ಹುಬ್ಬಳ್ಳಿಯಲ್ಲಿ ಅಣ್ಣ ತಮ್ಮಂದಿರ ನಡುವೆ ಗಲಾಟೆಯಾಗಿ ಮಧ್ಯ ಪಾನದ ಅಮಲಿನಲ್ಲಿ ಪ್ರದೀಪ್ ಪೂಜಾರ್ ಎಂಬ ವ್ಯಕ್ತಿ ತನ್ನ ಸ್ವಂತ ಅಣ್ಣನೊಂದಿಗೆ ವಾಗ್ವಾದ ಮಾಡಿ ಚಾಕುವಿನಿಂದ ಗಂಭೀರ ಗಾಯಗೊಳಿಸಿದ ಪ್ರಕರಣ ಶಿವಶಂಕರ್ ಕಾಣೆಯಲ್ಲಿ ಗುರುವಾರ ನಡೆದಿದೆ.
ಮಲ್ಲೇಶ್ ಪೂಜಾರಿ ಎಂಬ ವ್ಯಕ್ತಿ ಗಾಯಗೊಂಡಿದ್ದು ಅವರನ್ನು ಚಿಕಿತ್ಸೆಗೆ ಕೆಎಂಸಿಆರಐ ಆಸ್ಪತ್ರೆಗೆ ದಾಖಲಿಸಲಾಗಿದೆ. ತಮ್ಮನಾದ ಪ್ರದೀಪ್ ಪೂಜಾರ್ ಅಣ್ಣನಾದ ಮಲ್ಲೇಶ್ ಪೂಜಾರ್ ನಿಗೇ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ. ಹಳೆ ಹುಬ್ಬಳ್ಳಿಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದೆವರೆದಿದೆ.
