ವಿಷಯ :- ಪೌರಕಾರ್ಮಿಕರ ಸಂಘದ 3 ನೇ ದಿನದ ಅನಿರ್ದಿಷ್ಟ ಅಹೋರಾತ್ರಿ ಆಮರಣ ಉಪವಾಸ ಹೋರಾಟ ಆಯುಕ್ತರ ನಡೆ ಖಂಡಿಸಿ ಆರಬೆತ್ತಲೆ ಪ್ರತಿಭಟನೆ ಕುರಿತು
ದಿನಾಂಕ 20-07-2024 ರಂದು ಪೌರಕಾರ್ಮಿಕರ ಸಂಘದ ವಿವಿಧ ಹಕ್ಕೋತಾಯಗಳನ್ನು ಈಡೇರಿಸುವಂತೆ ಆಗ್ರಹಿಸಿ 3 ನೇ ದಿನದ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಆಮರಣ ಉಪವಾಸ ಹೋರಾಟ ಸರ್ಕಾರದ ಹಾಗೂ ಪಾಲಿಕೆಯ ದಲಿತ ವಿರೋಧಿ ನೀತಿಯನ್ನು ಖಂಡಿಸಿ ಪೌರಕಾರ್ಮಿಕರಿಂದ ಆರಬೆತ್ತಲೆ ಪ್ರತಿಭಟನೆ ನಡೆಸಲಾಯಿತು
ಸರ್ಕಾರದ ಆದೇಶಗಳು ಜಿಲ್ಲಾಧಿಕಾರಿಗಳ ಆದೇಶಗಳು ಹಾಗೂ ಅನೇಕ ನಿರ್ದೇಶನಗಳು, ರಾಷ್ಟ್ರೀಯ / ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಆದೇಶಗಳು, ನಿರ್ದೇಶನಗಳು, ತೀರ್ಮಾನಗಳು ಮತ್ತು ಸ್ವತಃ ಪಾಲಿಕೆ ಆಯುಕ್ತರು ಹೋರಡಿಸಿರುವ ಆದೇಶಗಳನ್ನು ದಿಕ್ಕರಿಸಿ ಪೌರಕಾರ್ಮಿಕರ ಶಾಸನ ಬದ್ದ ಹಕ್ಕುಗಳು, ಕಾರ್ಮಿಕ ಕಾಯ್ದೆ ಸೌಲಭ್ಯಗಳಿಂದ ವಂಚಿಸಿ ದಲಿತ ಪೌರಕಾರ್ಮಿಕರ ಮೇಲೆ ನಿರಂತರ ಶೋಷಣೆ ಹಾಗೂ ದೌರ್ಜನ್ಯ ಮಾಡುತಿದ್ದಾರೆ ಪಾಲಿಕೆ ಆಯುಕ್ತರು ಹಾಗೂ ಅಧಿಕಾರಿಗಳು ಸ್ಥಳೀಯ ರಾಜಕಾರಣಿಯ ಒತ್ತಡಕ್ಕೆ ಮಣಿದು ಪೌರಕಾರ್ಮಿಕರಿಗೆ ನ್ಯಾಯಯುತ ಸೌಲಭ್ಯಗಳಿಂದ ವಂಚಿಸುತಿದ್ದಾರೆ
ಸೋಮವಾರದಿಂದ ನಮ್ಮ ಹೋರಾಟಕ್ಕೆ ಸ್ಥಳೀಯ ಖಾಯಂ ಪೌರಕಾರ್ಮಿಕರು ಸಾಮೋಹಿಕ ರಜೆಯನ್ನು ಘೋಷಣೆ ಮಾಡಿ ಪೌರಕಾರ್ಮಿಕರ ಹೋರಾಟದಲ್ಲಿ ಬಾಗವಹಿಸಲಿದ್ದಾರೆ
ಅಲ್ಲದೇ ಪೌರಕಾರ್ಮಿಕರ ಸಂಘದ ರಾಜ್ಯ ಅಧ್ಯಕ್ಷರು ಶ್ರೀ ನಾರಾಯಣ ಅವರ ನೇತೃತ್ವದಲ್ಲಿ ರಾಜ್ಯದ್ಯಂತ ಸ್ವಚ್ಛತಾ ಕೆಲಸ ಸ್ಥಗಿತಗೊಳಿಸಲಿದ್ದಾರೆ ಸ್ಥಳೀಯ ದಲಿತ ಸಂಘಟನೆಗಳು ಹೋರಾಟಕ್ಕೆ ಬೆಂಬಲ ಸೂಚಿಸಿದ್ದು ಸೋಮವಾರದಿಂದ ಹೋರಾಟದಲ್ಲಿ ಬಾಗಿಯಾಗಲ್ಲಿ ದಾರೆ
ಕಾರ್ಮಿಕ ಸಚಿವರು ಈ ಬಗ್ಗೆ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು ತಪ್ಪಿದಲ್ಲಿ ಮುಂದೆ ಹೋರಾಟನಿರತ ಪೌರಕಾರ್ಮಿಕರಿಗೆ ಆಗಬಹುದಾದ ಸಾವು ನೋವುಗಳಿಗೆ ಸರ್ಕಾರವೇ ನೇರ ಹೊಣೆಯಾಗಲಿದೆ ಎಂದು ಎಚ್ಚರಿಕೆ ನೀಡುತೇವೆ
ಸಂಘವು ಸೋಮವಾರದಿಂದ ಉಗ್ರಹೋರಾಟವನ್ನು ನಡೆಸುತ್ತಾ ಭ್ರಷ್ಟ ಹಾಗೂ ರಾಜಕಾರಣಿಗಳ ಕೈಗೊಂಬೆಯಾಗಿ ಕೆಲಸ ಮಾಡುತ್ತಿರುವ ಪಾಲಿಕೆ ಆಯುಕ್ತರು ವರ್ಗಾವಣೆಗೆ ಆಗ್ರಹಿಸಿ ಮುಖ್ಯಮಂತ್ರಿಗಳ ಮನೆ ಮುಂದೆ ಪ್ರತಿಭಟನೆ ನಡೆಸಲಾಗುವದು.
ಪ್ರತಿಭಟನೆಯಲ್ಲಿ ಸಂಘದ ಧಾರವಾಡ ಜಿಲ್ಲಾ ಅಧ್ಯಕ್ಷರಾದ ಡಾ. ವಿಜಯ ಗುಂಟ್ರಾಳ, ಗಾ ಳೆಪ್ಪಾ ದ್ವಾಸಲಕೇರಿ, ಗಂಗಮ್ಮ ಸಿದ್ರಾಮಪುರ, ಕನಕಪ್ಪ ಕೋಟಬಾಗಿ ರೇಣುಕಾ ನಾಗರಾಳ, ಶರಣಪ್ಪ ಅಮರಾವತಿ, ತಾಯಪ್ಪ ಹಾಳಾಕೇರಿ, ಸುನಿಲ್ ದೊಡ್ಡಮನಿ, ಶರೀಫ್ ಮಸರಕಲ್, ತಾಯಪ್ಪ ಕಾಣೆಕಲ್, ವೆಂಕಟೇಶ್ ಪಾಲ ವಾಯಿ, ಶಾಂತವ್ವ ಚುರಮುರಿ, ನಾಗಮ್ಮ ಕರೆಪಾತ್, ದೇವಕ್ಕ ಕಟ್ಟಿಮನಿ, ಸುಮಿತ್ರಾ ಕೊಂಡಪಲ್ಲಿ ಇನ್ನು ಮುಂತಾದ ನೂರಾರು ಪೌರಕಾರ್ಮಿಕರು ಉಪಸ್ಥಿತರಿದ್ದರು
