August 4, 2026
Startv News | Hubli | Kannada News
ವಿಶೇಷ ವರದಿ ಸುದ್ದಿಗಳು ಸ್ಥಳೀಯ ಹುಬ್ಬಳ್ಳಿ-ಧಾರವಾಡ

ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರೇಟ್ ರೇಣುಕಾ ಸುಕುಮಾರ ಅತ್ಯುತ್ತಮ ಐಪಿಎಸ್ ಅಧಿಕಾರಿಗಳಲ್ಲಿ ಒಬ್ಬರು. ಹೆಚ್ಚಿನ ಮಾಹಿತಿ..

ಹುಬ್ಬಳ್ಳಿ, ಆಗಸ್ಟ್‌, 10: ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರಾಗಿ ರೇಣುಕಾ ಸುಕುಮಾರ ಗುರುವಾರ ಅಧಿಕಾರ ವಹಿಸಿಕೊಂಡಿದ್ದು, ರಾಜ್ಯದ ಮೊದಲ ಮಹಿಳಾ ಪೊಲೀಸ್ ಆಯುಕ್ತರು ಎನ್ನುವ ಖ್ಯಾತಿಗೆ ಪಾತ್ರರಾಗಿದ್ದಾರೆ. ಅಧಿಕಾರ ವಹಿಸಿಕೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರೇಣುಕಾ ಸುಕುಮಾರ ಅವರು, ಹಿಂದೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಡಿಸಿಪಿಯಾಗಿ ಕರ್ತವ್ಯ ನಿರ್ವಹಿಸಿದ ಅನುಭವವಿದೆ. ಈಗಿರುವ ಅಧಿಕಾರಿಗಳಲ್ಲಿ ಬಹುತೇಕರು ಹಿರಿಯರು. ಹೀಗಾಗಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮತ್ತಷ್ಟು ಅನುಕೂಲವಾಗಲಿದೆ. ಸರ್ಕಾರ ದೊಡ್ಡ ಜವಬ್ದಾರಿಯನ್ನು ನೀಡಿದ್ದು, ಅದನ್ನು ಪ್ರಾಮಾಣಿಕವಾಗಿ ನಿರ್ವಹಿಸಿಕೊಂಡು ಹೋಗುವುದಾಗಿ ತಿಳಿಸಿದರು.

“ಸರ್ಕಾರ ದೊಡ್ಡ ಜವಬ್ದಾರಿಯನ್ನು ನೀಡಿದ್ದು, ಅದನ್ನು ಪ್ರಾಮಾಣಿಕವಾಗಿ ನಿರ್ವಹಿಸಿಕೊಂಡು ಹೋಗುವುದಾಗಿ ತಿಳಿಸಿದರು”.

ಮೊದಲ ಮಹಿಳಾ ಆಯುಕ್ತೆ; ರೇಣುಕಾ ಕೆ. ಸುಕುಮಾರ ಹುಬ್ಬಳ್ಳಿ-ಧಾರವಾಡ ಕಮಿಷನರೇಟ್‌ನ ಮೊದಲ ಮಹಿಳಾ ಪೊಲೀಸ್ ಆಯುಕ್ತರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ಹುಬ್ಬಳ್ಳಿ-ಧಾರವಾಡದ ಪ್ರಭಾರಿ ಆಯುಕ್ತರಾಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದ ಸಂತೋಷ್ ಬಾಬು ಅವರನ್ನು ಸರ್ಕಾರ ವರ್ಗಾವಣೆ ಮಾಡಿದೆ.
ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರಾಗಿ ನೇಮಗೊಂಡಿರುವ ರೇಣುಕಾ ಕೆ. ಸುಕುಮಾರ ಡೆಪ್ಯೂಟಿ ಕಮಾಂಡೆಂಟ್ ಜನರಲ್, ಹೋಂ ಗಾರ್ಡ್‌ ಮತ್ತು ಡೆಪ್ಯೂಟಿ ಡೈರೆಕ್ಟರ್ ಆಫ್ ಸಿವಿಲ್ ಡಿಫೆನ್ಸ್‌ ಆಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದರು. ರೇಣುಕಾ ಕೆ. ಸುಕುಮಾರ ಈ ಹಿಂದೆ ಕೊಪ್ಪಳ ಜಿಲ್ಲೆಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ, ಉಪ ಪೊಲೀಸ ಆಯುಕ್ತರು (ಕಾನೂನು ಮತ್ತು ಸುವ್ಯವಸ್ಥೆ ವಿಭಾಗ)ದಲ್ಲಿಯೂ ಕಾರ್ಯ ನಿರ್ವಹಣೆ ಮಾಡಿದ್ದರು.

ಈ ಮೊದಲು ಆಯುಕ್ತರಾಗಿದ್ದ ರಮಣ್ ಗುಪ್ತಾ ವರ್ಗಾವಣೆ ನಂತರ ಪೊಲೀಸ್ ಆಯುಕ್ತರ ಹುದ್ದೆಯನ್ನು ಪ್ರಭಾರದಲ್ಲಿ ಮುಂದೊರೆಸಲಾಗಿತ್ತು. ಸಂತೋಷ್‌ ಬಾಬು ಅವರು ಪ್ರಭಾರ ಆಯುಕ್ತರಾಗಿದ್ದರು. ಸರ್ಕಾರ ಎಸ್‌ಪಿ ಹಂತದ ಐಪಿಎಸ್ ಅಧಿಕಾರಿಯನ್ನು ನಿಯುಕ್ತಿಗೊಳಿಸಿ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ರೇಣುಕಾ ಸುಕುಮಾರ ಅವರು ಅಧಿಕಾರ ವಹಿಸಿಕೊಂಡರು.

2011ನೇ ಬ್ಯಾಚ್‌ನ ಐಪಿಎಸ್ ಅಧಿಕಾರಿ ರೇಣುಕಾ ಕೆ. ಸುಕುಮಾರ ಈ ಹಿಂದೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಡಿಸಿಪಿಯಾಗಿ ಕಾರ್ಯ ನಿರ್ವಹಣೆ ಮಾಡಿದ್ದರು.

ಈಗಿರುವ ಅಧಿಕಾರಿಗಳಲ್ಲಿ ಬಹುತೇಕರು ಹಿರಿಯರು. ಹೀಗಾಗಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮತ್ತಷ್ಟು ಅನುಕೂಲವಾಗಲಿದೆ. ಸರ್ಕಾರ ದೊಡ್ಡ ಜವಬ್ದಾರಿಯನ್ನು ನೀಡಿದ್ದು, ಅದನ್ನು ಪ್ರಾಮಾಣಿಕವಾಗಿ ನಿರ್ವಹಿಸಿಕೊಂಡು ಹೋಗುವುದಾಗಿ ತಿಳಿಸಿದರು.

Share

Related posts

ಆಗಸದಲ್ಲಿ ನಿಂತ ಮಗುವಿನ ಉಸಿರು.. ಬೆಂಗಳೂರು – ದೆಹಲಿ ವಿಮಾನ ತುರ್ತು ಭೂಸ್ಪರ್ಶ.. ಕಂದಮ್ಮನ ಪಾಲಿಗೆ ದೇವರಾದ ವೈದ್ಯರು..

admin

ಹುಬ್ಬಳ್ಳಿ-ಧಾರವಾಡದ ರೌಡಿಶೀಟರ್‌ಗಳ ದಂಡು, ಇಷ್ಟು ಮಂದಿ ರೌಡಿಗಳು ಒಂದೇ ಸ್ಥಳದಲ್ಲಿ..? ರೌಡಿಗಳೆಲ್ಲ ಕೈ ಕಟ್‌, ಬಾಯಿ ಮುಚ್‌.!

admin

ಹುಬ್ಬಳ್ಳಿ: ಬಕ್ರೀದ್ ಹಬ್ಬದ ಸಿದ್ಧತೆ, ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಹಾಗೂ ಡಿಸಿಪಿ ಶೃತಿ ಪರಿಶೀಲನೆ.!

admin

Leave a Comment