August 4, 2026
Startv News | Hubli | Kannada News
ಅಪರಾಧ ಕರ್ನಾಟಕ ಸುದ್ದಿ ವಿಶೇಷ ವರದಿ ಸುದ್ದಿಗಳು

ಬೆಂಗಳೂರು ‘ಬಂದ್‌’ಬಸ್ತ್​ಗೆ ನಿಯೋಜಿಸಿದ್ದ ಪೊಲೀಸ್ ಸಿಬ್ಬಂದಿಗೆ ನೀಡಲಾದ ಆಹಾರದಲ್ಲಿ ಸತ್ತ ಇಲಿ!

ಬೆಂಗಳೂರು: ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುತ್ತಿರುವುದನ್ನು ಖಂಡಿಸಿ ವಿವಿಧ ಸಂಘಟನೆಗಳು ಇಂದು ಬೆಂಗಳೂರು ಬಂದ್​ ನಡೆಸುತ್ತಿವೆ. ಈ ಸಂದರ್ಭದಲ್ಲಿ ಭದ್ರತೆಗೆ ನಿಯೋಜಿಸಲಾಗಿದ್ದ ಪೊಲೀಸ್ ಸಿಬ್ಬಂದಿಗೆ ನೀಡಲಾಗಿದ್ದ ತಿಂಡಿಯಲ್ಲಿ ಇಲಿ ಪತ್ತೆಯಾಗಿದೆ. ಯಶವಂತಪುರ ಸಂಚಾರ ಠಾಣಾ ಸಿಬ್ಬಂದಿಯೊಬ್ಬರು ಪೊಲೀಸ್‌ ಇಲಾಖೆಯಿಂದ ಸರಬರಾಜು ಮಾಡಲಾಗಿದ್ದ ತಿಂಡಿಯ ಪೊಟ್ಟಣ ತೆರೆದಾಗ ಇಲಿ ಕಂಡುಬಂದಿದೆ. ತಕ್ಷಣ ಎಚ್ಚೆತ್ತ ಸಿಬ್ಬಂದಿ ಪೊಲೀಸ್ ಸಿಬ್ಬಂದಿ ಗ್ರೂಪ್‌ನಲ್ಲಿ ವಿಷಯ ತಿಳಿಸಿದ್ದು, ಯಾರೂ ಸಹ ಆ ಆಹಾರ ಸೇವಿಸದಂತೆ ಸೂಚನೆ ನೀಡಿದ್ದಾರೆ.

”ಇಂದು ಬೆಳಿಗ್ಗೆ 7:30ರ ಸುಮಾರಿಗೆ ಬಂದೋಬಸ್ತ್ ಕರ್ತವ್ಯದಲ್ಲಿದ್ದ ಸಂಚಾರಿ ಹಾಗೂ ಕಾನೂನು ಸುವ್ಯವಸ್ಥೆ ವಿಭಾಗದ ಸುಮಾರು 180 ಜನ ಸಿಬ್ಬಂದಿಗಾಗಿ ಯಶವಂತಪುರದ ಹೋಟೆಲ್ ಒಂದರಿಂದ ತಿಂಡಿ ತರಿಸಲಾಗಿತ್ತು. ಈ ಸಂದರ್ಭದಲ್ಲಿ ಸಂಚಾರಿ ಪೊಲೀಸ್ ಸಿಬ್ಬಂದಿಯೊಬ್ಬರಿಗೆ ನೀಡಲಾಗಿದ್ದ ತಿಂಡಿಯಲ್ಲಿ ಸತ್ತ ಇಲಿ ಸಿಕ್ಕಿದೆ. ತಕ್ಷಣ ಅವರು ಇತರೆ ಸಿಬ್ಬಂದಿಯ ಗಮನಕ್ಕೆ ತಂದು ಯಾರೂ ತಿಂಡಿ ಸೇವಿಸದಂತೆ ತಿಳಿಸಿದ್ದಾರೆ. ತಿಂಡಿ ತರಿಸಲಾಗಿದ್ದ ಹೋಟೆಲ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಳ್ಳಲಿದ್ದೇವೆ. ಯಶವಂತಪುರ ಸಂಚಾರ ಠಾಣೆಯ ಇನ್ಸ್‌ಪೆಕ್ಟರ್‌ ವಿರುದ್ಧ ಶಿಸ್ತು ಕ್ರಮ ಜರುಗಿಸಲಿದ್ದೇವೆ” ಎಂದು ಹೇಳಿದರು.

Share

Related posts

ಹುಬ್ಬಳ್ಳಿ: ಕ.ರ.ವೇ ಪ್ರವೀಣ್ ಶೆಟ್ಟಿ ಬಣ ದಿಂದ ಪ್ರತಿಭಟನೆ! ಹು-ಧಾ ಪೊಲೀಸ್ ಕಮಿಷನರ್ ವರ್ಗಾವಣೆ ಮಾಡಬೇಕೆಂದು ಆಗ್ರಹ!

admin

ವಿದ್ಯಾರ್ಥಿಗಳು ಹೇಳಲಾಗದ ಪರಿಸ್ಥಿತಿ! ದೂರು ನೀಡಿದರೆ ಹೆದರಿಕೆ! ಆಹಾರದಲ್ಲಿ ಹುಳಗಳು. ಹುಬ್ಬಳ್ಳಿಯ ವಿಜಯನಗರದಲ್ಲಿ ಎನಿದು ಸಮಸ್ಯೆ?

admin

Famous actress Jayaprada sentenced to 6 months in jail.?

admin

Leave a Comment