August 4, 2026
Startv News | Hubli | Kannada News
ಕರ್ನಾಟಕ ಸುದ್ದಿ ವಿಶೇಷ ವರದಿ ಸುದ್ದಿಗಳು

ಆಗಸದಲ್ಲಿ ನಿಂತ ಮಗುವಿನ ಉಸಿರು.. ಬೆಂಗಳೂರು – ದೆಹಲಿ ವಿಮಾನ ತುರ್ತು ಭೂಸ್ಪರ್ಶ.. ಕಂದಮ್ಮನ ಪಾಲಿಗೆ ದೇವರಾದ ವೈದ್ಯರು..

ವಿಮಾನದಲ್ಲಿ 14 ತಿಂಗಳ ಮಗುವಿನ ಹೃದಯ ಸಮಸ್ಯೆ ಇದ್ದು, ಆಕೆಯ ಆರೋಗ್ಯ ಹಠಾತ್ ಹದಗೆಟ್ಟ ಕಾರಣ ವಿಮಾನದಲ್ಲಿದ್ದ ವೈದ್ಯರು ತಕ್ಷಣವೇ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯುಬೇಕಾಗಿದೆ ಎಂದು ಸೂಚಿಸಿದರು. ಹೀಗಾಗಿ ವಿಮಾನಯಾನದ ಮಾರ್ಗವನ್ನು ಬದಲಾಯಿಸಿ ಬೆಂಗಳೂರಿನಿಂದ ನವದೆಹಲಿಗೆ ತೆರಳಬೇಕಿದ್ದ ವಿಸ್ತಾರಾ ವಿಮಾನವನ್ನು ನಾಗಪುರನಲ್ಲಿ ಎಮೆರ್ಜೆನ್ಸಿ ಲ್ಯಾಂಡಿಂಗ್​ ಮಾಡಲಾಗಿತ್ತು.

ದೇವರಾದ ಸಹ ಪ್ರಯಾಣಿಕರು ಮಗುವಿನ ಸ್ಥಿತಿ ಹದಗೆಟ್ಟು ಉಸಿರಾಟ ಸ್ಥಗಿತಗೊಂಡಿದ್ದು, ವಿಮಾನದಲ್ಲಿ ಗೊಂದಲದ ವಾತಾವರಣ ಉಂಟಾಯಿತು. ಕೂಡಲೇ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವೈದ್ಯರ ಜೊತೆ ಸಹ ಪ್ರಯಾಣಿಕರು ಕೈ ಜೋಡಿಸಿದರು. ಅವರು ತಕ್ಷಣ ಮಗುವಿಗೆ ಸಿಪಿಆರ್ ನೀಡಿದರು ಮತ್ತು ಸಾಧ್ಯವಾದಷ್ಟು ಎಲ್ಲ ವೈದ್ಯಕೀಯ ವ್ಯವಸ್ಥೆಗಳನ್ನು ಮಾಡಿದರು. ಸಿಪಿಆರ್​ ಬಳಿಕ ಮಗು ಉಸಿರಾಡತೊಡಗಿದೆ. ಬಳಿಕ ಲಭ್ಯವಿರುವ ಸಂಪನ್ಮೂಲಗಳ ಸಹಾಯದಿಂದ ಎಲ್ಲರೂ 45 ನಿಮಿಷಗಳ ಕಾಲ ಹೆಣ್ಣು ಮಗುವಿಗೆ ಚಿಕಿತ್ಸೆ ನೀಡಲಾಯಿತು.

ತುರ್ತು ಭೂಸ್ಪರ್ಶ ಮಾಡಿದ ವಿಮಾನ ಮಗುವಿನ ಗಂಭೀರ ಸ್ಥಿತಿಯನ್ನು ನೋಡಿದ ವಿಮಾನಯಾನ ತಂಡವು ತುರ್ತು ಭೂಸ್ಪರ್ಶಕ್ಕಾಗಿ ನಾಗ್ಪುರ ವಿಮಾನ ನಿಲ್ದಾಣದ ಅಧಿಕಾರಿಗಳನ್ನು ಸಂಪರ್ಕಿಸಿತ್ತು. ಬಳಿಕ ಅಧಿಕಾರಿಗಳು ತುರ್ತು ಭೂಸ್ಪರ್ಶಕ್ಕೆ ಅನುಮತಿ ನೀಡಿದರು. ವಿಮಾನ ನಿಲ್ದಾಣದಲ್ಲಿ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯಲು ಕಿಮ್ಸ್-ಕಿಂಗ್ಸ್‌ವೇ ಆಸ್ಪತ್ರೆಯ ಆಂಬ್ಯುಲೆನ್ಸ್ ಸಿದ್ಧವಾಗಿ ನಿಂತಿತ್ತು. ವಿಮಾನ ಇಳಿದ ತಕ್ಷಣ ಮಗುವನ್ನು ಆದಷ್ಟು ಬೇಗ ಆಸ್ಪತ್ರೆಗೆ ಕರೆದೊಯ್ಯಲಾಯಿತು.

‘ವೈದ್ಯೋ ನಾರಾಯಣೋ ಹರಿ’ ದೆಹಲಿ ಏಮ್ಸ್ ಕೂಡ ವಿಸ್ತಾರಾ ವಿಮಾನದ ಈ ಘಟನೆಯನ್ನು ಉಲ್ಲೇಖಿಸಿದೆ. ಬಾಲಕಿಯ ಜೀವ ಉಳಿಸಿದ 5 ವೈದ್ಯರು ದೆಹಲಿಯ ಏಮ್ಸ್‌ನಿಂದ ಬಂದವರು. ಅವರ ಹೆಸರುಗಳು ಡಾ. ನವದೀಪ್ ಕೌರ್ (ಅರಿವಳಿಕೆ ವಿಭಾಗ), ಡಾ. ದಮನ್‌ದೀಪ್ ಸಿಂಗ್ (ಕಾರ್ಡಿಯಾಕ್ ರೇಡಿಯಾಲಜಿ), ಡಾ. ರಿಷಭ್ ಜೈನ್ (ಮಾಜಿ AIIMS ರೇಡಿಯಾಲಜಿ), ಡಾ. ಓಶಿಕಾ (sr OBG) ಮತ್ತು ಡಾ. ಅವಿಚ್ಲಾ ತಕ್ಸಕ್ (sr ಕಾರ್ಡಿಯಾಕ್ ವಿಕಿರಣಶಾಸ್ತ್ರ) ಎಂದು ತಿಳಿದುಬಂದಿದೆ.

Share

Related posts

ಶಿಕ್ಷಣ ಇವತ್ತಿನ ದಿವಸ ಬಿಸಿನೆಸ್ ಆಗಿದ್ದೇಕೆ? ಬಡವರ ಮಕ್ಕಳ ಶಿಕ್ಷಣದ ಗತಿ ಏನು? ಇನ್ನಷ್ಟು ದುಬಾರಿ? ನಮ್ಮ ಸರ್ಕಾರ ಖಾಸಗಿ ಶಾಲೆಯ ಶುಲ್ಕ ಕ್ಕೇ ಕಡಿವಾಣ ಏಕೆ ಹಾಕುತ್ತಿಲ್ಲ?

admin

ಹುಬ್ಬಳ್ಳಿ: ಉಣಕಲ್ ಗ್ರಾಮದ ಕುಸ್ತಿ ಪಟು ಕುಮಾರಿ ಸರೋಜ ಅಶೋಕ್ ಚಿಲ್ಲಣವರ್ ಇವತ್ತು ದೆಹಲಿ ಸ್ಪೋರ್ಟ್ಸ್ ಯೂನಿವರ್ಸಿಟಿ ಗೆ ಸೆಲೆಕ್ಷನ್.!

admin

ಧಾರವಾಡ: ಆರಿಫ್ ಗುಡ್ಗಿ ಅವರ ಮನೆಯಲ್ಲಿ ನಾಗರಹಾವು ಪ್ರತ್ಯಕ್ಷವಾಗಿದೆ. ನಜೀರ್ ಎಂಬ ವ್ಯಕ್ತಿ ಹಾವು ಸುರಕ್ಷಿತವಾಗಿ ಹಿಡಿದು ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಯಿತು. Complete Video.

admin

Leave a Comment