ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಅವರು ಪಾದಚಾರಿ ರಸ್ತೆ ಬದಿ ಕೂತಿದ್ದ ಬಡವನ ಕುಂದು ಕೊರತೆಯನ್ನು ಕಂಡು ಟೌನ್ ಪೊಲೀಸ್ ಠಾಣೆಯ ಸಿಪಿಐ ಮೊಹಮ್ಮದ್ ರಫೀಕ್ ಅವರಿಗೆ ಸಲಹೆ ನೀಡಿದ ನಿಟ್ಟಿನಲ್ಲಿ ಪೊಲೀಸ್ ಅಧಿಕಾರಿಗಳಿಂದ ಬಡವನಿಗೆ ಸಹಾಯ ಒದಗಿ ಬಂದಿದೆ.
ಇವತ್ತು ಸಂಜೆ ಪೆಟ್ರೋಲಿಂಗ್ ಸಮಯದಲ್ಲಿ ಟೌನ್ ಪೊಲೀಸ್ ಠಾಣೆಯ ಸಿಪಿಐ ಮೊಹಮ್ಮದ್ ರಫೀಕ್ ಅವರು ಹಾಗೂ ಸೌತ್ ಟ್ರಾಫಿಕ್ ಪೊಲೀಸ್ ಅಧಿಕಾರಿ ಆರ್ ಎಚ್ ನದಾಫ್ ಅವರು ಕಮಿಷನರ್ ಎನ್ ಶಶಿಕುಮಾರ್ ಅವರ್ ಸಲಹೆ ದ್ ಮೇರೆಗೆ ರಸ್ತೆ ಬದಿ ಕೂತಿದ್ದ ಬಡವನ ಕೊಂದು ಕೊರತೆಯನ್ನು ಹೇರ್ ಕಟ್, ಬಟ್ಟೆ, ಒಳ್ಳೆ ಊಟ ಹಾಗೂ ಕೆಲಸ ಕೊಟ್ಟು ಮಾನವೀಯತೆ ಮೆರೆದಿದ್ದಾರೆ.
