Startv News | Hubli | Kannada News
ಕರ್ನಾಟಕ ಸುದ್ದಿ ರಾಜಕೀಯ ರಾಷ್ಟ್ರೀಯ ವಾಣಿಜ್ಯ ಸುದ್ದಿಗಳು ಹುಬ್ಬಳ್ಳಿ-ಧಾರವಾಡ

64 ತರಹದ ತೆರಿಗೆ (ಟ್ಯಾಕ್ಸ್) ಕಟ್ಟಿದರು ಯಾಕೆ ನಮ್ಮ ಭಾರತ ದೇಶದ ಜನತೆ ಬಡವರಾಗಿದ್ದಾರೆ? ಒಂದು ಸಲ ರೋಡ್ ತೆರಿಗೆ (ಟ್ಯಾಕ್ಸ್) ಕಟ್ಟಿದರೆ ಟೋಲ್ ಟ್ಯಾಕ್ಸ್ ಯಾಕೆ?

ತೆರಿಗೆಯು ಒಂದು ಸರ್ಕಾರ ಅಥವಾ ಅದರ ಕಾರ್ಯಾತ್ಮಕ ಸಮಾನವಾದ ಸಂಸ್ಥೆಯು ತೆರಿಗೆದಾರನ ಮೇಲೆ ಹೇರುವ ಶುಲ್ಕ. ಮಾರಾಟಗಾರ ಮತ್ತು ಕೊಳ್ಳುವವರ ಮಧ್ಯೆ ವಸ್ತುವೊಂದು ಮಾರಲ್ಪಟ್ಟಾಗ ಸ್ಥಳೀಯ ವಾಣಿಜ್ಯ ತೆರಿಗೆ ಇಲಾಖೆಯು ಸದರಿ ವಸ್ತುವಿನ ಮೇಲೆ ವಿಧಿಸುವ ಶುಲ್ಕವನ್ನು ತೆರಿಗೆಯೆಂದು ಹೇಳಬಹುದು.

ನಾವು ನಮ್ಮ ತೆರಿಗೆಗಳನ್ನು ಮಾಡುವ ರೀತಿಯಲ್ಲಿ ಕ್ರಾಂತಿಕಾರಿಗೊಳಿಸಬೇಕಾಗಿದೆ. ಆದರೆ GST ಎಂದರೇನು ಮತ್ತು ಪ್ರಸ್ತುತ ತೆರಿಗೆ ರಚನೆಯನ್ನು ಹೇಗೆ ಸುಧಾರಿಸುತ್ತದೆ? ಮತ್ತು ಮುಖ್ಯವಾಗಿ, ದೇಶಕ್ಕೆ ಅದರ ತೆರಿಗೆ ನೀತಿಗಳಲ್ಲಿ ಇಂತಹ ಬೃಹತ್ ಪರಿಷ್ಕರಣೆ ಏಕೆ ಬೇಕು? ಈ ಆಳವಾದ ಲೇಖನದಲ್ಲಿ ನಾವು ಈ ಪ್ರಶ್ನೆಗಳಿಗೆ ಉತ್ತರಿಸುತ್ತೇವೆ.

ಮೊದಲು ನಾವು ರೋಡ್ ಟ್ಯಾಕ್ಸ್ ಕೊಡುತ್ತೇವೆ, ನಂತರ ನಾವು ಟೂಲ್ ಟ್ಯಾಕ್ಸ್ ಕೊಡುತ್ತೇವೆ.. ರೋಡ್ ಟ್ಯಾಕ್ಸ್ ಕೊಟ್ಟಿದ ನಂತರ ಟೋಲ್ ಟ್ಯಾಕ್ಸ್ ಏಕೆ ಬೇಕು? ಸಾರ್ವಜನಿಕರು ಕೊಟ್ಟಂತಹ ರೋಡ್ ಟ್ಯಾಕ್ಸ್ ಲೀ ರೋಡನ್ನ ನಿರ್ಮಿಸುತ್ತಾರೆ ಆದರೆ ಪದೇಪದೇ ಟೂಲ್ ಟ್ಯಾಕ್ಸ್ ಏಕೆ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡುತ್ತದೆ.
ಸರ್ಕಾರಕ್ಕೆ ಭಾರತೀಯರು 64 ತರಹದ ತೆರಿಗೆ ಕಟ್ಟುತ್ತಾರೆ. ಪ್ರತಿ 25-50 ಕಿಲೋ ಮೀಟರ್ ಲೀ ಟೋಲ್ ಟ್ಯಾಕ್ಸ್ ಕಟ್ಟುವುದು ಏಕೆ? ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಹೆಚ್ಚಾಗಿದ್ದರೂ ಸಹ ಸಾರ್ವಜನಿಕರು ಭಾರತೀಯರು ಟೋಲ್ ಟ್ಯಾಕ್ಸ್ ಕಟ್ಟುವಂತಹ ಗಂಭೀರ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಇದನ್ನ ಪ್ರಶ್ನಿಸುವವರು ಯಾರು? ಯಾರಿಗೆ ಪ್ರಶ್ನೆ ಕೇಳಬೇಕು? ಪ್ರಶ್ನೆ ಕೇಳಿದರೆ ಸರ್ಕಾರದ ಉತ್ತರವೇನು?
ಭಾರತೀಯರ ದಿನದ ಚಟುವಟಿಕೆಯಲ್ಲಿ ಪ್ರತಿ ವ್ಯವಸ್ಥೆಯಲ್ಲೂ ತೆರಿಗೆ ಕಟ್ಟುತ್ತಾರೆ. ತೆರಿಗೆ ಹಣ ಹೋಗುವುದಾದರೂ ಎಲ್ಲಿ?
ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರದಿಂದ ತೆರಿಗೆ ಹಣ ಹೋದ ನಂತರ ರಾಜ್ಯಕ್ಕೆ ಸಿಗುವುದಾದರೂ ಎಷ್ಟು? ಈ ತೆರಿಗೆ ಹಣವನ್ನು ಕಡಿಮೆ ಮಾಡಲು ಸಾಧ್ಯವಿಲ್ಲವೇ? ಮುಂದಿನ ವರದಿಯಲ್ಲಿ ಎಲ್ಲ ಪ್ರಶ್ನೆಗೂ ಉತ್ತರ ಸಿಗಲಿದೆ..!

Share

Related posts

ಕುಂದಗೋಳ ಮತಕ್ಷೇತ್ರದಲ್ಲಿ ಸಂಘಟನೆ ಸಭೆ :ರಜತ ಉಳ್ಳಾಗಡ್ಡಿಮಠ.! ಸಂಶಿ ಗ್ರಾಮದಲ್ಲಿ ಮುಂಬರುವ 2024ರ ಲೋಕಸಬಾ ಚುನಾವಣೆ ನಿಮಿತ್ಯ.! ಏನಿದು ಸಭೆ? 👇ವಿಡಿಯೋ ನೋಡಿ.

admin

ಹುಬ್ಬಳ್ಳಿ: ಮಹಾನಗರ ಪಾಲಿಕೆ ಆಯುಕ್ತಾರಾದ ಈಶ್ವರ ಉಳ್ಳಾಗಡ್ಡಿ ಅವರು ಕಾಣೆಯಾಗಿದ್ದಾರೆ ಎಂದು ದೂರು ನೀಡಿದ ಪೌರಕಾರ್ಮಿಕರು.! ನ್ಯಾಯ ಯಾವಾಗ?? ಧ್ವನಿ ಸರ್ಕಾರಕ್ಕೆ ಕೇಳಿಸುತ್ತಾ?

admin

ಹುಬ್ಬಳ್ಳಿ ಯಲ್ಲಿ ಸ್ಮಾರ್ಟ್ ವಾಚ್ ವಿಷಯದ ಬಗ್ಗೆ ಚಾಕುವಿನಿಂದ ಹತ್ಯೆ. ಏನಿದು ಮತ್ತೆ ಸ್ಮಾರ್ಟ್ ಸಿಟಿ ಯಲ್ಲಿ.?

admin

Leave a Comment