August 3, 2026
Startv News | Hubli | Kannada News
Uncategorized ಅಂತಾರಾಷ್ಟ್ರೀಯ ಕರ್ನಾಟಕ ಸುದ್ದಿ ಸುದ್ದಿಗಳು ಸ್ಥಳೀಯ ಹುಬ್ಬಳ್ಳಿ-ಧಾರವಾಡ

ಹುಬ್ಬಳ್ಳಿ: ಅರ್ಬಾಜಖಾನ್, ಅಮೀಷಾ ಪಟೇಲ್ – ನ್ಯಾಷನಲ್ ಪ್ರೆಸ್ಟೀಜ್ ಅವಾಡ್ರ್ಸ್‍ನ್ನು ಸ್ವರ್ಣ ಸಮೂಹ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಾ.ವಿಎಸ್‍ವಿ ಪ್ರಸಾದ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿದರು.

ಸನ್ಮಾನ ಎಂದರೆ ವೃತ್ತಿಪರತೆಯ ಮೌಲ್ಯ ವರ್ಧನೆಯ ಸಾಮಾಜಿಕ ಉನ್ನತೀಕರಣದ ಕಾರ್ಯ ಡಾ. ವಿಎಸ್‍ವಿ ಪ್ರಸಾದ
ಹುಬ್ಬಳ್ಳಿ ಸಾಧಕರನ್ನು ಸನ್ಮಾನಿಸುವುದೆಂದರೆ ಅದು ಅವರ ಕಾFCCರ್ಯವನ್ನು ಗುರುತಿಸಿ ಗೌರವ ನೀಡುವುದಷ್ಟೇ ಅಲ್ಲ ಅವರ ಸಾಧನೆ ಇನ್ನೊಬ್ಬರಿಗೆ ಪ್ರೇರಣೆಯಾಗಲಿ, ಸಾಧಕರು ಇನ್ನೂ ಹೆಚ್ಚಿನ ಸಾಧನೆ ಮಾಡುವ ಮೂಲಕ ಸಮಾಜಕ್ಕೆ ಇನ್ನಷ್ಟು ಕೊಡುಗೆ ನೀಡುವಂತಾಗಲಿ ಎಂಬ ಧ್ಯೇಯದೊಂದಿಗೆ ಏರ್ಪಡಿಸಲಾಗುವ ವೃತ್ತಿಪರತೆಯ ಮೌಲ್ಯ ವರ್ಧನೆಯ ಸಾಮಾಜಿಕ ಉನ್ನತೀಕರಣದ ಕಾರ್ಯವಾಗಿದೆ ಎಂದು ಇಲ್ಲಿನ ಸ್ವರ್ಣ ಸಮೂಹ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಾ.ವಿಎಸ್‍ವಿ ಪ್ರಸಾದ ತಮ್ಮ ಅಭಿಪ್ರಾಯ ವ್ಯಕ್ತಡಿಸಿದರು.
ನಗರದ ಡೆನಿಸನ್ಸ್ ಹೋಟೆಲ್‍ನಲ್ಲಿ ಯುನೈಟೆಡ್ ಸ್ಟೇಟ್ಸ್(ಅಮೇರಿಕಾ)ನಲ್ಲಿ ನೋಂದಾಯಿತ ಗ್ಲೋಬಲ್ ರಿಸರ್ಚ್ ಫೌಂಡೇಶನ್ ಎಲ್‍ಎಲ್‍ಸಿಯ ಶೈಕ ್ಷಣಿಕ ಸಂಸ್ಥೆಯಿಂದ ಹಮ್ಮಿಕೊಂಡಿದ್ದ ಜಾಗತಿಕವಾಗಿ ವೈವಿಧ್ಯಮಯ ಕ್ಷೇತ್ರಗಳಲ್ಲಿ ಕಾರ್ಯನಿರತ ವೃತ್ತಿಪರರನ್ನು ಗುರುತಿಸ, ಗೌರವಿಸುವ ನ್ಯಾಷನಲ್ ಪ್ರೆಸ್ಟೀಜ್ ಅವಾಡ್ರ್ಸ್ – 2026ರ ಅದ್ಧೂರಿ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಈ ಸಂಸ್ಥೆಯು ಅಸಾಧಾರಣ ನಾಯಕತ್ವ, ನಾವೀನ್ಯತೆ, ಪರಿಣತಿ ಮತ್ತು ತಮ್ಮ ವೃತ್ತಿಪರ ಕ್ಷೇತ್ರಗಳು ಮತ್ತು ಸಮಾಜಕ್ಕೆ ಅತ್ಯುತ್ತಮ ಕೊಡುಗೆ ನೀಡುವ ವ್ಯಕ್ತಿಗಳಿಗೆ ಗೌರವ ಡಾಕ್ಟರೇಟ್ ಪದವಿಗಳನ್ನು ನೀಡುತ್ತಿದೆ. ಸಮಗ್ರ ಶೈಕ್ಷಣಿಕ ಅರ್ಹತೆ ಮತ್ತು ಅಂತಾರಾಷ್ಟ್ರೀಯ ಮಾನದಂಡಗಳಿಗೆ ಬದ್ಧತೆಯೊಂದಿಗೆ ಜಾಗತಿಕ ಸಾಧಕರು. ಉದಯೋನ್ಮುಖ ನಾಯಕರು ಮತ್ತು ಉದ್ಯಮದ ಪ್ರವರ್ತಕರನ್ನು ಸಂಪರ್ಕಿಸುವ ಗೌರವಾನ್ವಿತ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.
ಕರ್ನಾಟಕದ ಕೆಎಲ್‍ಇ ಸಂಸ್ಥೆಯ ಮಾಜಿ ನಿರ್ದೇಶಕರಾದ ಪರಣ್ಣ ಮುನವಳ್ಳಿ, ಉದ್ದಿಮೆದಾರ ವೀರೇಂದ್ರ ಕೌಜಲಗಿ, ಮಜೇಥಿಯಾ ಫೌಂಡೇಶನ್ ಸಂಸ್ಥಾಪಕ ಡಾ.ಜಿತೇಂದ್ರ ಮಜೇಥಿಯಾ, ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಅಧಿಕಾರಿ ಮುರುಗೇಶ ಚನ್ನಣ್ಣವರ, ಪ್ರೇಮಜಿ ಫೌಂಡೇಶನ್ ಸಂಸ್ಥಾಪಕ ಹಾಗೂ ಹಿರಿಯ ಪತ್ರಕÀರ್ತ ಗುರುರಾಜ ಹೂಗಾರ , ಎಂ.ಎಂ ಜೋಶಿ ಆಸ್ಪತ್ರೆಯ ಶ್ರೀನಿವಾಸ ಜೋಶಿ , ಡಾ. ಅಭಯ ಜೋಶಿ ಸೇರಿದಂತೆ ಈ ಕಾರ್ಯಕ್ರಮದಲ್ಲಿ 28 ರಾಜ್ಯಗಳÀ ಸುಮಾರು 150ಕ್ಕೂ ಹೆಚ್ಚು ಸಾಧಕರನ್ನು ಸತ್ಕರಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಖ್ಯಾತ ಬಾಲಿವುಡ್ ನಟ,ನಿರ್ಮಾಪಕ ಅರ್ಬಾಜಖಾನ್, ಬಾಲಿವುಡ್ ನಟಿ ಅಮೀಷಾ ಪಟೇಲ್, ಖ್ಯಾತ ನಟರಾದ ಕರಣ ಮೆಹರಾ, ಅಶ್ನೂರ್ ಕೌರ್, ಹೌತನ್ ಪೂನಿವಾಲಾ,ಸಂಸ್ಥಾಪಕ ಅಧ್ಯಕ್ಷ ಶ್ರೀಧರ ದಾವಸ್ಕರ್, ಸಿಇಒ ಐಶ್ವರ್ಯಾ ದಾವಸ್ಕರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಬಾಕ್ಸ್
ಹುಬ್ಬಳ್ಳಿಯ ಡೆನಿಸನ್ಸ್ ಹೋಟೆಲ್‍ನಲ್ಲಿ ಯುನೈಟೆಡ್ ಸ್ಟೇಟ್ಸ್(ಅಮೇರಿಕಾ)ನಲ್ಲಿ ನೋಂದಾಯಿತ ಗ್ಲೋಬಲ್ ರಿಸರ್ಚ್ ಫೌಂಡೇಶನ್ ಎಲ್‍ಎಲ್‍ಸಿಯ ಶೈಕ ್ಷಣಿಕ ಸಂಸ್ಥೆಯಿಂದ ಹಮ್ಮಿಕೊಂಡಿದ್ದ ಜಾಗತಿಕವಾಗಿ ವೈವಿಧ್ಯಮಯ ಕ್ಷೇತ್ರಗಳಲ್ಲಿ ಕಾರ್ಯನಿರತ ವೃತ್ತಿಪರರನ್ನು ಗುರುತಿಸ, ಗೌರವಿಸುವ ನ್ಯಾಷನಲ್ ಪ್ರೆಸ್ಟೀಜ್ ಅವಾಡ್ರ್ಸ್‍ನ್ನು ಸ್ವರ್ಣ ಸಮೂಹ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಾ.ವಿಎಸ್‍ವಿ ಪ್ರಸಾದ ಅವರಿಗೆ ಖ್ಯಾತ ಬಾಲಿವುಡ್ ನಟ,ನಿರ್ಮಾಪಕ ಅರ್ಬಾಜಖಾನ್ ಪ್ರಶಸ್ತಿ ನೀಡಿ ಗೌರವಿಸಿದರು. ಈ ಸಮಯದಲ್ಲಿ ಬಾಲಿವುಡ್ ನಟಿ ಅಮೀಷಾ ಪಟೇಲ್, ಖ್ಯಾತ ನಟರಾದ ಕರಣ ಮೆಹರಾ, ಅಶ್ನೂರ್ ಕೌರ್, ಹೌತನ್ ಪೂನಿವಾಲಾ,ಸಂಸ್ಥಾಪಕ ಅಧ್ಯಕ್ಷ ಶ್ರೀಧರ ದಾವಸ್ಕರ್, ಸಿಇಒ ಐಶ್ವರ್ಯಾ ದಾವಸ್ಕರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು

Share

Related posts

8 ವರ್ಷ ದಿಂದ ವೈದ್ಯರಿಂದ ಆಗದ ಕೆಲಸ ಸಾಮಾನ್ಯ ವ್ಯಕ್ತಿಯಿಂದ ಚಿಕಿತ್ಸೆ.! ಅವರೇ ತೌಸಿಫ್ ಪೀ ಟಿ.. ಏನಿದು ಅದ್ಭುತ ಪವಾಡ .?

admin

ಹುಬ್ಬಳ್ಳಿ: ಸಾರ್ವಜನಿಕರ ಒಂದು ಕರೆಗೆ ಸ್ಪಂದಿಸಿ ಸ್ವಚ್ಛಗೊಳಿಸಿದ ಮಹಾನಗರ ಪಾಲಿಕೆಯ ಸದಸ್ಯ ಸಿದ್ದು ಮುಗಲಿ ಶೆಟ್ಟರ್.!

admin

ಮಹಿಳೆಯ ಕೊಲೆ ಮಾಡಿ ಕಾಣೆಯಾದ ಕಥೆ ಕಟ್ಟಿದವರು 3 ವರ್ಷದ ಬಳಿಕ ಅಂದರ್‌.!

admin

Leave a Comment