August 3, 2026
Startv News | Hubli | Kannada News
ಕರ್ನಾಟಕ ಸುದ್ದಿ ವಿಶೇಷ ವರದಿ ಸ್ಥಳೀಯ ಹುಬ್ಬಳ್ಳಿ-ಧಾರವಾಡ

ಹುಬ್ಬಳ್ಳಿ-ಧಾರವಾಡದಲ್ಲಿ ಬಿಆರ್‌ಟಿಎಸ್‌ ಸೂಕ್ತ ನಿರ್ವಹಣೆ ಇಲ್ಲದೇ ಬಸ್‌ಗಳಿಗೆ ಬಿಡಿ ಭಾಗಗಳ ಕೊರತೆ, ನಿತ್ಯ 2-3 ಬಸ್‌ಗಳು ಗ್ಯಾರೇಜ್‌ ಸೇರುತ್ತಿವೆ.

ಹುಬ್ಬಳ್ಳಿ: ಸೂಕ್ತ ನಿರ್ವಹಣೆ ಇಲ್ಲದೇ ಎಲ್ಲೆಂದರಲ್ಲಿ ಕೆಟ್ಟು ನಿಲ್ಲುತ್ತಿರುವ ಬಿಆರ್‌ಟಿಎಸ್‌ ಬಸ್‌ಗಳಿಗೆ ಬಿಡಿ ಭಾಗಗಳ ಕೊರತೆ ಎದುರಾಗಿದ್ದು, ಚಿಗರಿ ಸೇವೆ ದಿನದಿಂದ ದಿನಕ್ಕೆ ತನ್ನ ಅಸ್ತಿತ್ವ ಕಳೆದುಕೊಳ್ಳತ್ತ ಸಾಗಿದೆ. ಚಿಗರಿ ಬಸ್‌ಗಳಲ್ಲಿತಾಂತ್ರಿಕ ಸಮಸ್ಯೆಗಳು ಸಾಮಾನ್ಯ ಎಂಬಂತಾಗಿದೆ. ಅವಳಿ ನಗರದ ಎರಡು ಡಿಪೋದಲ್ಲಿಒಟ್ಟು 100 ಬಸ್‌ಗಳ ಪೈಕಿ 80 ಬಿಆರ್‌ಟಿಎಸ್‌ ಬಸ್‌ಗಳು ಮಾತ್ರ ನಿತ್ಯದ ಶೆಡ್ಯೂಲ್‌ ಆಧಾರದಲ್ಲಿಕಾರ್ಯಾಚರಣೆ ಮಾಡುತ್ತಿವೆ. ಅದರಲ್ಲಿದಿನಕ್ಕೆ ಕನಿಷ್ಠ 2-3 ಬಸ್‌ಗಳು ರಸ್ತೆಯ ಮಧ್ಯದಲ್ಲಿಯೇ ಕೆಟ್ಟು ನಿಲ್ಲುತ್ತಿವೆ. ಮತ್ತೆ ಕೆಲವು ದುರಸ್ತಿಗೆ ಹೋಗಿ ತಿಂಗಳು ಕಳೆದರೂ ಮರಳುವುದಿಲ್ಲ. ಇದು ಪ್ರಯಾಣಿಕರು ಹಾಗೂ ಚಾಲಕರ ಅಸಮಧಾನಕ್ಕೆ ಕಾರಣವಾಗುತ್ತಿದೆ.

ಐದು ವರ್ಷಗಳಿಂದ ಬಿಡಿ ಭಾಗಗಳಿಗಾಗಿ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಶೇ.90ರಷ್ಟು ಬಸ್‌ಗಳ ಎಸಿಗಳು ಸ್ಥಗಿತಗೊಂಡಿವೆ. 60ಕ್ಕೂ ಹೆಚ್ಚು ಬಸ್‌ಗಳು ದುರಸ್ತಿಗೆ ಬಂದಿವೆ ಎಂದು ಹೇಳಲಾಗುತ್ತಿದೆ.

ಆರಂಭಿಕ ವರ್ಷದಿಂದ ಒಂದೇ ಒಂದು ಬಿಡಿಭಾಗವನ್ನು ಇಲಾಖೆ ಖರೀದಿಸಿ ಕೊಟ್ಟಿಲ್ಲ. ಪ್ರಮುಖ ಬಿಡಿ ಭಾಗಗಳನ್ನು ಆರ್ಡರ್‌ ಮಾಡಿ ಐದು ವರ್ಷಗಳು ಕಳೆದರೂ ಇಂದಿಗೂ ಅವುಗಳ ಪೂರೈಕೆಯಾಗಿಲ್ಲ. ಈ ಕುರಿತು ಬಿಡಿ ಭಾಗಗಳ ಸರಬರಾಜು ಕಂಪನಿಗೆ ಹಾಗೂ ಬಿಆರ್‌ಟಿಎಸ್‌ ಸಂಸ್ಥೆಯ ಅಕಾರಿಗಳಿಗೆ ಕರೆ ಮಾಡಿದರೆ,” ದೇಶದಲ್ಲಿಯೇ ಕೇವಲ 104 ಮಾತ್ರ ಚಿಗರಿ ಬಸ್‌ಗಳು ಸಂಚಾರ ನಡೆಸುತ್ತಿವೆ. ಅದರಲ್ಲಿ100 ಹು-ಧಾ ಹಾಗೂ ಉಳಿದ ನಾಲ್ಕು ರಾಜ್ಯದ ವಿವಿಧ ವಿಮಾನ ನಿಲ್ದಾಣದಲ್ಲಿ ಕಾರ್ಯನಿರ್ವಹಿಸುತ್ತಿವೆ.

ಬಸ್‌ಗಳಿಗೆ ಚೀನಾ ದೇಶದಿಂದ ಬಿಡಿಭಾಗಗಳನ್ನು ಆಮದು ಮಾಡಿಕೊಳ್ಳಬೇಕಾಗಿದೆ. ಮೇಲಧಿಕಾರಿಗಳಿಗೆ ಹಲವಾರು ಬಾರಿ ಪತ್ರ ಹಾಗೂ ಇಮೇಲ್‌ ಮೂಲಕ 10 ಕೋಟಿ ಮೌಲ್ಯದ ಬಿಡಿ ಭಾಗಗಳನ್ನು ತುರ್ತಾಗಿ ಪೂರೈಸುವಂತೆ ಮನವಿ ಮಾಡಿದ್ದೇವೆ. ಹಣಕಾಸು ಇಲಾಖೆ ಕಾರ್ಯದರ್ಶಿ ಬಳಿ ಅರ್ಜಿ ಪೆಂಡಿಂಗ್‌ ಇದ್ದು, ಸದ್ಯದಲ್ಲಿಯೇ ಅನುಮೋದನೆ ಸಿಗುತ್ತದೆ ಎಂದು ಅಕಾರಿಗಳು ಹೇಳುತ್ತಲೇ ಬರುತ್ತಿದ್ದಾರೆ. ಆದರೆ ಅದು ಇಂದಿಗೂ ಕಾರ್ಯರೂಪಕ್ಕೆ ಬರುತ್ತಿಲ್ಲ”ಎಂಬುದು ಬಿಆರ್‌ಟಿಎಸ್‌ ನಿರ್ವಹಣೆ ಹೊಣೆ ಹೊತ್ತಿರುವ ವಾಯವ್ಯ ಸಾರಿಗೆ ಸಂಸ್ಥೆಯ ಅಕಾರಿಗಳ ಅಸಮಾಧಾನವಾಗಿದೆ.

ಎಸಿ ಹಾಗೂ ಉಸಿರಾಟಕ್ಕೆ ಕಿಟಕಿ ಇಲ್ಲದೇ ಪ್ರಯಾಣಿಕರು ಪರದಾಡುವಂತಾಗಿದ್ದು, ನಿತ್ಯ ಚಾಲಕರು ಹಾಗೂ ಪ್ರಯಾಣಿಕರ ಮಧ್ಯೆ ಜಗಳ ಸಾಮಾನ್ಯವಾಗಿದೆ.

10ಕ್ಕೂ ಹೆಚ್ಚು ಬಸ್‌ಗಳು ದುರಸ್ತಿಯಾಗದೇ ಮೂಲೆ ಗುಂಪಾಗಿವೆ. ಬಸ್‌ನ ಬಿಡಿ ಭಾಗಗಳು ಇಲ್ಲದೇ ಎಂಜಿನ್‌ ಆಯಿಲ್‌, ಎಸಿ ಗ್ಯಾಸ್‌ ಕಿಟ್‌, ಕ್ಲಚ್‌ಪ್ಲೇಟ್‌, ಎಲೆಕ್ಟ್ರಿಕಲ್‌ ವೈರಿಂಗ್‌, ಟಾಯರ್‌, ಬ್ರೇಕ್‌ ಪ್ಯಾಡ್‌, ರೇಡಿಯೇಟರ್‌ ದುರಸ್ತಿ ಮಾಡಲು ಸಾಧ್ಯವಾಗುತ್ತಿಲ್ಲ. ಈ ಮಧ್ಯೆ ಸಾಮಾನ್ಯ ಬಸ್‌ನ ಟೈರ್‌ ಸೇರಿದಂತೆ ಕೆಲ ಬಿಡಿ ಭಾಗಗಳನ್ನು ಚಿಗರಿ ಬಸ್‌ಗೆ ಅಳವಡಿಸುವ ಮೂಲಕ ತಾತ್ಕಾಲಿಕವಾಗಿ ಬಸ್‌ ಸೇವೆ ದೊರೆಯುವಂತೆ ಮಾಡಲಾಗುತ್ತಿದೆ.

ಚಿಗರಿ ಬಸ್‌ಗೆ ಪ್ರಮುಖವಾಗಿ ಎಸಿ, ಎಂಜಿನ್‌, ಐಟಿಎಸ್‌ ಸಿಸ್ಟ್‌ಂ, ರೇಡಿಯೇಟರ್‌, ಗೇರ್‌ ಬಾಕ್ಸ್‌, ಕ್ಲಚ್‌ ಮತ್ತು ಬ್ರೇಕ್‌ ಪ್ಯಾಡ್‌ಗಳು, ವೈಪರ್‌, ಹೆಡ್‌ಲೈಟ್‌, ಎಸಿ ಗ್ಯಾಸ್‌, ಟೈರ್‌ಗಳು, ಬ್ಯಾಟರಿ, ಓರಿಂಗ್‌ಗಳು, ನಿಲ್ದಾಣದ ಬಗ್ಗೆ ಮಾಹಿತಿ ನೀಡುವ ಅನೌನ್ಸ್‌ಮೆಂಟ್‌ ಸಿಸ್ಟಮ್‌ ಹಾಗೂ ಸೆನ್ಸಾರ್‌ ಸಂವಹನ ಯಂತ್ರಗಳು ಸೇರಿದಂತೆ ಒಟ್ಟು 10 ಕೋಟಿಗೂ ಅಕ ಮೌಲ್ಯದ ಬಿಡಿ ಭಾಗಗಳನ್ನು ಪೂರೈಸುವಂತೆ ಸಾರಿಗೆ ಇಲಾಖೆ ಅಕಾರಿಗಳು ಸರಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.

ಚಿಗರಿ ಬಸ್ ಸೌಲಭ್ಯ ಹುಬ್ಬಳ್ಳಿ ಧಾರವಾಡ ಗೆ ಅವಶ್ಯಕತೆ ಇದೆಯಾ ಎಂಬುದು ಸಾರ್ವಜನಿಕರ ಕಾಮೆಂಟ್ ಮೂಲಕ ತಿಳಿಸಿ.

Share

Related posts

ಹುಬ್ಬಳ್ಳಿ: ಶ್ರೀ ಸಂತೋಷ್ ಲಾಡ್ ಅವರಿಗೆ ಮುಗಿಲು ಮುಟ್ಟುವಂತಹ ಹೂವಿನ ಹಾರದೊಂದಿಗೆ, ಕುದುರೆ ಸವಾರಿಯನ್ನ ಆಯೋಜಿಸಿ, ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಜಯೋತ್ಸವದ ಕಾರ್ಯಕ್ರಮ!

admin

8 ವರ್ಷ ದಿಂದ ವೈದ್ಯರಿಂದ ಆಗದ ಕೆಲಸ ಸಾಮಾನ್ಯ ವ್ಯಕ್ತಿಯಿಂದ ಚಿಕಿತ್ಸೆ.! ಅವರೇ ತೌಸಿಫ್ ಪೀ ಟಿ.. ಏನಿದು ಅದ್ಭುತ ಪವಾಡ .?

admin

ಹುಬ್ಬಳ್ಳಿ: ಹಜರತ್ ಭಾಷಾ ಖಾದ್ರಿ ಆಶ್ತಾನಾ ದಲ್ಲಿ ಎಂದು ನೋಡದ ಮುಸ್ಲಿಂ ಕಾನ್ಫರೆನ್ಸ್! ಸಿ ಎಂ ಸಿದ್ದರಾಮಯ್ಯ ಅವರ ವಿಶೇಷ ಪ್ರವೇಶ.

admin

Leave a Comment