August 3, 2026
Startv News | Hubli | Kannada News
ಅಪರಾಧ ಕರ್ನಾಟಕ ಸುದ್ದಿ ಸ್ಥಳೀಯ ಹುಬ್ಬಳ್ಳಿ-ಧಾರವಾಡ

ಹುಬ್ಬಳ್ಳಿಯಲ್ಲಿ ಮತ್ತೆ ಒಂದೂ ಹೆಣ್ಣಿನ ರಕ್ತ! ಲೋಕಸಭಾ ಚುನಾವಣೆ ಮುಗಿದಿದೆ. ಈಗ ಪ್ರತಿಭಟನೆ ಮಾಡುವವರು ಯಾರು??

ಹುಬ್ಬಳ್ಳಿಯ ಬಿವಿ ಕಾಲೇಜಿನಲ್ಲಿ ನಡೆದಿದ್ದ ನೇಹಾ ಹಿರೇಮಠ್ ಕೊಲೆ ಮಾಸುವ ಮುನ್ನವೇ ಹುಬ್ಬಳ್ಳಿಯಲ್ಲಿ ಇಂದು ಮತ್ತೆ ನೆತ್ತರು ಹರಿದಿದೆ.

ಹುಬ್ಬಳ್ಳಿಯ ವೀರಾಪುರ್ ಓಣಿಯಲ್ಲಿ ಇರುವ ತನ್ನ ಅಜ್ಜಿಯ ಮನೆಯಲ್ಲಿ ಮಲಗಿದ್ದ ಅಂಜಲಿ ಎಂಬಾಕೆಯನ್ನು ಹಿಂದೂ ಯುವಕನೊಬ್ಬ ಕೊಲೆ ಮಾಡಿ ಪರಾರಿಯಾಗಿದ್ದಾನೆ. ಹಂತಕನನ್ನು ಗಿರೀಶ್ ಎಂದು ಗುರುತಿಸಲಾಗಿದೆ.
ಅಂಜಲಿ ಎಂಬ ಹೆಣ್ಣು ಮಗು ಅನಾಥ ತಂದೆ ತಾಯಿ ತೀರಿಕೊಂಡ ಬಳಿಕ ಅಕ್ಕಪಕ್ಕದ ಮನೆಯಲ್ಲಿ ಮನೆ ಕೆಲಸ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದಳು.
ಗಿರೀಶ್ ಎಂಬಾತ ಅಂಜಲಿ ಮೇಲೆ ಅದ್ಯಾವಾಗ ಕಣ್ಣು ಹಾಕಿದ್ದನೋ ಗೊತ್ತಿಲ್ಲ, ಮೈಸೂರಿಗೆ ಹೋಗೋಣ ಬಾ ಎಂದು ಹಿಂದು ಬಿದ್ದಿದ್ದಾನೆ ಆಕೆ ಬರದೇ ಇದ್ದಾಗ ಬೆದರಿಕೆ ಹಾಕಿದ್ದಾನೆ.
ನಿನ್ನನ್ನು ನಿಹಾ ಹಿರೇಮಠ್ ಕೊಲೆ ಮಾಡಿದಂಗೆ ಮಾಡುತ್ತೇನೆ ಎಂದು ಜೀವವಿದರಿಕೆ ಹಾಕಿದ್ದಾನಂತೆ ಎಂದು ತಿಳಿದುಬಂದಿದೆ. ಇದನ್ನು ಅಂಜಲಿಯ ಅಜ್ಜಿ ಪೊಲೀಸರ ಗಮನಕ್ಕೆ ತಂದಿದ್ದರಂತೆ. ಅನಾಥ ಅಂಜಲಿ ಮೇಲೆ ಮನಸ್ಸು ಇಚ್ಚಿ ಕೊಚ್ಚಿ ಕೊಲೆ ಮಾಡಿರುವ ಗಿರೀಶ್ ಎಂಬ ಯುವಕನಿಗೆ ಶಿಕ್ಷೆ ಆಗಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಅನಾಥ ಅಂಜಲಿಗೆ ನ್ಯಾಯ ಕೊಡಿಸುವುದಕ್ಕೆ ಸಂಘಟನೆಗಳು ಹೋರಾಟ ಮಾಡಬೇಕಿದೆ. ಏನು ಮಾಡೋದು ಲೋಕಸಭಾ ಚುನಾವಣೆ ಮುಗಿದಿದೆ. ಈಗ ಪ್ರತಿಭಟನೆ ಮಾಡುವವರು ಯಾರು, ಪ್ರತಿಭಟನೆ ಆಗುತ್ತಾ? ಈ ಅನಾಥಶವಕ್ಕೆ ನ್ಯಾಯ ಸಿಗುತ್ತಾ? ಎಂಬ ಕುತೂಹಲ ಎಲ್ಲರಲ್ಲಿ ಮೂಡಿದೆ. ಪಾಪೀ ಗಿರೀಶನಿಗೆ ಗಲ್ಲು ಶಿಕ್ಷೆ ಆಗುವವರಿಗೆ ಧ್ವನಿ ಮುಗಿಲು ಮುಟ್ಟಬೇಕು. ಈ ಹೆಣ್ಣು ಮಗುವಿಗೆ ನ್ಯಾಯ ಸಿಗಬೇಕು. ಅಧಿಕಾರಿಗಳು ಎಲ್ಲರಿಗೂ ಸಮಾನವಾದ ಹಕ್ಕು, ನ್ಯಾಯ ದೊರಕಿಸಿಕೊಡಬೇಕು ಎಂದು ಸಾರ್ವಜನಿಕರ ಆಗ್ರಹವಾಗಿದೆ.

Share

Related posts

ಹುಬ್ಬಳ್ಳಿ: ಸಿ ಎಂ ಸಿದ್ದರಾಮಯ್ಯ ಅವರ ಅದ್ಭುತ ಮಾತುಗಳು.! ಅಲ್ಪ ಸಂಖ್ಯಾತರಿಗೆ ಅನುದಾನ ಕೊಟ್ಟೆ ಕೊಡ್ತೀನಿ. ಹಜರತ್ ಭಾಷಾ ಖಾದ್ರಿ ಆಶ್ತಾನಾ ದಲ್ಲಿ ಮುಸ್ಲಿಂ ಕಾನ್ಫರೆನ್ಸ್!

admin

8 ವರ್ಷ ದಿಂದ ವೈದ್ಯರಿಂದ ಆಗದ ಕೆಲಸ ಸಾಮಾನ್ಯ ವ್ಯಕ್ತಿಯಿಂದ ಚಿಕಿತ್ಸೆ.! ಅವರೇ ತೌಸಿಫ್ ಪೀ ಟಿ.. ಏನಿದು ಅದ್ಭುತ ಪವಾಡ .?

admin

64 ತರಹದ ತೆರಿಗೆ (ಟ್ಯಾಕ್ಸ್) ಕಟ್ಟಿದರು ಯಾಕೆ ನಮ್ಮ ಭಾರತ ದೇಶದ ಜನತೆ ಬಡವರಾಗಿದ್ದಾರೆ? ಒಂದು ಸಲ ರೋಡ್ ತೆರಿಗೆ (ಟ್ಯಾಕ್ಸ್) ಕಟ್ಟಿದರೆ ಟೋಲ್ ಟ್ಯಾಕ್ಸ್ ಯಾಕೆ?

admin

Leave a Comment