August 4, 2026
Startv News | Hubli | Kannada News
ಕರ್ನಾಟಕ ಸುದ್ದಿ ವಿಶೇಷ ವರದಿ ಸುದ್ದಿಗಳು ಸ್ಥಳೀಯ ಹುಬ್ಬಳ್ಳಿ-ಧಾರವಾಡ

ಹುಬ್ಬಳ್ಳಿ: ಹಳೇ ಬಸ್ ನಿಲ್ದಾಣ ನಿರ್ಮಾಣ ಪೂರ್ಣ, ಸಾರ್ವಜನಿಕ ಬಳಕೆ ಯಾವಾಗ??

ಉತ್ತರ ಕರ್ನಾಟಕದ ನಗರ ಮತ್ತು ವಾಣಿಜ್ಯ ನಗರ ಹುಬ್ಬಳ್ಳಿಯ ಸಾರ್ವಜನಿಕರಿಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ. ಚನ್ನಮ್ಮ ವೃತ್ತದ ಸಮೀಪದ ಹಳೇ ಬಸ್‌ ನಿಲ್ದಾಣಕ್ಕೆ ಆಧುನಿಕವಾಗಿ ರೂಪಗೊಳ್ಳುತ್ತಿದೆ. ಕಳೆದ ಎರಡು ವರ್ಷಗಳಿಂದ ನಡೆಯಿತ್ತಿದ್ದಾರೆ ಕಟ್ಟಡ ಕಾಮಗಾರಿ ಪೂರ್ಣಗೊಂಡಿದೆ. ಬಹುತೇಕ ಎಲ್ಲವು ಅಂತಿಮ ಹ0ತಕ್ಕೆ ಬಂದಿದೆ. ಈ ಮೂಲಕ ನಗರದ ಮಹತ್ವದ ಹೆಗ್ಗುರುತುಗಳಲ್ಲಿ ಒಂದಾದ ಹಳೇ ಬಸ್ ನಿಲ್ದಾಣ ಮರಳಲಿದೆ.

ಸ್ಮಾರ್ಟ್ ಸಿಟಿ ಯೋಜನೆಯಡಿ 2022ರಲ್ಲಿ ನಿಲ್ದಾಣದ ಅಭಿವೃದ್ಧಿ ಆರಂಭಿಸಲಾಯಿತು. ಅದಾದ ಬಳಿಕ ಚನ್ನಮ್ಮ ವೃತ್ತದಲ್ಲಿ ಒಂದಷ್ಟು ಕಾಮಗಾರಿ ಶುರುವಾದ ಹಿನ್ನೆಲೆಯಲ್ಲಿ ಈ ಭಾಗದಲ್ಲಿನ ಓಡಾಟಕ್ಕೆ ಒಂದಷ್ಟು ತೊಂದರೆ ಉಂಟಾಗುತ್ತಿತ್ತು. ಆದಷ್ಟು ಶೀಘ್ರವೇ ಇಲ್ಲ ತ್ವರಿತಗತಿಯ ಸಂಚಾರ ಇಲ್ಲಿ ಶುರುವಾಗಲಿದೆ.

ನೆಲಮಾಳಿಗೆಯಲ್ಲಿ ಸುಮಾರು 100 ಬೈಕ್‌ಗಳು, 70 ಕಾರುಗಳಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಬಸ್ ಟರ್ಮಿನಲ್ ಸ್ವಾವಲಂಬಿಯಾಗಲು ಟರ್ಮಿನಲ್ 25,000 kW ಸೌರ ವಿದ್ಯುತ್ ಸ್ಥಾವರ ಸೌಲಭ್ಯ ಒದಗಿಸಲಾಗಿದೆ. ವಿದ್ಯುತ್ ಇಲ್ಲದಿದ್ದಾಗಲೂ ನಿಲ್ದಾಣದೊಳಗೆ ಬೆಳಕು ಇರುತ್ತದೆ. ಇನ್ನೂ ಬೇಸ್‌ಮೆಂಟ್​​ನಲ್ಲಿ ವಾಹನಗಳ ಪಾರ್ಕಿಂಗ್​ಗೂ ಸ್ಥಳಾವಕಾಶ ಇದೆ.

ಮೊದಲ ನೆಲಮಹಡಿಯಲ್ಲಿ ಬಿಆರ್​ಟಿಎಸ್​ ಹಾಗೂ ಸಿಟಿ ಬಸ್ ನಿಲ್ದಾಣಕ್ಕೆ ಸ್ಥಳಾವಕಾಶ ಒದಗಿಸಲಾಗಿದೆ. 16 ಸಾರಿಗೆ ನಿಲ್ಲುವಷ್ಟು ವಿಶಾಲ ಜಾಗ ಸಿಟಿ ಬಸ್​ಗಾಗಿ 8 ಬೇಜ್ ಹಾಗೂ ಬಿಆರ್​ಟಿಎಸ್ 6 ಬೇಜ್, 1,407 ಸ್ಕ್ವೇರ್ ಮೀಟರ್ ವಾಣಿಜ್ಯ ಮಳಿಗೆ,ಮೊದಲ ಮಹಡಿ ಸಾರಿಗೆ ಬಸ್​ಗಾಗಿ ಮೀಸಲಿಡಲಾಗಿದೆ. ಒಂದೇ ಪ್ಲಾಟ್‌ಫಾರ್ಮ್‌ನಲ್ಲಿ ಕನಿಷ್ಠ 16 ಬಸ್​​ಗಳು ನಿಂತುಕೊಳ್ಳುವಷ್ಟು ವಿಶಾಲ ಜಾಗ ಇಲ್ಲಿದೆ.

ಸಿಟಿ ಬಸ್​ಗಾಗಿ 8 ಬೇಜ್ ಹಾಗೂ ಬಿಆರ್​ಟಿಎಸ್ 6 ಬೇಜ್, 1,407 ಸ್ಕ್ವೇರ್ ಮೀಟರ್ ವಾಣಿಜ್ಯ ಮಳಿಗೆ,ಮೊದಲ ಮಹಡಿ ಸಾರಿಗೆ ಬಸ್​ಗಾಗಿ ಮೀಸಲಿಡಲಾಗಿದೆ. ಒಂದೇ ಪ್ಲಾಟ್‌ಫಾರ್ಮ್‌ನಲ್ಲಿ ಕನಿಷ್ಠ 16 ಬಸ್​​ಗಳು ನಿಂತುಕೊಳ್ಳುವಷ್ಟು ವಿಶಾಲ ಜಾಗ ಇಲ್ಲಿದೆ.

ಪ್ರತಿ ಮಹಡಿಯಲ್ಲೂ ಪುರುಷರು, ಮಹಿಳೆಯರು ಹಾಗೂ ಲೈಂಗಿಕ ಅಲ್ಪಸಂಖ್ಯಾತರಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಮಾಡಲಾಗಿದೆ. ಇದೇ ಮೊದಲ ಬಾರಿಗೆ ನಿಲ್ದಾಣದಲ್ಲಿ ಪ್ರಥಮ ಚಿಕಿತ್ಸಾ ಘಟಕ ಸ್ಥಾಪಿಸಲಾಗಿದ್ದು, ಓರ್ವ ವೈದ್ಯ ಸಿಬ್ಬಂದಿ ಹೊಂದಿರುವ ಚಿಕ್ಕ ಆಸ್ಪತ್ರೆಗೆ ಇಲ್ಲಿರಲಿದೆ. ಹಿರಿಯ ನಾಗರಿಕರು, ವೃದ್ಧರು, ಮಕ್ಕಳು, ಮಹಿಳೆಯರ ಅನುಕೂಲಕ್ಕಾಗಿ ಲಿಫ್ಟ್​ ಹಾಗೂ ಎಕ್ಸಿಲೇಟರ್ ವ್ಯವಸ್ಥೆ ಮಾಡಿದ್ದೇವೆ. ಇಷ್ಟೆಲ್ಲ ವ್ಯವಸ್ಥಿತ ಸೌಲಭ್ಯ ಹೊಂದಿರುವ ನಿಲ್ದಾಣದ ಕಾಮಗಾರಿಯ ಕೆಲಸವನ್ನು 2 ವರ್ಷ 4 ತಿಂಗಳಲ್ಲಿ ಪೂರ್ಣಗೊಳಿಸಿದ್ದೇವೆ ಎಂದು ಹೇಳಿದ್ದಾರೆ.

ಇದೇ ನವೆಂಬರ್ ತಿಂಗಳ ಅಂತ್ಯಕ್ಕೆ ಎಲ್ಲಾ ಕಾಮಗಾರಿಗಳು ಪೂರ್ಣಗೊಳ್ಳಲಿವೆ.

Share

Related posts

ಬೆಂಗಳೂರು ಸೇರಿದಂತೆ 14 ಕಡೆಯಲ್ಲಿ ಸರ್ವೇ ಅಧಿಕಾರಿ ಮನೆ, ಕಚೇರಿ ಮೇಲೆ ಲೋಕಾಯುಕ್ತ ದಾಳಿ!

admin

ಹುಬ್ಬಳ್ಳಿ: ಅಣ್ಣತಮ್ಮಂದಿರು ಬಂದು ಮಾತಿಗೆ ಮಾತು ಜಗಳ ಶುರುವಾಗಿ ಕಲ್ಲು ಮತ್ತು ಇಟ್ಟಿಗೆಗಳನ್ನು ಎಸೆದು ಎರಡು ಕಡೆಯಿಂದ ಜಗಳ.! ಪೂರ್ತಿ ವಿಡಿಯೋ ನೋಡಿ 👇

admin

15 ದಿನಗಳಲ್ಲಿ ಸುಮಾರು 4.59 ಲಕ್ಷ ‘ಮೃತ ಫಲಾನುಭವಿಗಳ ಹೆಸರಿನಲ್ಲಿರುವ ಬಿಪಿಎಲ್ ಕಾರ್ಡ್ ಡಿಲೀಟ್.! ಏನಿದು?

admin

Leave a Comment