August 4, 2026
Startv News | Hubli | Kannada News
ಕರ್ನಾಟಕ ಸುದ್ದಿ ಸುದ್ದಿಗಳು ಹುಬ್ಬಳ್ಳಿ-ಧಾರವಾಡ

ಕಿಮ್ಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಮಗು ಸ್ಮಶಾನದಲ್ಲಿ ಬಾಯಿಗೆ ನೀರು ಬಿಟ್ಟಾಗ ಜೀವಂತ!

ಹುಬ್ಬಳ್ಳಿ : ನವಲಗುಂದ ತಾಲೂಕಿನ ಬಸಾಪೂರ ಗ್ರಾಮದ ಆಕಾಶ ಬಸವರಾಜ ಪೂಜಾರ ಎಂಬ ಮಗು ಒಂದು ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿತ್ತು.ಕಳೆದ ನಾಲ್ಕು ದಿನಗಳ ಹಿಂದೆ ಮಗುವಿನ ಚಿಕಿತ್ಸೆಗಾಗಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಸ್ಪತ್ರೆಯಲ್ಲಿ ಮಗು ಸಾವನ್ನಪ್ಪಿದೆ ಎಂದು ವೈದ್ಯರು ದೃಢಪಡಿಸಿದ ಹಿನ್ನೆಲೆಯಲ್ಲಿ ಮಗುವನ್ನು ಹೂಳಲು ಸ್ಮಶಾನಕ್ಕೆ ತೆಗೆದುಕೊಂಡು ಹೋಗಲಾಗಿತ್ತು.

ಮಗುವನ್ನು ಸ್ಮಶಾನದಲ್ಲಿ ಹೂಳುವ ಸಂದರ್ಭದಲ್ಲಿಸಂಪ್ರದಾಯದಂತೆ ಬಾಯಿಗೆ ನೀರು ಬಿಡುತ್ತಿರುವಾಗ ಮಗು ಕೈಕಾಲು ಆಡಿಸಿತು. ಆಗ ಜೀವಂತವಾಗಿದೆ ಎಂದು ತಿಳಿದು ನವಲಗುಂದ ಆಸ್ಪತ್ರೆಗೆ ಕರೆ ತಂದಾಗ ಮಗುವಿನ ಹೃದಯ ಸ್ತಂಬನ ಸರಿಯಾಗಿದ್ದು, ಮಗು ಜೀವಂತವಾಗಿದೆ ಎಂದು ನವಲಗುಂದ ಸರಕಾರಿ ವೈದ್ಯರು ತಿಳಿಸಿದ್ದಾರೆ. ಕೂಡಲೇ ಮಗುವನ್ನು ಧಾರವಾಡ ಸಿವಿಲ್‌ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Share

Related posts

ಬೆಳಗಾವಿ: ಕಳ್ಳರೆಂದು ಭಾವಿಸಿ ಮೂವರನ್ನು ಕಂಬಕ್ಕೆ ಕಟ್ಟಿ ಗ್ರಾಮಸ್ಥರಿಂದ ಹಲ್ಲೆ.. !

admin

ಹುಬ್ಬಳ್ಳಿ-ಧಾರವಾಡದಲ್ಲಿ ಬಿಆರ್‌ಟಿಎಸ್‌ ಸೂಕ್ತ ನಿರ್ವಹಣೆ ಇಲ್ಲದೇ ಬಸ್‌ಗಳಿಗೆ ಬಿಡಿ ಭಾಗಗಳ ಕೊರತೆ, ನಿತ್ಯ 2-3 ಬಸ್‌ಗಳು ಗ್ಯಾರೇಜ್‌ ಸೇರುತ್ತಿವೆ.

admin

ನೊಣದಿಂದ ಸಿಕ್ಕಿಬಿದ್ದ ಕೊಲೆ ಆರೋಪಿ.!

admin

Leave a Comment