
ಹುಬ್ಬಳ್ಳಿಯ ಹೆಗ್ಗೇರಿ ನಗರದ ನಿವಾಸಿ ರವಿ ವನಪ್ರತಿ ಎಂಬ ಯುವಕ ಸುಮಾರು ವರ್ಷಗಳಿಂದ ವೈದ್ಯರ ಹತ್ತಿರ ತನ್ನ ಎಲುಬಿನ ಚಿಕಿತ್ಸೆ ಪಡೆದರು ಸಹ, ಸಾಕಷ್ಟು ಔಷಧಿ ಹಾಗೂ ಇನ್ನಿತರ ವೈದ್ಯಕೀಯ ಸಲಹೆಗಳನ್ನ ಒಳಗೊಂಡರು ಸಹ ಫಲಕಾರಿ ಆಗಲಿಲ್ಲ. 8 ರಿಂದ 10 ಲಕ್ಷದವರೆಗೆ ವೈದ್ಯರ ಶುಲ್ಕಗಳನ್ನು ಕಟ್ಟಿದ್ದಾನೆ.
ಒಂದು ದಿನ ತನ್ನ ಅಂಗಡಿಯಲ್ಲಿ ಕೆಲಸ ಮಾಡುತ್ತಿರುವಾಗ ಇಬ್ಬರು ಗ್ರಾಹಕರು ಬಂದು ಏನಾಗಿದೆ ಎಂದು ಕೇಳಿದಾಗ ತನ್ನ ಸಮಸ್ಯೆ ಯನ್ನು ಹೇಳಿಕೊಂಡಿದ್ದಾನೆ, ಆಗ ತೌಸಿಫ್ ಅಹಮದ್ ಪಿ ಟಿ ಎಂಬ ವ್ಯಕ್ತಿ ತನ್ನ ಬಾಲ್ಯದಲ್ಲಿ ತಾತನ ಹತ್ತಿರ ಪಡೆದುಕೊಂಡಂತಹ ತರಬೇತಿಯ ಪ್ರಕಾರ ಮಸಾಜ್ ಮೂಲಕ ಹದಿನೈದು ದಿನದ ಒಳಗಡೆ ಎಂಟು ವರ್ಷದಿಂದ ಸಿಗದ ಸಮಸ್ಯೆಗೆ ಪರಿಹಾರ ಆಗದ ಕೆಲಸ 15 ದಿನಗಳಲ್ಲಿ ರವಿ ವನಪ್ರತಿ ವ್ಯಕ್ತಿಯ ಆರೋಗ್ಯ ಸರಿಪಡಿಸಿದ್ದಾರೆ.
ಈ ಸಂತೋಷದಿಂದ ರವಿ ವನಪ್ರತಿ ಹೆಗ್ಗೇರಿ ಹುಬ್ಬಳ್ಳಿಯ ವ್ಯಕ್ತಿ ಅನಾಥ ಮಕ್ಕಳ, ಅನಾಥ ಜನರ ಆಶ್ರಮದಲ್ಲಿ ಖುಷಿಯನ್ನು ಹಂಚಿ ತೋಸೀಫ್ ಅಹಮದ್ ಪಿಟಿ ಅವರಿಗೆ ಈ ಮೂಲಕ ಧನ್ಯವಾದವನ್ನ ಅರ್ಪಿಸಿದ್ದಾನೆ.
