ಈ ದೇಶದಲ್ಲಿ ಇನ್ನೂ ಪ್ರಾಮಾಣಿಕತನಕ್ಕೆ ಬೆಲೆ ಇದೆ. ಪ್ರಾಮಾಣಿಕ ಜನರು ಇದ್ದಾರೆ. ಪ್ರಾಮಾಣಿಕವಾಗಿ ಆಟೋದಲ್ಲಿ ಬಿಟ್ಟು ಇಳಿದ ಪ್ರಯಾಣಿಕರ ಲ್ಯಾಪ್ಟಾಪ್ ಬ್ಯಾಗನ್ನು ಹಿಂತಿರುಗಿಸಿ ಮಾನವೀಯತೆಯನ್ನು ಮೆರೆದಿದ್ದಾರೆ.
ಮಿಶ್ರೀ ಕೋಟಿ ಹಳ್ಳಿಯ ಚಂದ್ರಕಾಂತ್ ಎಂಬ ವ್ಯಕ್ತಿ ಆಟೋ ಚಾಲಕನಾಗಿದ್ದು, ಬಡತನದಲ್ಲಿಯೂ ತನ್ನ ಎರಡು ಮಕ್ಕಳಿಗೆ ಕಾಲೇಜಿನಲ್ಲಿ ವಿದ್ಯಾಭ್ಯಾಸ ಕೊಡಿಸುತ್ತಿದ್ದಾನೆ. ತನ್ನ ಕಾಲಿನಲ್ಲಿ ಆದರಕ್ಷೆಗಳನ್ನ ಹಾಕಿಕೊಳ್ಳದೆ ತನ್ನ ಮಕ್ಕಳು ಹಳ್ಳಿ ವಿದ್ಯಾಭ್ಯಾಸ ಮಾಡಿ ಹಂತಕ್ಕೆ ಬೆಳೆದು ಅವರು ಕೊಡಿಸುವಂತಹ ಪಾದರಕ್ಷೆಯನ್ನು ಕೊಳ್ಳುವಂತಹ ಆಸೆಯನ್ನು ಈ ಆಟೋ ಚಾಲಕ ಚಂದ್ರಕಾಂತ್ ಇಟ್ಟುಕೊಂಡಿದ್ದಾನೆ.
