August 3, 2026
Startv News | Hubli | Kannada News
ಅಪರಾಧ ಕರ್ನಾಟಕ ಸುದ್ದಿ ರಾಜಕೀಯ ವಿಶೇಷ ವರದಿ ಸುದ್ದಿಗಳು ಸ್ಥಳೀಯ ಹುಬ್ಬಳ್ಳಿ-ಧಾರವಾಡ

ಹುಬ್ಬಳ್ಳಿ: ಪ್ರಮೋದ್ ಮುತಾಲಿಕ್ ಮುಸಲ್ಮಾನರ ಬಗ್ಗೆ ಪ್ರಚೋದನಕಾರಿ ಹೇಳಿಕೆ ಹೇಳುವುದು ಎಷ್ಟು ಮಟ್ಟಿಗೆ ಸರಿ? ಕೊನೆಗೂ FIR ದಾಖಲು.!

ಪ್ರಚೋದನಕಾರಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಮೇಲೆ ಇವತ್ತು FIR ದಾಖಲಾಗಿದೆ.
ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶನ ವಿಸರ್ಜನೆಯ ಸಂದರ್ಭದಲ್ಲಿ ಮಾಧ್ಯಮಗಳ ಮುಂದೆ ಮಾತನಾಡುವ ಸಂದರ್ಭದಲ್ಲಿ ಇನ್ನು ಮುಂದೆ ಮುಸಲ್ಮಾನರು ಈದ್ಗಾ ಮೈದಾನದಲ್ಲಿ ಗಣೇಶನ ಸ್ಥಾಪನೆಗೆ ಅಡ್ಡಿಪಡಿಸಿದಲ್ಲಿ ಮುಸಲ್ಮಾನರ ಮಸೀದಿ ಒಳಗಡೆ ಗಣೇಶನ ಸ್ಥಾಪನೆ ಮಾಡುತ್ತೇನೆ ಎಂದು ಎಚ್ಚರಿಕೆ ನೀಡಿ ಪ್ರಚೋದನಕಾರಿ ಹೇಳಿಕೆ ಅನ್ಯ ಧರ್ಮದವರಿಗೆ ಮನಸು ನೋವಾದಂತೆ ಹೇಳಿಕೆಯನ್ನು ಕೊಟ್ಟು ತನ್ನ ಮನವಿಯತೆಗೆ ಕಳಂಕ ತರುವ ಕೆಲಸ ಮಾಡಿ ಆಘಾತವನ್ನುಂಟು ಮಾಡಿದ್ದಾರೆ.
ಮಹಾನಗರ ಪಾಲಿಕೆಯ ಸಹಾಯ ಆಯುಕ್ತ ಚಂದ್ರಶೇಖರ್ ಗೌಡ ಅವರು ಈ ಪ್ರಚೋದನಕಾರಿ ಹೇಳಿಕೆಯ ವಿರುದ್ಧ ಪ್ರಮೋದ್ ಮುತಾಲಿಕ್ ಮೇಲೆ FIR ದಾಖಲು ಮಾಡಿದ್ದಾರೆ. ಹುಬ್ಬಳ್ಳಿಯ ಉಪನಗರ ಪೊಲೀಸ್ ಠಾಣೆಯಲ್ಲಿ ಐಪಿಸಿ ಕಲಂ 153(ಎ), 295(ಎ), ಐಪಿಸಿ ಪ್ರಕರಣ ದಾಖಲಾಗಿದೆ.
ಸೌಹಾರ್ದತೆಯಿಂದ, ಶಾಂತಿಯುತವಾಗಿ ಗಣೇಶನ ಹಬ್ಬ ಆಚರಿಸಿ ಇಂತಹ ಹೇಳಿಕೆ ಹೇಳುವುದು ಎಷ್ಟು ಮಟ್ಟಿಗೆ ಸರಿ ಎಂದು ಸಾರ್ವಜನಿಕರ ಪ್ರಶ್ನೆಯಾಗಿದೆ. ಇಂತಹ ಪ್ರಚೋದನಕಾರಿ ಹೇಳಿಕೆಗೆ ಕಾನೂನು ಶಿಕ್ಷೆ ನೀಡುತ್ತಾ ಎಂಬ ಪ್ರಶ್ನೆ..?

Share

Related posts

ಹಳೆ ಹುಬ್ಬಳ್ಳಿಯ ನಿವಾಸಿ ನೇಣು ಬಿಗಿದು ಆತ್ಮಹತ್ಯೆ. ಯಾಕೆ ಈ ಅನಾಹುತ?

admin

ಹುಬ್ಬಳ್ಳಿ ಯಲ್ಲಿ ಸ್ಮಾರ್ಟ್ ವಾಚ್ ವಿಷಯದ ಬಗ್ಗೆ ಚಾಕುವಿನಿಂದ ಹತ್ಯೆ. ಏನಿದು ಮತ್ತೆ ಸ್ಮಾರ್ಟ್ ಸಿಟಿ ಯಲ್ಲಿ.?

admin

ಹುಬ್ಬಳ್ಳಿ: ಶ್ರೀ ಸಂತೋಷ್ ಲಾಡ್ ಅವರಿಗೆ ಮುಗಿಲು ಮುಟ್ಟುವಂತಹ ಹೂವಿನ ಹಾರದೊಂದಿಗೆ, ಕುದುರೆ ಸವಾರಿಯನ್ನ ಆಯೋಜಿಸಿ, ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಜಯೋತ್ಸವದ ಕಾರ್ಯಕ್ರಮ!

admin

Leave a Comment