August 4, 2026
Startv News | Hubli | Kannada News
ಅಪರಾಧ ಕರ್ನಾಟಕ ಸುದ್ದಿ ರಾಜಕೀಯ ವಿಶೇಷ ವರದಿ ಸುದ್ದಿಗಳು ಹುಬ್ಬಳ್ಳಿ-ಧಾರವಾಡ

15 ದಿನಗಳಲ್ಲಿ ಸುಮಾರು 4.59 ಲಕ್ಷ ‘ಮೃತ ಫಲಾನುಭವಿಗಳ ಹೆಸರಿನಲ್ಲಿರುವ ಬಿಪಿಎಲ್ ಕಾರ್ಡ್ ಡಿಲೀಟ್.! ಏನಿದು?

ಹುಬ್ಬಳ್ಳಿ: ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಬಿಸಿ ಮುಟ್ಟಿಸಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮುಂದಾಗಿದೆ. ಆರ್ಥಿಕವಾಗಿ ಸಬಲರಾಗಿದ್ದರೂ ಬಿಪಿಎಲ್ ಸೇವೆ ಪಡೆಯುತ್ತಿರುವವರನ್ನು ಈಗ ಟಾರ್ಗೆಟ್ ಮಾಡಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಈಗಾಗಲೇ ಮಹತ್ವದ ನಿರ್ಧಾರದ ಮೂಲಕ ಲಕ್ಷಾಂತರ ಬಿಪಿಎಲ್ ಕಾರ್ಡ್ ಡಿಲೀಟ್ ಆಗಿದೆ. ಕಳೆದ 15 ದಿನಗಳಲ್ಲಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಸುಮಾರು 4.59 ಲಕ್ಷ ‘ಮೃತ ಫಲಾನುಭವಿಗಳ ಹೆಸರಿನಲ್ಲಿರುವ ಬಿಪಿಎಲ್ ಕಾರ್ಡ್ ಡಿಲೀಟ್ ಮಾಡಿದೆ.

ಕಳೆದ ತಿಂಗಳವರೆಗೆ ಬಡತನ ರೇಖೆಗಿಂತ ಕೆಳಗಿನ (ಬಿಪಿಎಲ್) ಕಾರ್ಡ್‌ಗಳ ಅಡಿಯಲ್ಲಿ ಪಡಿತರವನ್ನು ಪಡೆಯುತ್ತಿದ್ದರು. ಈ ನಿಟ್ಟಿನಲ್ಲಿ ಸೂಕ್ತ ದಾಖಲೆಗಳನ್ನು ಪಡೆದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಈಗ ಒಟ್ಟು 4.59 ಲಕ್ಷ ಬಿಪಿಎಲ್ ಕಾರ್ಡ್ ಡಿಲೀಟ್ ಮಾಡಿದೆ. ರಾಜ್ಯದಲ್ಲಿ 1.27 ಕೋಟಿ ಬಿಪಿಎಲ್ ಕಾರ್ಡ್‌ಗಳಿದ್ದು, 4.36 ಕೋಟಿ ಜನರಿಗೆ ಅನುಕೂಲವಾಗಿದೆ. ಆದರೆ, ಬಿಪಿಎಲ್ ಗೆ ಅರ್ಹರಲ್ಲದ ಫಲಾನುಭವಿಗಳು ಉಚಿತ ಆಹಾರ ಧಾನ್ಯ ಪಡೆಯುತ್ತಿದ್ದಾರೆ ಎಂಬ ದೂರುಗಳು ದಾಖಲಾಗಿವೆ.

ಈ ನಿಟ್ಟಿನಲ್ಲಿ ಇಲಾಖೆ ಈಗ ಮಹತ್ವದ ಕಾರ್ಯವನ್ನು ಮಾಡಿದೆ. ಅಲ್ಲದೇ ಬಹುತೇಕ ಕುಟುಂಬಗಳು ಬಿಪಿಎಲ್ ಮಾನದಂಡಕ್ಕಿಂತ ಹೆಚ್ಚಿನ ಆದಾಯ ಹಾಗೂ ಆರ್ಥಿಕ ಸ್ಥಿತಿ ಹೊಂದಿದ್ದರೂ ಕೂಡ ಬಿಪಿಎಲ್ ಸೇವೆ ಪಡೆಯುತ್ತಿವೆ ಈ ನಿಟ್ಟಿನಲ್ಲಿ ಸೂಕ್ತ ಕಾರ್ಯಾಚರಣೆ ನಡೆಸಿ ಅಂತವರಿಂದ ದಂಡ ವಸೂಲಿ ಮಾಡುವ ಭರವಸೆ ನೀಡಿದ್ದಾರೆ.

ಕಳೆದ ವರ್ಷ ಕೂಡ ನಾಲ್ಕು ಲಕ್ಷ ರೇಷನ್ ಕಾರ್ಡ್ ಡಿಲೀಟ್ ಮಾಡಿ 13 ಕೋಟಿ ದಂಡವನ್ನು ವಸೂಲಿ ಕೂಡ ಮಾಡಿದ್ದು, ಈ ವರ್ಷವೂ ಚುರುಕು ಕಾರ್ಯಾಚರಣೆ ನಡೆಸುವ ಭರವಸೆ ನೀಡಿದರು. ಒಟ್ಟಿನಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸೂಕ್ತ ಕಾರ್ಯಾಚರಣೆ ನಡೆಸಿ ಬಿಪಿಎಲ್ ಗೆ ಅರ್ಹರಿಲ್ಲದ ರೇಷನ್ ಕಾರ್ಡ್ ಡಿಲೀಟ್ ಮಾಡುವ‌ ಮೂಲಕ ಅರ್ಹ ಫಲಾನುಭವಿಗಳಿಗೆ ಲಾಭ ದೊರೆಯುವಂತೆ ಮಾಡಬೇಕಿದೆ. ಅಲ್ಲದೇ ಸರ್ಕಾರಿ ನೌಕರಿಯಲ್ಲಿದ್ದು, ಬಿಪಿಎಲ್ ಬಳಕೆ ಮಾಡುತ್ತಿರುವವರಿಗೆ ಬಿಸಿ ಮುಟ್ಟಿಸುವ ಕಾರ್ಯವನ್ನು ಮಾಡಬೇಕಿದೆ.

Share

Related posts

ಹುಬ್ಬಳ್ಳಿ: ಪತಿ-ಪತ್ನಿಯ ಜಗಳ ದಲ್ಲಿ, ಪತಿಯಿಂದ ಬರ್ಬರ ಹತ್ಯೆ! ಪತಿ ನೇಣು ಬಿಗಿದು ಸಾವು! ಏನಿದು ಪ್ರಕರಣ?

admin

ಬೈರಿ ದೇವರಕೊಪ್ಪದ ಹಜರತ್ ಮಹಮ್ಮದ್ ಶಾ ಖಾದ್ರಿ ದರ್ಗಾ ಹಾಗೂ ಮಸೀದಿ ನಿರ್ಮಾಣ ನಿಂತಿದ್ದು ಯಾಕೆ?ಇದರ ಹಿಂದಿನ ವಿವರ ಇಲ್ಲಿದೆ.! ವಿಡಿಯೋ ಪೂರ್ತಿ ನೋಡಿ..

admin

ಹುಬ್ಬಳ್ಳಿ: ಎಚ್ಚರ – S.I.R SCAM ಬಗ್ಗೆ ಎಚ್ಚರಿಕೆ, ಯಾರಿಗೂ OTP ಕೊಡಬೇಡಿ. S.I.R ಫಾರ್ಮ್ ಹೆಸರಲ್ಲಿ ನಡೆಯುತ್ತಿರುವ ವಂಚನೆ..!

admin

Leave a Comment