ಶುಲ್ಕ ವಿವರ.!

admin

Kidney Stones : ಕಿಡ್ನಿ ಸ್ಟೋನ್‌ ಅನ್ನು ಕೇವಲ 10 ದಿನದಲ್ಲಿ ಕರಗಿಸುತ್ತೆ ಈ ಎಲೆ.!

admin

Leave a Comment