Startv News | Hubli | Kannada News
ಕರ್ನಾಟಕ ಸುದ್ದಿ ರಾಷ್ಟ್ರೀಯ ಸುದ್ದಿಗಳು ಸ್ಥಳೀಯ ಹುಬ್ಬಳ್ಳಿ-ಧಾರವಾಡ

LPG: ಇಕೆವೈಸಿ ಪೂರ್ಣಗೊಳಿಸುವಂತೆ ಸೂಚನೆ.! ಕೇಂದ್ರ ಸರ್ಕಾರದಿಂದ ಸಿಗುವ ಸಬ್ಸಿಡಿ ಪಡೆಯಲು ಇದನ್ನು ಪೂರ್ಣಗೊಳಿಸುವುದು ಕಡ್ಡಾಯ.!

ಗ್ಯಾಸ್ ಸಿಲಿಂಡರ್’ಗೆ ಹೊಸ ನಿಯಮ : ಆಗಸ್ಟ್ ಹದಿನಾರರ ಒಳಗೆ ಇಕೆವೈಸಿ ಮಾಡಿಸುವುದು ಕಡ್ಡಾಯ
LPG ಇ-ಕೆವೈಸಿಗೆ ಆಗಸ್ಟ್ 16 ಕೊನೆಯ ದಿನ : ತಪ್ಪಿದರೆ ಗ್ಯಾಸ್ ಸಂಪರ್ಕ ನಿಜಕ್ಕೂ ರದ್ದಾಗುತ್ತಾ? ಇಲ್ಲಿದೆ ಅಸಲಿ ಮಾಹಿತಿ
ಗ್ಯಾಸ್ ಇಕೆವೈಸಿ ಮಾಡಿಸದಿದ್ದರೆ ಏನಾಗುತ್ತದೆ? ಆಗಸ್ಟ್ ಹದಿನಾರರ ಹೊಸ ನಿಯಮ ಮಾಹಿತಿ ಇಲ್ಲಿದೆ.

ಇಂಡೇನ್ (Indian Oil Corporation) ತಮ್ಮ ಗ್ರಾಹಕರಿಗೆ ಮೊಬೈಲ್ ಸಂದೇಶವೊಂದನ್ನು ಕಳುಹಿಸಿ, ಆಗಸ್ಟ್ ಹದಿನಾರರೊಳಗೆ ಇ-ಕೆವೈಸಿ ಪೂರ್ಣಗೊಳಿಸುವಂತೆ ಸೂಚಿಸಿದೆ. ಪ್ರಧಾನ್ ಮಂತ್ರಿ ಉಜ್ವಲ ಯೋಜನೆ (PMUY) ಅಡಿಯಲ್ಲಿ ಎಲ್‌ಪಿಜಿ ಸಬ್ಸಿಡಿಯನ್ನು ಪಡೆಯುತ್ತಿದ್ದರೆ ಮತ್ತು ಇದು ಮುಂದುವರಿಯಬೇಕಾದರೆ, ಕೆವೈಸಿ ಪೂರ್ಣಗೊಳಿಸುವುದು ಕಡ್ಡಾಯ ಎನ್ನುವ ಸಂದೇಶವನ್ನು ಕೊಟ್ಟಿದೆ.

ಭಾರತದ ತೈಲ ಮಾರುಕಟ್ಟೆ ಕಂಪೆನಿಗಳಾದ (OMC) ಇಂಡೇನ್, HP ಮತ್ತು ಭಾರತ್, ತಮ್ಮ ಗ್ರಾಹಕರಿಗೆ ಆಧಾರ್ ಆಧಾರಿತ ಬಯೋಮೆಟ್ರಿಕ್ ಇ-ಕೆವೈಸಿ ಮಾಡಿಸದಿದ್ದರೆ ಸಬ್ಸಿಡಿ ದರದ ಸಿಲಿಂಡರ್ ಕಳೆದುಕೊಳ್ಳುವ ಸಾಧ್ಯತೆಯಿದೆ. ಹಾಗಾಗಿ, ಕೂಡಲೇ ಕೆವೈಸಿಯನ್ನು ಪೂರ್ಣಗೊಳಿಸಲು ತಿಳಿಸಿವೆ. ಆದರೆ, ಇ-ಕೆವೈಸಿ ಮಾಡಿಸದೇ ಇದ್ದ ಪಕ್ಷದಲ್ಲಿ ಗ್ಯಾಸ್ ಸಂಪರ್ಕ ರದ್ದಾಗುವುದಿಲ್ಲ, ಬದಲಿಗೆ, ಹೆಚ್ಚಿನ ಬೆಲೆಯನ್ನು ತೆತ್ತು ಸಿಲಿಂಡರ್ ಪಡೆದುಕೊಳ್ಳಬೇಕಾಗುತ್ತದೆ.

ಆಗಸ್ಟ್ ಹದಿನಾರರ ಒಳಗೆ ಇ-ಕೆವೈಸಿ ಮಾಡಿಸದಿದ್ದರೆ ಏನಾಗುತ್ತದೆ?
ಪ್ರಸ್ತುತ 14.2 ಕೆಜಿ ಸಿಲಿಂಡರ್ ಬೆಲೆ ಒಂದೊಂದು ನಗರದಲ್ಲಿ ಒಂದೊಂದು ರೀತಿಯಲ್ಲಿದೆ. ಬೆಂಗಳೂರಿನಲ್ಲಿ ಇದು 945 ರೂಪಾಯಿ ಇದೆ. ಉಜ್ವಲ ಯೋಜನೆಯ ಫಲಾನುಭವಿ ಆಗಿದ್ದಲ್ಲಿ, ಈ ಸಿಲಿಂಡರ್ ಮೇಲೆ ಮುನ್ನೂರು ರೂಪಾಯಿಯ ಸಬ್ಸಿಡಿ ಸಿಗುತ್ತಿದೆ. ಹಾಗಾಗಿ, ಇಲ್ಲಿ ಸಿಲಿಂಡರ್ ಒಂದಕ್ಕೆ ನೀಡಬೇಕಾಗುವ ದರ 645 ರೂಪಾಯಿ. ಈ ಸೌಲಭ್ಯ ಇ-ಕೆವೈಸಿ ಮಾಡಿಸಿದವರಿಗೆ ಮಾತ್ರ ಇರುತ್ತದೆ. ಆಗಸ್ಟ್ ಹದಿನಾರರ ಗಡುವಿನೊಳಗೆ ಇದನ್ನು ಮಾಡಿಸದೇ ಇದ್ದಲ್ಲಿ, ಮಾರುಕಟ್ಟೆ ದರವನ್ನು ನೀಡಿ, ಸಿಲಿಂಡರ್ ಪಡೆಯಬೇಕಾಗುತ್ತದೆ.

“ಇ-ಕೆವೈಸಿ ಮಾಡಿಸದೇ ಇರುವ ಗ್ರಾಹಕರಿಗೆ ಕಮರ್ಷಿಯಲ್ ಸಿಲಿಂಡರ್ ದರವನ್ನು ವಿಧಿಸಲಾಗುತ್ತದೆಯೇ ಎನ್ನುವುದರ ಬಗ್ಗೆ ಖಚಿತತೆ ಇಲ್ಲ. ಆದರೆ, ಗೃಹಬಳಕೆ ದರದಲ್ಲಿ ಮಾತ್ರ ಸಿಲಿಂಡರ್ ಪಡೆಯಲು ಸಾಧ್ಯವಿಲ್ಲ. ಎಲ್‌ಪಿಜಿ ಸಬ್ಸಿಡಿ ಪಡೆಯುವ ಗ್ರಾಹಕರು ಆಗಸ್ಟ್ ಹದಿನಾರರ ಒಳಗೆ ಇ-ಕೆವೈಸಿ ಮಾಡಿಸುವುದು ಉತ್ತಮ” ಎಂದು ಆಲ್ ಇಂಡಿಯಾ ಎಲ್‌ಪಿಜಿ ಡಿಸ್ಟ್ರಿಬ್ಯೂಟರ್ಸ್ ಫೆಡರೇಶನ್ ಉಪಾಧ್ಯಕ್ಷರು ಹೇಳಿದ್ದಾರೆ.

ಇ-ಕೆವೈಸಿ ಮಾಡುವುದು ಹೇಗೆ? ಇಂಡೇನ್ ಉದಾಹರಣೆ ಇಲ್ಲಿದೆ
ಇಂಡೇನ್ ಗ್ಯಾಸ್ (Indane) – ಆಧಾರ್ ಆಧಾರಿತ ಫೇಸ್ ಬಯೋಮೆಟ್ರಿಕ್ ಇ-ಕೆವೈಸಿಯನ್ನು ಮನೆಯಲ್ಲಿಯೇ ಕುಳಿತು ಮಾಡಬಹುದು. ಇಂಡೇನ್ ಆಪ್, ’IndianOil One’ ಅಥವಾ ’AadhaarFaceRD’ ಡೌನ್’ಲೋಡ್ ಮಾಡಿಕೊಳ್ಳಿ.
ಆಪ್ ಡೌನ್ಲೋಡ್ ಆದ ನಂತರ, ’’IndianOil One’ ಆಪ್ ಓಪನ್ ಮಾಡಿ, ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿ ಬಳಸಿ ಸೈನ್ ಆಪ್ (Sign Up) ಆಗಿ.
ಕ್ಯಾಶ್ ಮೆಮೊ ಅಥವಾ ಸಬ್ಸ್ಕ್ರಿಪ್ಷನ್ ವೋಚರ್’ನಲ್ಲಿರುವ ಹದಿನಾರು ಅಂಕಿಯ ‘LPG ID’ ಯನ್ನು ಲಿಂಕ್ ಮಾಡಿ. ಆಗ, ಗ್ರಾಹಕರ ವರದಿಗಳು ಕಾಣಿಸುತ್ತವೆ.
ನಂತರ, ಹೋಂ ಸ್ಕ್ರೀನ್’ಗೆ ಹೋಗಿ, ’My Profile’ ಮೇಲೆ ಕ್ಲಿಕ್ ಮಾಡಿ.
ಅಲ್ಲಿರುವ ಎಲ್‌ಪಿಜಿ ವಿವರಗಳನ್ನೊಮ್ಮೆ ಪರಿಶೀಲಿಸಿ, ನಂತರ ’re-KYC’ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ಸ್ಕೀನ್ ಮೇಲೆ ಕಾಣಿಸುವ ನಿಯಮಗಳು ಮತ್ತು ಷರತ್ತುಗಳನ್ನುಓದಿ, ಒಪ್ಪಿಗೆಯನ್ನು ನೀಡಿ.
ಫೇಸ್ ಅಥೆಂಟಿಕೇಶನ್ ಪುಟದಲ್ಲಿರುವ ಚೆಕ್’ಬಾಕ್ಸ್ ಕ್ಲಿಕ್ ಮಾಡಿ.
’Face Scan’ ಬಟನ್ ಕ್ಲಿಕ್ ಮಾಡಿದರೆ, ಆಧಾರ್ ಬಯೋಮೆಟ್ರಿಕ್ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ.
(ಗಮನಿಸಬೇಕಾದ ಅಂಶವೇನಂದರೆ, ಆಧಾರ್ ಬಯೋಮೆಟ್ರಿಕ್ ಲಾಕ್ ಆಗಿದ್ದರೆ, ಮೊದಲು ಅದನ್ನು ಅನ್’ಲಾಕ್ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಈ ಪ್ರಕ್ರಿಯೆ ಮುಂದಕ್ಕೆ ಹೋಗುವುದಿಲ್ಲ)

Share

Related posts

ಕಲ್ಬುರ್ಗಿ ಜಿಲ್ಲೆಯಲ್ಲಿ ವಕೀಲನ ಹತ್ತೆ.! ಹುಬ್ಬಳ್ಳಿಯಲ್ಲಿ ನ್ಯಾಯಕ್ಕಾಗಿ ವಕೀಲರ ಮುಷ್ಕರ.! Complete Video

admin

ಧಾರವಾಡದಲ್ಲಿ ಸೆಪ್ಟೆಂಬರ್ 09 ರಿಂದ 12ರವರೆಗೆ ಕೃಷಿ ಮೇಳ!

admin

ಹುಬ್ಬಳ್ಳಿ: ಸಿ ಎಂ ಸಿದ್ದರಾಮಯ್ಯ ಅವರ ಅದ್ಭುತ ಮಾತುಗಳು.! ಅಲ್ಪ ಸಂಖ್ಯಾತರಿಗೆ ಅನುದಾನ ಕೊಟ್ಟೆ ಕೊಡ್ತೀನಿ. ಹಜರತ್ ಭಾಷಾ ಖಾದ್ರಿ ಆಶ್ತಾನಾ ದಲ್ಲಿ ಮುಸ್ಲಿಂ ಕಾನ್ಫರೆನ್ಸ್!

admin

Leave a Comment