August 4, 2026
Startv News | Hubli | Kannada News
ಅಪರಾಧ ಕರ್ನಾಟಕ ಸುದ್ದಿ ವಾಣಿಜ್ಯ ಸುದ್ದಿಗಳು ಸ್ಥಳೀಯ ಹುಬ್ಬಳ್ಳಿ-ಧಾರವಾಡ

ಹುಬ್ಬಳ್ಳಿ: ವಿದ್ಯಾನಗರ – ಲೋಕಾಯುಕ್ತ ದಾಳಿ – ವಾಣಿಜ್ಯ ತೆರಿಗೆ ಉಪನಿರ್ದೇಶಕನ ಮನೆಯಲ್ಲಿ ಭಾರಿ ಪ್ರಮಾಣದಲ್ಲಿ ನಗದು, ಬಂಗಾರ ಬೆಳ್ಳಿ ಪತ್ತೆ.! ಅಕ್ರಮ ಆಸ್ತಿ.!

ಹುಬ್ಬಳ್ಳಿಯ ವಿದ್ಯಾನಗರದತ್ತ ನಗರದಲ್ಲಿನ ವಾಸವಾಗಿದ್ದ ನಿವಾಸದಲ್ಲಿ, ಕೊಪ್ಪಳದ ಜಿಲ್ಲಾ ಕೈಗಾರಿಕಾ ಮತ್ತು ವಾಣಿಜ್ಯ ತೆರಿಗೆ ಉಪ ನಿರ್ದೇಶಕ ಎಸ್.ಎಂ ಚೌಹಾನ್ ಮನೆ ಮೇಲೆ ಲೋಕಾಯುಕ್ತರ ದಾಳಿ ನಡೆದಿದ್ದು ಭಾವಿ ಪ್ರಮಾಣದಲ್ಲಿ ನಗದು ಬಂಗಾರ ಹಾಗೂ ಬೆಳ್ಳಿ ಪತ್ತೆಯಾಗಿದೆ. ಅದಲ್ಲದೆ ವಿವಿಧ ಕಡೆ ಇರುವ 12 ಸೈಟು, ಮೂರು ಮನೆ, 6 ಎಕರೆ ಜಮೀನಿನ ದಾಖಲೆ ಸಹ ಪತ್ತೆಯಾಗಿದೆ.

ಅತಿಯಾದ ಹಿನ್ನೆಲೆ ಅಧಿಕಾರಿಗಳು ಹಣ ಎಣಿಕೆ ಯಂತ್ರ ತಂದಿದ್ದಾರೆ. ಸ್ಥಳೀಯ ಅಧಿಕಾರಿಗಳ ಸಹಾಯದಿಂದ ಹಣ ಎಣಿಕೆ ಯಂತ್ರದ ವ್ಯವಸ್ಥೆ ಮಾಡಿದ್ದಾರೆ. ಇದರೊಂದಿಗೆ ಮತ್ತೊಂದು ಪ್ರಿಂಟಿಂಗ್ ಯಂತ್ರ ಕೂಡ ತಂದು, ಹಣ ತೆಗೆದುಕೊಂಡು ಹೋಗಲು ವ್ಯವಸ್ಥೆ ಮಾಡಲಾಗಿದೆ. ಲೋಕಾಯುಕ್ತ ಸಿಬ್ಬಂದಿ ಸೈಟ್ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಲೋಕಾಯುಕ್ತರ ದಾಳಿಯ ವೇಳೆ ಬೆಳ್ಳಿ ದೇವರ ಮಂಟಪ ಬಂಗಾರದ ಗಣೇಶ ಮೂರ್ತಿ ಸಹ ಪತ್ತೆಯಾಗಿದೆ.

ಡಿ ವೈ ಎಸ್ ಪಿ ಆರ್ ವಸಂತ್ ಕುಮಾರ್ ತಂಡದಿಂದ ಶೋಧ ಕಾರ್ಯ ನಡೆಯುತ್ತಿದೆ. ಇಲ್ಲಿಯವರೆಗೂ ಮನೆಯ ಎರಡು ಕೊಠಡಿಗಳನ್ನು ಮಾತ್ರ ತಪಾಸಣೆ ಮಾಡಲಾಗಿದ್ದು, ಇನ್ನೂ ಒಂದು ಕೊಠಡಿಯ ಪರಿಶೀಲನೆ ಬಾಕಿ ಉಳಿದಿದೆ ಎಂದು ತಿಳಿಸಿದ್ದಾರೆ. ಹಲವು ಬ್ರಹ್ಮಾನದ ಆಸ್ತಿಪತ್ಯ ಹಿನ್ನೆಲೆ ಹುಬ್ಬಳ್ಳಿ ನಿವಾಸಕ್ಕೆ ಲೋಕಾಯುಕ್ತ ಎಸ್ ಪಿ ಭೇಟಿ ನೀಡುವ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ.
ಸ್ಟಾರ್ ಟಿವಿ ನ್ಯೂಸ್ ಹುಬ್ಬಳ್ಳಿ.
ಜನತೆಯ ಧ್ವನಿ.

Share

Related posts

ಗೋವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಿಸ ಮುಸ್ಲಿಮರಿಂದ ಗೋ ರಕ್ಷಣೆಯ ಆಂದೋಲನ.! ರಾಷ್ಟ್ರೀಯ ಪಶು ವನ್ನಾಗಿ ಜಾರಿ ಮಾಡಿ ಎಂದು ಬೇಡಿಕೆ.!

admin

ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶ ಸ್ಥಾಪನೆ ಮಾಡುವ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯಿಂದ ಇಂದು ಮಹತ್ವದ ಸಭೆ!

admin

ಧಾರವಾಡ: ನಡು ರಸ್ತೆಯಲ್ಲಿ ಆಸ್ತಿಯ ವಿಚಾರವಾಗಿ ಭೀಕರ ಕೊಲೆ!

admin

Leave a Comment