ಪ್ರವಾದಿ ಹಜರತ ಮುಹಮ್ಮದ್ ಪೈಗಂಬರ್ ಕುರಿತು ಅವಹೇಳನಕಾರಿಯಾಗಿ ನಿಂದನೆ ಮಾಡಿ ಶಾಂತಿ ಸುವ್ಯವಸ್ಥೆ ಹಾಗೂ ಸಹೋದರತೆಗೆ ಭಂಗ ತರುವ ದುರುದ್ದೇಶದಿಂದ ಹಾಗೂ ಮುಸ್ಲಿಂರ ಅಸ್ಥಿರತೆ ಯನ್ನು ಪ್ರಶ್ನಿಸುವ ವಿಡಿಯೋ ತುಣುಕನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಉತ್ತರಪ್ರದೇಶದ ಗಾಜಿಯಾಬಾದಿನ ನಿವಾಸಿ ಯಾದ ನರಸಿಂಘಾನಂದನನ್ನು ಬಂಧಿಸುವಂತೆ ಹುಬ್ಬಳ್ಳಿ ಅಂಜುಮನ್ ಸಂಸ್ಥೆ ಆಗ್ರಹಿಸಿದೆ.
ನಗರದ ಮಿನಿ ವಿಧಾನಸೌಧದ್ ಎದುರು ಪ್ರತಿಭಟನೆ ನಡೆಸಿದ ಅಂಜುಮನ್ ಸಂಸ್ಥೆಯ ಪದಾಧಿಕಾರಿಗಳು ಬಳಿಕ ತಹಶೀಲ್ದಾರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಿದರು.
