August 4, 2026
Startv News | Hubli | Kannada News
ಅಪರಾಧ ಕರ್ನಾಟಕ ಸುದ್ದಿ ಸುದ್ದಿಗಳು ಸ್ಥಳೀಯ ಹುಬ್ಬಳ್ಳಿ-ಧಾರವಾಡ

ಧಾರವಾಡ: ಪೊಲೀಸರ ಎದುರಿನಲ್ಲಿಯೇ ಪೋಷಕರ ವಿರೋಧದ ನಡುವೆ ಉಮೆಕುಲ್ಸುಮಾ ಕರಿಗಾರ – ಮಂಜುನಾಥ ಮಾಯಕಾರ್ ಮದುವೆ ಮಾಡಿಸಿದ ಭಜರಂಗ ದಳ, ಕಾರಣ?

ಧಾರವಾಡ ತಾಲೂಕಿನ ಬಾಡ ಗ್ರಾಮದ ಮಂಜುನಾಥ ಮಾಯಕಾರ್ ಹಾಗೂ ಅದೇ ಗ್ರಾಮದ ಉಮೆಕುಲ್ಸುಮಾ ಕರಿಗಾರ ಅನ್ನೋ ಯುವಕ-ಯುವತಿ ಹಲವಾರು ವರ್ಷಗಳಿಂದ ಪ್ರೀತಿಸುತ್ತಿದ್ದರು. ಪ್ರೀತಿ ಮನೆಯವರಿಗೆ ಗೊತ್ತಾದಾಗ, ಯುವತಿ ಮನೆಯಿಂದ ವಿರೋಧ ವ್ಯಕ್ತವಾಗಿತ್ತು. ಈ ಹಿನ್ನೆಲೆ ಪರಸ್ಪರ ರಿಜಿಸ್ಟ್ರಾರ್ ವಿವಾಹಕ್ಕೆ ಅರ್ಜಿಯನ್ನು ಕೂಡ ಸಲ್ಲಿಸಿದರು. ಬಳಿಕ ಯುವತಿ ಮನೆ ಬಿಟ್ಟು ಯುವಕನ ಬಳಿ ಓಡಿ ಬಂದಳು. ಈ ಸುದ್ದಿ ತಿಳಿದ ಬಳಿಕ ಯುವತಿ ಮನೆಯವರು ತಮ್ಮ ಮಗಳನ್ನು ಅಪಹರಣ ಮಾಡಲಾಗಿದೆ ಅಂತಾ ಕೇಸ್ ದಾಖಲಿಸಿದ್ದರು.

ಈ ಹಿನ್ನೆಲೆಯಲ್ಲಿ ಗ್ರಾಮೀಣ ಠಾಣೆ ಪೊಲೀಸರು ಮಂಜುನಾಥನ ಮನೆಯವರನ್ನು ಠಾಣೆಗೆ ಕರೆಯಿಸಿಕೊಂಡು ವಿಚಾರಣೆ ನಡೆಸಿ, ಕಳಿಸಿದ್ದರು. ಮಂಜುನಾಥ ಪೊಲೀಸರಿಂದ ಒತ್ತಡ ಬಂದ ಹಿನ್ನೆಲೆ ಉಮೆಕುಲ್ಸುಮಾಳನ್ನು ಕರೆದುಕೊಂಡು ಠಾಣೆಗೆ ಬಂದಿದ್ದರು. ಈ ವೇಳೆ ಯುವತಿಯನ್ನು ಸಾಂತ್ವನ ಕೇಂದ್ರಕ್ಕೆ ರವಾನಿಸಿದ ಪೊಲೀಸರು, ಯುವಕನನ್ನು ವಶಕ್ಕೆ ಪಡೆದಿದ್ದರು.

ಯುವಕನ ಬಂಧನ ಈ ವಿಷಯ ತಿಳಿದ ತಕ್ಷಣವೇ ಪೊಲೀಸರ ವಿರುದ್ಧ ಠಾಣೆ ಎದುರಿನಲ್ಲಿಯೇ ಬಜರಂಗ ಪ್ರತಿಭಟನೆ ನಡೆಸಿ, ಪೊಲೀಸರ ವಿರುದ್ಧ ಆಕ್ರೋಶ ಹೊರಹಾಕಿತ್ತು. ಯಾವಾಗ ಬಜರಂಗದಳದಿಂದ ಪ್ರತಿಭಟನೆ ಶುರುವಾಯ್ತೋ? ಆಗ ಪೊಲೀಸರು ಅನಿವಾರ್ಯವಾಗಿ ವಶಕ್ಕೆ ಪಡೆದಿದ್ದ ಮಂಜುನಾಥನನ್ನು ಬಿಡಬೇಕಾಯ್ತು. ಅಲ್ಲದೇ ಯಮೆಕುಲ್ಸುಮಾಳರನ್ನು ಸಾಂತ್ವನ ಕೇಂದ್ರದಿಂದ ಕರೆಯಿಸಿ ಪುನಃ ಇಬ್ಬರನ್ನೂ ಒಂದು ಮಾಡಿದರು.

ಈ ಮೂಲಕ ಹಿಂದೂ ಯುವಕ, ಅನ್ಯ ಧರ್ಮಿಯ ಯುವತಿಯನ್ನು ಮದುವೆಯಾದ ಅನ್ನೋ ಕಾರಣಕ್ಕೆ ಅವರಿಬ್ಬರನ್ನೂ ಬೇರ್ಪಡಿಸಲು ಹೋಗಿದ್ದ ಧಾರವಾಡ ಗ್ರಾಮೀಣ ಪೊಲೀಸರಿಗೆ ಬಜರಂಗ ದಳದ ಕಾರ್ಯಕರ್ತರು ಬಿಸಿ ಮುಟ್ಟಿಸಿದ್ದಾರೆ. ಯಾವ ಠಾಣೆಯಿಂದ ಜೋಡಿಯನ್ನು ಬೇರ್ಪಡಿಸಿದ್ದರೋ, ಅದೇ ಠಾಣೆಯಲ್ಲಿ ಪುನಃ ಅವರನ್ನು ಒಂದಾಗಿಸಿ, ರಕ್ಷಣೆ ಕೊಟ್ಟು ಕಳುಹಿಸಿದ್ದಾರೆ.

ಪೊಲೀಸ್ ಠಾಣೆ ಎದುರಿನಲ್ಲಿಯೇ ತಾಳಿ ಕಟ್ಟುತ್ತಿರುವ ಯುವಕ ಠಾಣೆಯ ಅಂಗಳದಲ್ಲಿಯೇ ಹಾರ ಬದಲಾವಣೆ, ಠಾಣೆಯ ಎದುರಿನಲ್ಲಿಯೇ ಮೊಳಗಿದ ಮಾಂಗಲ್ಯ ಧಾರಣೆಯ ಮಂತ್ರ ಮತ್ತು ಜೈ ಶ್ರೀರಾಮ ಘೋಷಣೆ ಇಂಥ ಅಪರೂಪದ ಘಟನೆಗೆ ಸಾಕ್ಷಿಯಾಗಿದ್ದು ಧಾರವಾಡದ ಗ್ರಾಮೀಣ ಪೊಲೀಸ್ ಠಾಣೆ ನಡೆಯಿತು.

Share

Related posts

Yadgir: ಚಂದ್ರಯಾನ-3 ಯಶಸ್ವಿಯಾದ ಹಿನ್ನಲೆಯಲ್ಲಿ, ಮಕ್ಕಳಿಗೆ ವಿಕ್ರಮ್‌-ಪ್ರಗ್ಯಾನ್‌ ಎಂದು ನಾಮಕರಣ!

admin

ಹುಬ್ಬಳ್ಳಿಯ ಟೌನ್ ಪೊಲೀಸ್ ಠಾಣೆ ಎದುರಿಗೆ ಬಿಜೆಪಿ ನಾಯಕರು ಹಾಗೂ ಹಿಂದೂ ಕಾರ್ಯಕರ್ತರ ಬೃಹತ್ ಪ್ರತಿಭಟನೆ.! ಪೂರ್ತಿ ವಿಡಿಯೋ ನೋಡಿ.

admin

ಶಿಕ್ಷಣ ಇವತ್ತಿನ ದಿವಸ ಬಿಸಿನೆಸ್ ಆಗಿದ್ದೇಕೆ? ಬಡವರ ಮಕ್ಕಳ ಶಿಕ್ಷಣದ ಗತಿ ಏನು? ಇನ್ನಷ್ಟು ದುಬಾರಿ? ನಮ್ಮ ಸರ್ಕಾರ ಖಾಸಗಿ ಶಾಲೆಯ ಶುಲ್ಕ ಕ್ಕೇ ಕಡಿವಾಣ ಏಕೆ ಹಾಕುತ್ತಿಲ್ಲ?

admin

Leave a Comment