August 3, 2026
Startv News | Hubli | Kannada News
ಕರ್ನಾಟಕ ಸುದ್ದಿ ವಿಶೇಷ ವರದಿ ಸುದ್ದಿಗಳು ಸ್ಥಳೀಯ ಹುಬ್ಬಳ್ಳಿ-ಧಾರವಾಡ

ಹುಬ್ಬಳ್ಳಿ: ಸೇವಾ ವಯೋನಿವೃತ್ತಿ ಸಮಾರಂಭ, ಶ್ರೀ ಮನೋಹರ್ ಕೆ ದೇಸಾಯಿ ASI – ಅಶೋಕ್ ನಗರ ಪೊಲೀಸ್ ಠಾಣೆ ಹುಬ್ಬಳ್ಳಿ ಇವರ ಸೇವೆ ಶ್ಲಾಘನೀಯ.

ಪೊಲೀಸ್ ಅಧಿಕಾರಿಗಳು ಸಮಾಜದ ಭದ್ರಸ್ತಂಭವಾಗಿದ್ದು, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಾರೆ. ಹಗಲಿರುಳು ಜನಸಾಮಾನ್ಯರ ರಕ್ಷಣೆ, ಅಪರಾಧ ತಡೆಗಟ್ಟುವಿಕೆ ಮತ್ತು ಶಾಂತಿ ಸ್ಥಾಪನೆಗಾಗಿ ತಮ್ಮ ಜೀವದ ಹಂಗು ತೊರೆದು ದುಡಿಯುವ ಧೀಮಂತರು. ಕಾನೂನು ಪಾಲನೆ, ತನಿಖೆ ಮತ್ತು ತುರ್ತು ಸಂದರ್ಭಗಳಲ್ಲಿ ಸಹಾಯ ಮಾಡುವ ಮೂಲಕ, ಅವರು ಸುರಕ್ಷಿತ ಸಮಾಜ ನಿರ್ಮಾಣಕ್ಕೆ ಅಡಿಪಾಯವಾಗಿದ್ದಾರೆ, ಇವರ ಸೇವೆ ಶ್ಲಾಘನೀಯ.

ಪೊಲೀಸ್ ಕೆಲಸಕ್ಕೆ ಅಪಾರ ದೈಹಿಕ ಶಕ್ತಿ, ಧೈರ್ಯ ಮತ್ತು ಮಾನಸಿಕ ದೃಢತೆ ಅಗತ್ಯ. ತಮ್ಮ ಕುಟುಂಬದಿಂದ ದೂರವಿದ್ದು, ರಜಾದಿನಗಳಲ್ಲೂ ಕೆಲಸ ಮಾಡಿ ಸಮಾಜದ ಕ್ಷೇಮಕ್ಕಾಗಿ ಶ್ರೀ ಮನೋಹರ್ ಕೆ ದೇಸಾಯಿ ASI ಅವರ ಪಾತ್ರ ಅತ್ಯುನ್ನತವಾಗಿತ್ತು.

ಅಪರಾಧಗಳನ್ನು ತಡೆಗಟ್ಟುವುದು, ಅಪರಾಧಿಗಳನ್ನು ಬಂಧಿಸುವುದು, ತನಿಖೆ ನಡೆಸುವುದು ಮತ್ತು ಜನರಿಗೆ ಸಹಾಯ ಮಾಡುವುದು ಇವರ ಮುಖ್ಯ ಕರ್ತವ್ಯ. ಸಂಚಾರ ನಿಯಂತ್ರಣ, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭದ್ರತೆ, ಮತ್ತು ತುರ್ತು ಪರಿಸ್ಥಿತಿಗಳಲ್ಲಿ ಸಹಾಯ ಹಸ್ತ ಚಾಚುವುದು ಇವರ ದೈನಂದಿನ ಕಾರ್ಯಗಳು ಆಗಿದ್ದವು.

ಪೊಲೀಸ್ ಅಧಿಕಾರಿಗಳು ನಮ್ಮ ಹಿತೈಷಿಗಳು. ಅವರ ಸೇವೆ, ತ್ಯಾಗ ಮತ್ತು ಕಠಿಣ ಪರಿಶ್ರಮಕ್ಕೆ ನಾವು ಗೌರವ ನೀಡಬೇಕು ಮತ್ತು ಕಾನೂನು ಪಾಲಿಸುವ ಮೂಲಕ ಅವರಿಗೆ ಸಹಕರಿಸಬೇಕು ಇವರ ಮೂಲ ಉದ್ದೇಶವಾಗಿತ್ತು.

ಶ್ರೀ ಮನೋಹರ್ ಕೆ ದೇಸಾಯಿ ಎ ಎಸ್ ಐ ಅಶೋಕ್ ನಗರ್ ಪೊಲೀಸ್ ಠಾಣೆ ಹುಬ್ಬಳ್ಳಿ ಇವರ ಮುಂದಿನ ಜೀವನ ಸ್ವಚ್ಛಂದವಾಗಿ ಆರೋಗ್ಯದಿಂದ ಸಂತೋಷದಿಂದ ಹಾಗೂ ಸೌಖ್ಯದಿಂದ ಕೂಡಿರಲಿ ಎಂದು ಆಶಿಸುತ್ತಾ, ನಿಮ್ಮ ಬಂಧುಗಳು, ಅಪಾರ ಮಿತ್ರರ ಬಳಗ ಹಾಗೂ ಅಶೋಕ್ ನಗರ ಪೊಲೀಸ್ ಠಾಣೆಯ ಎಲ್ಲಾ ಸಿಬ್ಬಂದಿಗಳು ಹಾರೈಸುತಿದ್ದೇವೆ.

ನಿಮ್ಮ ಸಲಹೆ ಸೂಚನೆ ಹಾಗೂ ಸಾರ್ವಜನಿಕರ ಹಿತಾಸಕ್ತಿ ಕುರಿತು ನಿಮ್ಮ ವಿಚಾರಗಳನ್ನ ಅರಿತುಕೊಂಡ ನಾವು ಸ್ಟಾರ್ ಟಿವಿ ನ್ಯೂಸ್ ತಂಡದ ವತಿಯಿಂದ ನಿಮಗೆ ಶುಭ ಹಾರೈಸುತಿದ್ದೇವೆ.

www.startvnews.in

Share

Related posts

ಹುಬ್ಬಳ್ಳಿ ಧಾರವಾಡ ಕಾಂಗ್ರೆಸ್ ಸೆಂಟ್ರಲ್ ಮುಖ್ಯ ಕಚೇರಿಯಲ್ಲಿ ದಿಗ್ವಿಜಯ ಸಿಂಗ್ ಅವರಿಂದ ಧ್ವಜಾರೋಹಣ.

admin

ಯೋಗೇಶ್ವರ್‌ಗೆ ಕಾಂಗ್ರೆಸ ಪಕ್ಷ ದವರಿಂದ ಅದ್ಧೂರಿ ಸ್ವಾಗತ, ಸಿಎಂ, ಡಿಸಿಎಂ ಜತೆ ನಾಮಪತ್ರ ಸಲ್ಲಿಕೆ ಯಾವಾಗ?

admin

ಬೆಂಗಳೂರು ಸೇರಿದಂತೆ 14 ಕಡೆಯಲ್ಲಿ ಸರ್ವೇ ಅಧಿಕಾರಿ ಮನೆ, ಕಚೇರಿ ಮೇಲೆ ಲೋಕಾಯುಕ್ತ ದಾಳಿ!

admin

Leave a Comment