ಎರಡು ಕೋಮಿನ ಮಧ್ಯೆ ವಿಷ ಬಿತ್ತುವ ಪ್ರಮೋದ್ ಮುತಾಲಿಕ್ ಗೇ ಗಡಿಪಾರು ಮಾಡಬೇಕೆಂದು ಮುಸ್ಲಿಂ ಸಮಾಜದಿಂದ ಆಗ್ರಹ.! ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರಾದ ರೇಣುಕಾ ಸುಕುಮಾರ ಅವರ ಕಚೇರಿಗೆ ಭೇಟಿ ನೀಡಿ ಮುಸ್ಲಿಂ ಜನಾಂಗದವರು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕನನ್ನು ಗಡಿಪಾರು ಮಾಡಬೇಕೆಂದು ವಿನಂತಿಸಿಕೊಂಡಿದ್ದಾರೆ.
ಇದಕ್ಕೆ ಕಾರಣ ಪ್ರಮೋದ್ ಮುತಾಲಿಕ ಹಲವಾರು ಬಾರಿ ಮುಸಲ್ಮಾನರಿಗೆ ಪಾಕಿಸ್ತಾನದವರು ದೇಶದ್ರೋಹಿಗಳು ಎಂದು ಟೀಕಿಸುತ್ತಾ ತನ್ನ ಪ್ರಚೋದನಕಾರಿ ಹೇಳಿಕೆಯಿಂದ ಸಾರ್ವಜನಿಕರ ಮುಂದೆ ಟೀಕಿಸಿದ್ದಾರೆ. ಗಣೇಶ್ ಚತುರ್ಥಿ ಹಬ್ಬದಲ್ಲಿ ಶಾಂತಿಯುತವಾಗಿ ಯುದ್ಧ ಹಬ್ಬದ ಸಂದರ್ಭದಲ್ಲಿ ಒಂದು ಜನಾಂಗಕ್ಕೆ ಗುರಿಯಾಗಿ ಇಟ್ಟುಕೊಂಡು ಮಸೀದಿ ಒಳಗಡೆ ಗಣೇಶ ಸ್ಥಾಪಿಸುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾನೆ.
ಇದಕ್ಕೆ ಜನಾಂಗದವರು ಅಸಮಾಧಾನ ಗೊಂಡು ಹುಬ್ಬಳ್ಳಿ ಧಾರವಾಡ ಕಮಿಷನರ್ ನನ್ನ ಭೇಟಿ ನೀಡಿ ಪ್ರಮೋದ್ ಮುತಾಲಿಕನನ್ನು ಗಡಿಪಾರು ಮಾಡಲು ಆಗ್ರಹಿಸುತ್ತಿದ್ದಾರೆ.
