ಹೌದು ವೀಕ್ಷಕರೇ ನೀವು ನೋಡ್ತಾ ಇರೋದು ಸತ್ಯ.. ಈ ವಿಡಿಯೋ ಯಾವುದೇ ರಾಜಕಾರಣಿಗೆ ಹಾಗೂ ರಾಜಕಾರಣಕ್ಕೆ ಹೀಯಾಳಿಸಲು ಮಾಡಿದಂತಹ ವಿಡಿಯೋ ಅಲ್ಲ, ಇದು ಸತ್ಯವಾಗಲೂ ಈ ಮಹಿಳೆ ತಾಗ್ಗು ಮುಚ್ಚುತ್ತಿರುವ ವಿಡಿಯೋ. ಈ ರೋಡಿನಲ್ಲಿ ಶಾಲಾ ಮಕ್ಕಳು, ಗರ್ಭಿಣಿಯರು ವಯಸ್ಸಾದಂತವರು ಬಸ್ಸು ಹಾಗೂ ಇತರ ವಾಹನಗಳಲ್ಲಿ ಓಡಾಡುತ್ತಾರೆ. ಇದು ರಾಜಕಾರಣಿಗಳಿಗೆ ಕಾಣುವುದಿಲ್ಲ. ಸಾರ್ವಜನಿಕರಿಗೆ ಕೇಳಲು ಆಗುವುದಿಲ್ಲ. ಕೇಳಿದರೂ ಸಹ ರಾಜಕಾರಣಿಗಳು ತಲೆಕೆಡಿಸಿಕೊಳ್ಳುವುದಿಲ್ಲ. ಹಾಗಾದರೆ ಮಾಡುವುದೇನು? ಈ ಕೆಲಸ ನಾವು ಅಂದರೆ ಸಾರ್ವಜನಿಕರೇ ಮಾಡಿ ತಗ್ಗು ಗುಂಡಿಗಳನ್ನ ಮುಚ್ಚಬೇಕು. ಇಲ್ಲವಾದಲ್ಲಿ ಅನಾಹುತ ಖಚಿತ. ಹಾಗಾದರೆ ಸಾರ್ವಜನಿಕರು ಈ ಕೆಲಸ ಮಾಡಬೇಕಾ? ಅಥವಾ ಈ ವಿಷಯವನ್ನ ರಾಜಕಾರಣಿಗಳಿಗೆ ತಿಳಿಸಬೇಕಾ? ವೋಟು ಹಾಕಿದ ತಪ್ಪಿಗೆ ಇದನ್ನ ಸಾರ್ವಜನಿಕರೇ ಮಾಡಿಸಿಕೊಳ್ಳಬೇಕು ಎಂದರೆ ನಾವು ಸುರಕ್ಷಿತವಾಗಿರಬೇಕು ಅಲ್ವಾ? ಈ ವಿಡಿಯೋ ನೋಡಿದ ನಂತರ ಯಾರು ಈ ಕೆಲಸಕ್ಕೆ ಮುಂದಾಗುತ್ತಾರೆ ಅಥವಾ ಸರ್ಕಾರದಿಂದ ಆಗುವಂತಹ ಕೆಲಸಗಳನ್ನು ಬೇಗ ಮಾಡಿ ಮುಗಿಸುತ್ತಾರೆ ಎಂಬ ಕುತೂಹಲ ಸಾರ್ವಜನಿಕರಲ್ಲಿ ಮೂಡಿದೆ. ಕಾದುನೋಡಬೇಕು..
