ಸಂಶಿ ಗ್ರಾಮದಲ್ಲಿ ಮುಂಬರುವ 2024ರ ಲೋಕಸಬಾ ಚುನಾವಣೆ ನಿಮಿತ್ಯ ಗ್ರಾಮದ ಮಾಜಿ ಶಾಸಕರೂ ದಿ.ಬಸಪ್ಪ ಅ ಉಪ್ಪಿನ ಇವರ ನಿವಾಸದ ಸಭಾಂಗಣದಲ್ಲಿ ರಜತ ಉಳ್ಳಾಗಡ್ಡಿಮಠ ಅವರು ಕಾರ್ಯಕರ್ತರನ್ನು ಸಂಘಟನೆಗೆ ಬಲ ಪಡಿಸುವ ನಿಟ್ಟಿನಲ್ಲಿ ಸಭೆ ನಡೆಸಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷ ಬಡಜನರಿಗೆ ಹತ್ತು ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತಂದು ಬಡವರ ಪಾಲಿಗೆ ದಾರಿ ದೀಪವಾಗಿದೆ.
ಕಾಂಗ್ರೆಸ್ ಪಕ್ಷವು ದೇಶದ ಸ್ವಾತಂತ್ರ್ಯ ಕೊಡಿಸುವುದರಿಂದ ಹಿಡಿದು ಇಂದಿನ ತಂತ್ರಜ್ಞಾನ ಮುಂದುವರೆದ ಕ್ಷಣ ಕೂಡಾ ಕಾಂಗ್ರೇಸ್ ನೀಡಿದ ಕೊಡುಗೆ ಪಕ್ಷಕ್ಕಾಗಿ ದುಡಿಯೋಣ ಎಂದು ರಜತ್ ಉಳ್ಳಾಗಡ್ಡಿಮಠ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯರಾದ ಮಲ್ಲೇಶ ಬೆಳ್ವಾಡಿ, ಬಸಪ್ಪ ನಾಯ್ಕರ, ಇರ್ಷಾದ್ ಮುಲ್ಲಾ ಅಲ್ತಾಪ ಮುಲ್ಲಾ, ರಬ್ಬಾನಿ ಗೋಕಾವಿ, ಹಿರಿಯ ಮುಖಂಡರಾದ ವಿದ್ಯಾಧರ ಸುಂಕದ, ಲೋಕೇಶ ಸರಾವರಿ ಶರೀಪ ಮುಡ್ಸಿಬನ ಇರಪ್ಪ ರಾಟಿ ಹಾಲಾಜ್ಜ ತಡಾಳ ಶಿವಾನಂದ ಪೂಜಾರ ಹರೀಶ ಲಕ್ಷ್ಮಶ್ವರ ಲಾಲಸಾಬ ಕಣವಿ, ಹನಮಂತ ಹಿರೇಹಳಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
