August 4, 2026
Startv News | Hubli | Kannada News
ಅಪರಾಧ ಕರ್ನಾಟಕ ಸುದ್ದಿ ವಿಶೇಷ ವರದಿ ಸುದ್ದಿಗಳು

ಬೆಳಗಾವಿ: ಕಳ್ಳರೆಂದು ಭಾವಿಸಿ ಮೂವರನ್ನು ಕಂಬಕ್ಕೆ ಕಟ್ಟಿ ಗ್ರಾಮಸ್ಥರಿಂದ ಹಲ್ಲೆ.. !

ಬೆಳಗಾವಿ: ಚಿಕ್ಕೋಡಿ ತಾಲೂಕಿನ ಜೋಡಕುರಳಿ ಗ್ರಾಮದಲ್ಲಿ ಕಳ್ಳರೆಂದು ಭಾವಿಸಿ ಮೂವರು ಯುವಕರನ್ನು ಕಂಬಕ್ಕೆ ಕಟ್ಟಿ ಮನಬಂದಂತೆ ಹಲ್ಲೆ ನಡೆಸಿದ್ದಾರೆ. ಬೆಳ್ಳಂಬೆಳಗ್ಗೆ ಜೋಡಕುರಳಿ ಗ್ರಾಮಕ್ಕೆ ನಾಲ್ವರು ಯುವಕರು ಬಂದಿದ್ದರು. ಈ ವೇಳೆ ಯುವಕರನ್ನು ಯಾರು ಎಂದು ವಿಚಾರಿಸುತ್ತಿದ್ದಾಗ ಸರಿಯಾಗಿ ಮಾಹಿತಿ ನೀಡಿದೇ ಯುವಕನೊಬ್ಬ ಓಡಿ ಹೋಗಿದ್ದಾನೆ.

ನೋಡಿದ ಗ್ರಾಮಸ್ಥರು ಮೂವರನ್ನು ಹಿಡಿದು ಕಂಬಕ್ಕೆ ಕಟ್ಟಿ ಮನಬಂದಂತೆ ಹಲ್ಲೆ ನಡೆಸಿದ್ದಾರೆ. ಕಟ್ಟಿಗೆಯಿಂದ ಹೊಡೆದು, ಮುಖಕ್ಕೆ ಕಾಲಿನಿಂದ ಒದೆಯುತ್ತಾ ಮನಬಂದಂತೆ ಥಳಿಸಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಚಿಕ್ಕೋಡಿ ಪೊಲೀಸರು ದೌಡಾಯಿಸಿದ್ದರು. ಬಳಿಕ ಮೂವರು ಯುವಕರ ರಕ್ಷಣೆ ಮಾಡಿ ಬಿಡುಗಡೆಗೊಳಿಸಿದ್ದಾರೆ. ಹಲ್ಲೆಗೊಳಗಾದ ಮೂವರು ಯುವಕರು ರಾಯಬಾಗ ತಾಲೂಕಿನ ಕೆಂಪಟ್ಟಿ ಗ್ರಾಮದವರೆಂಬ ಮಾಹಿತಿ ಲಭ್ಯವಾಗಿದೆ. ಯುವಕರ ಮೇಲೆ ಹಲ್ಲೆ ಮಾಡಿದ ಹತ್ತಕ್ಕೂ ಹೆಚ್ಚು ಜನರ ವಿರುದ್ಧ ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Share

Related posts

ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರೇಟ್ ರೇಣುಕಾ ಸುಕುಮಾರ ಅತ್ಯುತ್ತಮ ಐಪಿಎಸ್ ಅಧಿಕಾರಿಗಳಲ್ಲಿ ಒಬ್ಬರು. ಹೆಚ್ಚಿನ ಮಾಹಿತಿ..

admin

ಹುಬ್ಬಳ್ಳಿ: ಪ್ರಮೋದ್ ಮುತಾಲಿಕ್ ಮುಸಲ್ಮಾನರ ಬಗ್ಗೆ ಪ್ರಚೋದನಕಾರಿ ಹೇಳಿಕೆ ಹೇಳುವುದು ಎಷ್ಟು ಮಟ್ಟಿಗೆ ಸರಿ? ಕೊನೆಗೂ FIR ದಾಖಲು.!

admin

8 ವರ್ಷ ದಿಂದ ವೈದ್ಯರಿಂದ ಆಗದ ಕೆಲಸ ಸಾಮಾನ್ಯ ವ್ಯಕ್ತಿಯಿಂದ ಚಿಕಿತ್ಸೆ.! ಅವರೇ ತೌಸಿಫ್ ಪೀ ಟಿ.. ಏನಿದು ಅದ್ಭುತ ಪವಾಡ .?

admin

Leave a Comment