August 4, 2026
Startv News | Hubli | Kannada News
ಅಪರಾಧ ವಿಶೇಷ ವರದಿ ಸುದ್ದಿಗಳು ಹುಬ್ಬಳ್ಳಿ-ಧಾರವಾಡ

ಹುಬ್ಬಳ್ಳಿ: ಇರುವೆಗಳ ಕಾಟಕ್ಕೆ ಮಗು ಆಕ್ರಂದನ, ಆಚೆ ಬಂದು ನೋಡಿದರೆ ಕಬ್ಬಿನ ಗದ್ದೆಯಲ್ಲಿ ಗಂಡು ಶಿಶು ಪತ್ತೆ

ಧಾರವಾಡ ಜಿಲ್ಲೆಯ ಕಲಘಟಗಿ ಪಟ್ಟಣದ ಹೊರ ವಲಯದ ಕೆಇಬಿ ಗ್ರೀಡ್ ಬಳಿಯ ಕಬ್ಬಿನ ಗದ್ದೆಯೊಂದರಲ್ಲಿ (Sugarcane Field) ನವಜಾತ ಶಿಶು ಪತ್ತೆಯಾಗಿದೆ. ಕಬ್ಬಿನ ಗದ್ದೆಯಲ್ಲಿಯೇ ಗಂಡು ಮಗುವಿಗೆ ಜನ್ಮ ನೀಡಿ ತಾಯಿ ಪರಾರಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯ ಶಿಶು ಅಳುತ್ತಿದ್ದ ಸದ್ದು ಕೇಳಿದ ಗದ್ದೆಯ ಪಕ್ಕದ ಮನೆಯವರು ಶಿಶುವನ್ನು ರಕ್ಷಿಸಿ ಆರೈಕೆ ಮಾಡಿದ್ದಾರೆ. ಗದ್ದೆಯಲ್ಲಿ ಸಿಕ್ಕ ಗಂಡು ಮಗು ಅಂದಾಜು ಮೂರು ಕೆಜಿ ತೂಕವಿದೆ.

ಶಿಶುವಿಗೆ ಇರುವೆಗಳು ಕಚ್ಚಲು ಆರಂಭಿಸಿದಾಗ ಮಗು ಅಳಲು ಆರಂಭಿಸಿತ್ತು. ಆಗ ಶಿಶುವಿನ ಧ್ವನಿ ಕೇಳಿಸಿಕೊಂಡ ಕಬ್ಬಿನ ಗದ್ದೆಯ ಪಕ್ಕದ ಮನೆಯವರು ಶಿಶು ರಕ್ಷಿಸಿ ಆರೈಕೆ ಮಾಡಿದ್ದಾರೆ. ನಂತರ ಮಗುವಿಗೆ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ಬಳಿಕ ಜಿಲ್ಲಾ ಶಿಶುಪಾಲನಾ ಕೇಂದ್ರಕ್ಕೆ ಶಿಶುವನ್ನು ರವಾನಿಸಲಾಗಿದೆ. ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share

Related posts

ಮಾನವೀಯತೆ ಮೆರೆದ ಆಟೋ ಚಾಲಕ ಹಿಂತಿರುಗಿಸಿದ ಲ್ಯಾಪ್ಟಾಪ್ LAPTOP BAG. ಮಿಶ್ರೀಕೋಟಿ ಹಳ್ಳಿಯ ಚಂದ್ರಕಾಂತ್.!

admin

ಹುಬ್ಬಳ್ಳಿ: ಬಕ್ರೀದ್ ಹಬ್ಬದ ಸಿದ್ಧತೆ, ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಹಾಗೂ ಡಿಸಿಪಿ ಶೃತಿ ಪರಿಶೀಲನೆ.!

admin

ಹುಬ್ಬಳ್ಳಿ: 3.2 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದು ದೋಚಿಕೊಂಡು ಪರಾರಿ.

admin

Leave a Comment