ಬಾಯಿ ಬಿಟ್ರೆ ಸುಳ್ಳು ಹೇಳೋರು ಪ್ರಧಾನಿ ಮೋದಿ, ಸುಳ್ಳಿನ ವಿಡಿಯೋಗಳೇ ನಮಗೆ ಅಸ್ತ್ರ ಎಂದ ಸಂತೋಷ್ ಲಾಡ್.!
ಭಾರತೀಯ ಜನತಾ ಪಕ್ಷದವರು ಅವರು ಪಾಕಿಸ್ತಾನ್, ಹಿಂದೂ- ಮುಸ್ಲಿಂ ಬಗ್ಗೆ ಅಷ್ಟೇ ಮಾತನಾಡೋದು ಅವರು ಹಿಂದುತ್ವ ವಾದ ತರ್ತಾರೆ. ಆದರೆ, ನಾವು ಅಂಬೇಡ್ಕರ್- ಬಸವಣ್ಣನವರ ವಾದ ಮುಂಚೂಣಿಗೆ ತರಬೇಕು. ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರ ಫೋಟೋ ಆರ್‌ಎಸ್ಎಸ್ ಕಚೇರಿಯಲ್ಲಿ ಇಟ್ಕೋಬೇಕು ಎಂದು ಹೇಳಿದರು.
ನಮ್ಮ ನಾಯಕ ರಾಹುಲ್ ಗಾಂಧಿ ಅವರಿಗೆ ನಿರಂತರ ಕಿರುಕುಳ ಕೊಟ್ಟಿದ್ದಾರೆ. ಒಬ್ಬರ ವಿರುದ್ಧವೂ ಮಾತನಾಡಲಿಲ್ಲ. ಬುದ್ಧರಂತೆ ರಾಹುಲ್ ಗಾಂಧಿಯವರನ್ನು ನಾವು ಕಾಣಬೇಕು. 2024 ರಾಹುಲ್ ಗಾಂಧಿ ಎಂಬ ಶೀರ್ಷಿಕೆ ಅಡಿ ಕಾಂಗ್ರೆಸ್ ಪದಾಧಿಕಾರಿಗಳ ಸಭೆ ನಡೆಯುತ್ತೆ.

ಪುಲ್ವಾಮ ದಾಳಿಗೆ ಆರ್‌ಡಿಎಕ್ಸ್ ಹೇಗೆ ಬಂತು ಇನ್ನೂ ಈ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ.!
ಪ್ರಧಾನಿ ಮೋದಿಯವರಿಗೆ ಪುಲ್ವಾಮಾ ದಾಳಿಗೆ ಬಗ್ಗೆ ತಮ್ಮದೇ ಭಾಷಣ ಮಾಡುತ್ತಾರೆ. ಈಗ ಜನ ಕೇಳುತ್ತಿದ್ದು, ಮೊದಲು ಹೇಳಬೇಕು. ಸಾಮಾನ್ಯ ವಾಹನದಲ್ಲಿ 300 ಕೆಜಿ ಆರ್‌ಡಿಎಕ್ಸ್ ಹೇಗೆ ಬಂತು ಅಂತಾ ಯಾರೂ ಚರ್ಚಿಸಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶ್ರೀ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಅಭಿವೃದ್ಧಿ ನಿಗಮದ ಆಶ್ರಯದಲ್ಲಿನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿಆಯೋಜಿಸಿದ್ದ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
