August 4, 2026
Startv News | Hubli | Kannada News
ಕರ್ನಾಟಕ ಸುದ್ದಿ ರಾಜಕೀಯ ವಿಶೇಷ ವರದಿ ಸುದ್ದಿಗಳು ಹುಬ್ಬಳ್ಳಿ-ಧಾರವಾಡ

ಬಿಜೆಪಿ ವ್ಯವಸ್ಥೆಯಿಂದ ಬಹಳಷ್ಟು ಜನ ನೊಂದು ಕಾಂಗ್ರೆಸ್ ಸೇರ್ಪಡೆ ಆಗ್ತಿದ್ದಾರಾ.?

ಬಿಜೆಪಿಯಲ್ಲಿನ ವ್ಯವಸ್ಥೆಯಿಂದ ಬಹಳಷ್ಟು ಜನ ನೊಂದು ಕಾಂಗ್ರೆಸ್ ಸೇರ್ಪಡೆ ಆಗುತ್ತಿದ್ದಾರೆ. ಸ್ವ ಇಚ್ಛೆಯಿಂದ ಪಕ್ಷದಿಂದ ಪಕ್ಷಕ್ಕೆ ಹೋದರೆ ಅದು ಆಪರೇಷನ್ ಅಲ್ಲ. ಅದಕ್ಕೆ ಆಪರೇಷನ್ ಹಸ್ತ ಎನ್ನುವ ಅವಶ್ಯಕತೆ ಇಲ್ಲ. ಬಿಜೆಪಿಯಿಂದ 20, 30 ಜನ ಕಾಂಗ್ರೆಸ್‌ಗೆ ಬರಬಹುದು ಎಂದು ಮಾಜಿ ಸಿಎಂ, ಕಾಂಗ್ರೆಸ್‌ ವಿಧಾನ ಪರಿಷತ್‌ ಸದಸ್ಯ ಜಗದೀಶ್‌ ಶೆಟ್ಟರ್‌ ಹೇಳಿದ್ದಾರೆ.

ಶಂಕರ್‌ ಪಾಟೀಲ್‌ ಮುನೇನಕೊಪ್ಪ ಅವರು ಪ್ರೆಸ್‌ಮೀಟ್ ಕರೆದಿದ್ದು ನನಗೆ ಗೊತ್ತಿಲ್ಲ. ನಾನು ಈ ಬಗ್ಗೆ ಅವರೊಂದಿಗೆ ಮಾತನಾಡಿಲ್ಲ. ಈ ಬಗ್ಗೆ ನಾನು ಏನು ಹೇಳುವುದಕ್ಕೆ ಬರಲ್ಲ. ಸುದ್ಧಿಗೋಷ್ಟಿ ಯಾಕೆ ಕರೆದಿದ್ದಾರೆ ಅಂತ ಅವರೇ ಹೇಳಬೇಕು. ಇನ್ನೂ ಹಲವಾರು ನಾಯಕರು ಬಿಜೆಪಿಯಿಂದ ನೊಂದು ಬರುತ್ತಿದ್ದಾರೆ ಎಂದು ಹೇಳಿದರು.

ನಾಯಕನಿಲ್ಲದೆ ಸೊರಗುತ್ತಿದೆ, ರಾಜ್ಯದ ಅಧ್ಯಕ್ಷರ ಅವಧಿ ಮುಗಿದರೂ ಇದುವರೆಗೂ ನೇಮಕ ಮಾಡಲಾಗುತ್ತಿಲ್ಲ ಅವರಿಗೆ. ಈ ರೀತಿ ಶೋಚನಿಯ ಪರಿಸ್ಥಿತಿ ಯಾವುದೇ ರಾಷ್ಟ್ರೀಯ ಪಕ್ಷಕ್ಕೆ ಬಂದಿರಲಿಲ್ಲ. ಬಸವರಾಜ ಹೊರಟ್ಟಿ ಅವರಿಗೆ ಚೀಟಿ ಎತ್ತಿ ತಾತ್ಕಾಲಿಕವಾಗಿ ಆದರೂ ಪ್ರತಿಪಕ್ಷ ನಾಯಕನನ್ನು ಆಯ್ಕೆ ಮಾಡಿ ಎಂದಿದ್ದೆ ಎಂದರು.

ರಾಜ್ಯದ ಬಿಜೆಪಿ ನಾಯಕರ ಮೇಲೆ ಕೇಂದ್ರದವರಿಗೆ ನಂಬಿಕೆ ಹೋಗಿದೆ. ಮೋದಿಯವರನ್ನು ಬರಮಾಡಿಕೊಳ್ಳಲು ಅವರಿಗೆ ಅವಕಾಶ ಇರಲಿಲ್ಲ. ಬಿಜೆಪಿ ರಾಜ್ಯ ನಾಯಕರಿಗೆ ಬೀದಿಗೆ ಬೀಳುವಂತ ಪರಿಸ್ಥಿತಿ ಬಂದಿದೆ. ಈಗಿನ ಬಿಜೆಪಿ ಪಕ್ಷ ದಿನದಿಂದ ದಿನಕ್ಕೆ ಅದೋಗತಿಗೆ ಹೋಗ್ತಾ ಇದೆ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷದ ಸಂಘಟನೆಗೆ ನಾನು ಪ್ರಯತ್ನ ಮಾಡ್ತಾ ಇದ್ದೇನೆ. ಮಿನಿಮಮ್ 15 ಸೀಟ್ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬರುತ್ತದೆ. ಅಮಿತ್ ಶಾ ಅವರು ನನಗೆ ಕಾಲ್ ಮಾಡಿದ್ದಾರೆ ಅಂತ ಉಡುಪಿಯಲ್ಲಿ ಸುಳ್ಳು ಸುದ್ದಿ ಹಬ್ಬಿಸಿಬಿಟ್ಟರು. ರಾಜಕೀಯ ಗಮನ ಬೇರೆ ಕಡೆ ಸೆಳೆಯಲು ಈ ರೀತಿ ಮಾಡಿದ್ದರು ಎಂದು ಜಗದೀಶ್‌ ಶೆಟ್ಟರ್‌ ಸ್ಪಷ್ಟನೆ ನೀಡಿದರು.

Share

Related posts

(GST) ನೋಟಿಸ್‌ ಪಡೆದ ವರ್ತಕರಿಂದ 3 ವರ್ಷದ ತೆರಿಗೆ ಬಾಕಿ ವಸೂಲಾತಿ ಮಾಡುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಘೋಷಣೆ.! ಕಡ್ಡಾಯ ಜಿಎಸ್‌ಟಿ ನೋಂದಣಿ.! Complete Details.

admin

ಧಾರವಾಡದಲ್ಲಿ ಸೆಪ್ಟೆಂಬರ್ 09 ರಿಂದ 12ರವರೆಗೆ ಕೃಷಿ ಮೇಳ!

admin

ಅಲ್ತಾಫ್ ನವಾಝ್ ಕಿತ್ತೂರ್ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ! ಡಾ.ಸಯ್ಯದ್ ನಾಸೀರ್ ಹುಸೇನ್ ಅವರಿಗೆ ಬೆಳ್ಳಿ ಹಾರದೊಂದಿಗೆ ಸನ್ಮಾನ!

admin

Leave a Comment