August 4, 2026
Startv News | Hubli | Kannada News
ಕರ್ನಾಟಕ ಸುದ್ದಿ ವಿಶೇಷ ವರದಿ

2975 ಕೆಪಿಟಿಸಿಎಲ್‌ ಹುದ್ದೆ, ಎಸ್‌ಎಸ್‌ಎಲ್‌ಸಿ ಪಾಸಾದ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ನವೆಂಬರ್ 20 ರವರೆಗೆ ಅರ್ಜಿ ಸಲ್ಲಿಸಬಹುದು ಅಪ್ಲಿಕೇಶನ್‌ ಶುಲ್ಕ ವಿವರ.!

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ನೇಮಕ.
ಇಂದಿನಿಂದ 2975 ಹುದ್ದೆಗೆ ಅರ್ಜಿ ಸ್ವೀಕಾರ.
ಅರ್ಜಿ ಸಲ್ಲಿಸಲು ನವೆಂಬರ್ 20 ಕೊನೆ ದಿನ.

ವಿದ್ಯುತ್ ಪ್ರಸರಣ ನಿಗಮ ನಿಯಮಿತವು 2975 ಹುದ್ದೆಗಳ ಭರ್ತಿಗೆ ಸಂಬಂಧ, ಇಂದಿನಿಂದ ಅರ್ಹರಿಂದ ಅರ್ಜಿ ಸ್ವೀಕಾರ ಮಾಡಲಿದೆ. ಆಸಕ್ತರು ಆಕ್ಟೋಬರ್ 21 ರಿಂದ ನವೆಂಬರ್ 20 ರವರೆಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಹಾಕುವ ವಿಧಾನ, ಇತರೆ ಡೀಟೇಲ್ಸ್ ಇಲ್ಲಿ ನೀಡಲಾಗಿದೆ. ಎಸ್‌ಎಸ್‌ಎಲ್‌ಸಿ ಪಾಸಾದವರು ಈ ಸರ್ಕಾರಿ ಉದ್ಯೋಗ ಅವಕಾಶವನ್ನು ಮಿಸ್‌ ಮಾಡದೇ ಪಡೆಯಲು ಪ್ರಯತ್ನಿಸಿ.

ಆಸಕ್ತರು ಆನ್‌ಲೈನ್‌ ಮೂಲಕ ನವೆಂಬರ್ 20 ರವರೆಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಬಯಸುವ ಎಸ್‌ಎಸ್‌ಎಲ್‌ಸಿ ಪಾಸಾದ ಅಭ್ಯರ್ಥಿಗಳು ತಮ್ಮ ಅಂಕಪಟ್ಟಿ, ಆಧಾರ್ ಕಾರ್ಡ್‌, ಜಾತಿ ಪ್ರಮಾಣ ಪತ್ರ, ಭಾವಚಿತ್ರ / ಸಹಿ ಸ್ಕ್ಯಾನ್‌ ಕಾಪಿಗಳನ್ನು ಮೊದಲು ಸಿದ್ಧತೆ ಮಾಡಿಟ್ಟುಕೊಂಡು, ನಂತರ ಅರ್ಜಿ ಸಲ್ಲಿಸಲು ಮುಂದಾಗಿ. ಅರ್ಜಿ ಸಲ್ಲಿಸುವ ವಿಧಾನವನ್ನು ಕೆಳಗಿನಂತೆ ನೀಡಲಾಗಿದೆ ಚೆಕ್‌ ಮಾಡಿಕೊಳ್ಳಿ.

NOTE: ಕಿರಿಯ ಸ್ಟೇಷನ್‌ ಪರಿಚಾರಕ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವವರು ಕವಿಪ್ರನಿನಿಗೆ ಮಾತ್ರ ಅರ್ಜಿ ಸಲ್ಲಿಸತಕ್ಕದ್ದು.
ಅಭ್ಯರ್ಥಿಗಳು ಒಂದು ಹುದ್ದೆಗೆ ಒಂದು ಅರ್ಜಿಗಿಂತ ಹೆಚ್ಚಿನ ಅರ್ಜಿ ಸಲ್ಲಿಸಿದ್ದಲ್ಲಿ, ಕೊನೆಯದಾಗಿ ಸಲ್ಲಿಸಿದ ಅರ್ಜಿ ಪರಿಗಣಿಸಲಾಗುವುದು.

ಕಿರಿಯ ಸ್ಟೇಷನ್‌ ಪರಿಚಾರಕ, ಕಿರಿಯ ಪವರ್‌ಮ್ಯಾನ್‌ ಹುದ್ದೆಗಳಿಗೆ ಅರ್ಜಿ ವಿಧಾನ

  • ಕೆಪಿಟಿಸಿಎಲ್‌ ಹುದ್ದೆಗೆ ಅರ್ಜಿ ಸಲ್ಲಿಸಲು https://kptcl.karnataka.gov.in ಗೆ ಭೇಟಿ ನೀಡಿ.
  • ತೆರೆದ ವೆಬ್‌ಪೇಜ್‌ನಲ್ಲಿ ‘Recruitment’ ಮೆನು ಆಯ್ಕೆ ಮಾಡಿ.
  • ನಂತರ ಮತ್ತೊಂದು ಹೊಸ ವೆಬ್‌ಪೇಜ್‌ ತೆರೆಯುತ್ತದೆ. ಇಲ್ಲಿ ‘Recruitment 2024’ ಎಂದಿರುವಲ್ಲಿ ಕ್ಲಿಕ್ ಮಾಡಿ.
  • ನಂತರ ತೆರೆದ ವೆಬ್‌ಪೇಜ್‌ನಲ್ಲಿ ‘KPTCL Notification’ ಅಡಿಯಲ್ಲಿ ‘Click here to apply for the post of Junior Station Attendant / Junior Powerman’ ಎಂದಿರುವ ಲಿಂಕ್ ಕ್ಲಿಕ್ ಮಾಡಬೇಕು. ನಂತರ ತೆರೆಯುವ ವೆಬ್‌ಪೇಜ್‌ನಲ್ಲಿ 4 ಹಂತಗಳನ್ನು ಪೂರ್ಣಗೊಳಿಸಬೇಕು.
    ಹಂತ 1 : ಅರ್ಜಿ ಲಿಂಕ್‌ ಕ್ಲಿಕ್ ಮಾಡಿ, ಅರ್ಜಿ ಸಲ್ಲಿಸಿ.
    ಹಂತ 2 : ಭಾವಚಿತ್ರ ಹಾಗೂ ಸಹಿ ಸ್ಕ್ಯಾನ್‌ ಕಾಪಿ ಅಪ್‌ಲೋಡ್‌ ಮಾಡಬೇಕು.
    ಹಂತ 3 : ಅರ್ಜಿ ಶುಲ್ಕ ಅಂಚೆ ಚಲನ್‌ ಜೆನೆರೇಟ್‌ ಮಾಡಿಕೊಳ್ಳಿ. ಅಂಚೆ ಕಚೇರಿಗೆ ಹೋಗಿ ಶುಲ್ಕ ಪಾವತಿಸಿ.
    ಹಂತ 4 : ಶುಲ್ಕ ಪಾವತಿ ನಂತರದಲ್ಲಿ ಅರ್ಜಿ ಪ್ರಿಂಟ್ ತೆಗೆದುಕೊಳ್ಳಿ.

ಕೆಪಿಟಿಸಿಎಲ್ ಹೊರತು ಪಡಿಸಿ ಇತರೆ ವಿದ್ಯುತ್ ಪ್ರಸರಣ ನಿಗಮಗಳ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಭೇಟಿ ನೀಡಬೇಕಾದ ವೆಬ್‌ ವಿಳಾಸಗಳನ್ನು ಕೆಳಗಿನಂತೆ ನೀಡಲಾಗಿದೆ. ಸದರಿ ವೆಬ್‌ಸೈಟ್‌ಗಳಿಗೆ ಭೇಟಿ ನೀಡಿ, ಮೇಲಿನ ವಿಧಾನವನ್ನೇ ಅನುಸರಿಸಿ.
https://bescom.karnataka.gov.in
https://cescmysore.karnataka.gov.in
https://mescom.karnataka.gov.in
https://hescom.karnataka.gov.in
https://gescom.karnataka.gov.in

ಅಪ್ಲಿಕೇಶನ್ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕವಿಪ್ರನಿನಿ ಅಥವಾ ವಿದ್ಯುತ್ ಸರಬರಾಜು ಕಂಪನಿಗಳು, ಇವುಗಳಲ್ಲಿ ಯಾವುದಾದರೂ ಒಂದು ಕಂಪನಿಗೆ ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ಅಪ್ಲಿಕೇಶನ್‌ ಶುಲ್ಕ ವಿವರ
ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ ರೂ.614.
ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ರೂ.614
ಪರಿಶಿಷ್ಟ ಪಂಗಡ/ ಪರಿಶಿಷ್ಟ ಜಾತಿ / ಪ್ರವರ್ಗ-1 ಅಭ್ಯರ್ಥಿಗಳಿಗೆ ರೂ.378.
ವಿಶೇಷ ಚೇತನ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.

ಅಧಿಸೂಚನೆ ಬಿಡುಗಡೆಗೊಂಡ ದಿನಾಂಕ: 14-10-2024
ಆನ್‌ಲೈನ್‌ ಅರ್ಜಿ ಸ್ವೀಕಾರ ಆರಂಭಿಕ ದಿನಾಂಕ: 21-10-2024
ಆನ್‌ಲೈನ್‌ ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 20-11-2024

ಕೆಪಿಟಿಸಿಎಲ್‌ ಹುದ್ದೆಗಳಿಗೆ ಸಂಭಾವನೆ ವಿವರ.!
ಕ್ರೋಡೀಕೃತ ಸಂಭಾವನೆ (ಮೊದಲ 3 ವರ್ಷಗಳು / ಪ್ರತಿ ಮಾಸಿಕ)
1ನೇ ವರ್ಷ : Rs.17,000.
2ನೇ ವರ್ಷ: Rs.19,000.
3ನೇ ವರ್ಷ: Rs.21,000.

3 ವರ್ಷದ ತರಬೇತಿಯನ್ನು ತೃಪ್ತಿಕರವಾಗಿ ಪೂರೈಸಿದ ನಂತರ ಅಭ್ಯರ್ಥಿಗಳನ್ನು ವೇತನ ಶ್ರೇಣಿ ರೂ.28,550-63000 ರಲ್ಲಿ ನಿಯೋಜಿಸಲಾಗುವುದು. ನಂತರ ಇಲ್ಲಿಯೂ ಎರಡು ವರ್ಷಗಳ ಕಾಲ ಪರೀಕ್ಷಾರ್ಥ ಅವಧಿಯಲ್ಲಿ ಇರಿಸಲಾಗುವುದು.

Share

Related posts

ಶಾಸಕರೇ ಜನರ ಸಮಸ್ಯೆ ಬಗ್ಗೆ ಎಚ್ಚರಿಕೆ ಇರಲಿ.! ರೇಷನ್ ಕಾರ್ಡ್ ಕಚೇರಿಗಳಲ್ಲಿ ಸರ್ವರ್ ಸಮಸ್ಯೆ. ಈ ಸಮಸ್ಯೆಗೆ ಪರಿಹಾರ ಇದೆಯಾ? ಬೆಳಿಗ್ಗೆ 7:00 ಗಂಟೆಯಿಂದ Q ಅಲ್ಲಿ ನಿಂತಿದ್ದು ಏಕೆ?

admin

ಹುಬ್ಬಳ್ಳಿ: ಶ್ರೀ ಶಿವಶಂಕರ ಕಾಲೋನಿ, ಶ್ರೀ ಅಯ್ಯಪ್ಪ ಸ್ವಾಮಿಯ ಮಹಾಪೂಜೆ ಅದ್ದೂರಿಯಾಗಿ ನೆರವೇರಿತು. ಪೂರ್ತಿ ವಿಡಿಯೋ ನೋಡಿ.

admin

ಧಾರವಾಡ: ನಾಮಿನಿಗೆ ವಿಮೆ ಹಣ ಕೊಡದ ಇನ್ಷುರನ್ಸ್‌ ಕಂಪನಿಗೆ ಬಿತ್ತು ಭಾರೀ ದಂಡ..!

admin

Leave a Comment