ಯಾದಗಿರಿ:ಚಂದ್ರಯಾನ-3 ಯಶಸ್ವಿಯಾದ ಹಿನ್ನಲೆಯಲ್ಲಿ ಅದರ ನೆನಪಿಗಾಗಿ ಯಾದಗಿರಿ ಜಿಲ್ಲೆಯ ವಡಗೇರ ಪಟ್ಟಣದಲ್ಲಿ ಒಂದೇ ಕುಟುಂಬದಲ್ಲಿ ಜನಿಸಿದ ಇಬ್ಬರು ಮಕ್ಳಳಿಗೆ ಈ ಹೆಸರನ್ನು ಇಡಲಾಗಿದೆ. ಕಳೆದ ಒಂದು ತಿಂಗಳ ಹಿಂದೆ ಜನಿಸಿರುವ ಎರಡು ಗಂಡು ಮಗುವಿಗೆ ವಿಕ್ರಮ್ ಹಾಗೂ ಪ್ರಗ್ಯಾನ್ ಹೆಸರನ್ನು ಇಡಲಾಗಿದೆ.
ವಿಕ್ರಮ್ ಎನ್ನುವುದು ಚಂದ್ರಯಾನ-3ಯ ಲ್ಯಾಂಡರ್‌ನ ಹೆಸರಾಗಿದ್ದರೆ, ಪ್ರಗ್ಯಾನ್ ಎನ್ನುವುದು ರೋವರ್‌ರ ಹೆಸರಾಗಿದೆ.ಬಾಲಪ್ಪ ಹಾಗೂ ನಾಗಮ್ಮ ದಂಪತಿಯ ಮಗುವಿಗೆ ವಿಕ್ರಮ ಎಂದು ಹೆಸರು ಇಡಲಾಗಿದ್ದರೆ, ನಿಂಗಪ್ಪ ಹಾಗೂ ಶಿವಮ್ಮ ದಂಪತಿಯ ಮಗುವಿಗೆ ಪ್ರಗ್ಯಾನ್ ಎಂದು ನಾಮಕರಣ ಮಾಡಲಾಗಿದೆ. ವಿಕ್ರಮ ಹೆಸರಿನ ಮಗು ಜುಲೈ 28 ರಂದು ಹಾಗೂ ಪ್ರಗ್ಯಾನ್ ಜನಸಿದ್ದು ಅಗಸ್ಟ್ 18 ರಂದು ಜನನವಾಗಿತ್ತು. ಎರಡು ಮಕ್ಕಳ ನಾಮಕರಣವನ್ನು ಆಗಸ್ಟ್ 24 ರಂದು ಮಾಡಲಾಗಿತ್ತು. ಚಂದ್ರಯಾನ-3 ಯಶಸ್ವಿಗೊಳಿಸಿದ ಇಸ್ರೋಗೆ ಅಭಿನಂದನೆ ಸಲ್ಲಿಸಲು ಈ ಹೆಸರನ್ನು ಇಡಲಾಗಿದೆ.
