August 4, 2026
Startv News | Hubli | Kannada News
ಕರ್ನಾಟಕ ಸುದ್ದಿ ವಿಶೇಷ ವರದಿ ಸುದ್ದಿಗಳು ಹುಬ್ಬಳ್ಳಿ-ಧಾರವಾಡ

ಧಾರವಾಡದಲ್ಲಿ ಸೆಪ್ಟೆಂಬರ್ 09 ರಿಂದ 12ರವರೆಗೆ ಕೃಷಿ ಮೇಳ!

ಧಾರವಾಡ:ಸೆಪ್ಟೆಂಬರ್ ತಿಂಗಳಲ್ಲಿ 09 ರಿಂದ 12ರ ವರೆಗೆ ಒಟ್ಟು ನಾಲ್ಕು ದಿನಗಳ ಕಾಲ ಕೃಷಿ ಮೇಳ ನಡೆಯಲಿದೆ. ಈ ಬಾರಿಯ ಕೃಷಿ ಮೇಳವನ್ನು ‘ಸುಸ್ಥಿರ ಕೃಷಿಗೆ ಸಿರಿಧಾನ್ಯ’ ಎಂಬ ಘೋಷವಾಕ್ಯದಡಿ ನಡೆಯಲಿದೆ.ಅಂತರಾಷ್ಟ್ರೀಯ ಮಟ್ಟದಲ್ಲಿ 2023ನೇ ಇಸವಿಯನ್ನು ಸಿರಿ ಧಾನ್ಯಗಳ ವರ್ಷ ಎಂದು ಘೋಷಿಸಿರುವ ಹಿನ್ನೆಲೆ ಈ ಬಾರಿಯ ಕೃಷಿ ಮೇಳದಲ್ಲೂ ಹೆಚ್ಚಿನ ಪ್ರಮಾಣದಲ್ಲಿ ಸಿರಿಧಾನ್ಯಗಳ ಬಗ್ಗೆ ಪ್ರಾಮುಖ್ಯತೆ ಕೊಡಲಾಗುತ್ತೆ. 

ಸಿರಿಧಾನ್ಯ ಬೆಳೆಗಳಾದ ಬರಗು, ರಾಗಿ, ನವಣೆ, ಸಾವಿ, ಸಜ್ಜೆ ಈ ಬೆಳೆಗಳ ಪ್ರದರ್ಶನ, ಮಾಹಿತಿ, ಮಾರುಕಟ್ಟೆ ಬಗ್ಗೆ ಸಂಪೂರ್ಣ ಮಾಹಿತಿಯನ್ನ ಒದಗಿಸಲಾಗುತ್ತದೆ. ಅಲ್ಲದೇ ರೈತರ ಜೊತೆಗೆ ಸಂವಾದ, ಚರ್ಚಾ ಗೋಷ್ಠಿ ಹಾಗೂ ನೂತನ ಯಂತ್ರೋಪಕರಣಗಳ ಪ್ರಾತ್ಯಕ್ಷಿಕೆ ನಡೆಯಲಿದೆ. ಅಲ್ಲದೇ ಹೈನುಗಾರಿಕೆ, ಪಶುಸಂಗೋಪನೆ, ಕುರಿ, ಕೋಳಿ ಸಾಕಾಣಿಕೆ ಬಗ್ಗೆಯೂ ಮಾಹಿತಿ ಸಿಗಲಿದೆ.

ಜೈವಿಕ ಗೊಬ್ಬರಗಳು ಮತ್ತು ಜೈವಿಕ ಕೀಟನಾಶಕಗಳು, ಸಮಗ್ರ ಬೆಳೆಗಳು, ಪೋಷಕಾಂಶಗಳು, ಕೀಟ ಮತ್ತು ರೋಗ ನಿರ್ವಹಣೆ, ನೈಸರ್ಗಿಕ ಮತ್ತು ಸಾವಯವ ಕೃಷಿ, ಮಣ್ಣಿನ ಫಲವತ್ತತೆ ಮತ್ತು ಮಣ್ಣಿನ ಆರೋಗ್ಯದ ಸಂರಕ್ಷಣೆ ಬಗ್ಗೆಯೂ ಮಾಹಿತಿ ಸಿಗಲಿದೆ.

Share

Related posts

ಹುಬ್ಬಳ್ಳಿ: ಕ.ರ.ವೇ ಪ್ರವೀಣ್ ಶೆಟ್ಟಿ ಬಣ ದಿಂದ ಪ್ರತಿಭಟನೆ! ಹು-ಧಾ ಪೊಲೀಸ್ ಕಮಿಷನರ್ ವರ್ಗಾವಣೆ ಮಾಡಬೇಕೆಂದು ಆಗ್ರಹ!

admin

ಹುಬ್ಬಳ್ಳಿ: ಮಹಾನಗರ ಪಾಲಿಕೆ ಆಯುಕ್ತಾರಾದ ಈಶ್ವರ ಉಳ್ಳಾಗಡ್ಡಿ ಅವರು ಕಾಣೆಯಾಗಿದ್ದಾರೆ ಎಂದು ದೂರು ನೀಡಿದ ಪೌರಕಾರ್ಮಿಕರು.! ನ್ಯಾಯ ಯಾವಾಗ?? ಧ್ವನಿ ಸರ್ಕಾರಕ್ಕೆ ಕೇಳಿಸುತ್ತಾ?

admin

ರಾಜ್ಯ ಲೋರಿ ಮಾಲಕರ ಸಂಘದ ಅಧ್ಯಕ್ಷ ಶ್ರೀ ಜಿ.ಆರ್.ಷಣ್ಮುಗಪ್ಪ ಇಂದು ಹುಬ್ಬಳ್ಳಿಗೆ. ಏಪ್ರಿಲ್ 14 ರಂದು ಮುಷ್ಕರ – ಗಿರೀಶ್ ಮಲೆನಾಡು. ಏನಿದು Complete Video..

admin

Leave a Comment