
ವಿಷಯ :- 134 ಪೌರಕಾರ್ಮಿಕರಿಗೆ ನೇರ ನೇಮಕಾತಿ ಆದೇಶ ಪತ್ರಗಳು ನೀಡುವಂತೆ, 799 ಗುತ್ತಿಗೆ ಪೌರಕಾರ್ಮಿಕರಿಗೆ ನೇರ ವೇತನ ಪಾವತಿಸುವಂತೆ ಹಾಗೂ ಸಂಘದ ವಿವಿಧ ಹಕ್ಕೋತಾಯಗಳನ್ನು ಈಡೇರಿಸುವಂತೆ ಆಗ್ರಹಿಸಿ ನೂರಾರು ಪೌರಕಾರ್ಮಿಕರು ಸಾರ್ವಜನಿಕರ ಬೂಟು ಪಾಲಿಶ್ ಮಾಡುವ ಮೂಲಕ ವಿನುತನ ಪ್ರತಿಭಟನೆ ಮಾಡಿದರು ಮತ್ತು ಪಾಲಿಕೆ ಆಯುಕ್ತರು ಕಾಣೆಯಾಗಿದ್ದಾರೆ ಅವರನ್ನು ಹುಡಿಕಿಕೊಡುವಂತೆ ಉಪನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ ಕುರಿತು
ಮೇಲ್ಕಾಣಿಸಿದ ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಆದೇಶದಂತೆ 870 ಪೌರಕಾರ್ಮಿಕರ ನೇರ ನೇಮಕಾತಿ ಮಾಡಿಕೊಳ್ಳುವಂತೆ ತಕ್ಷಣ 134 ನೇರ ನೇಮಕಾತಿ ಆದೇಶ ಪತ್ರಗಳನ್ನು ನೀಡುವಂತೆ ದಿನಾಂಕ 30-10-2023 ರ ಠರಾವು ಅನ್ವಯ 799 ಪೌರಕಾರ್ಮಿಕರಿಗೆ ನೇರ ವೇತನ ಪಾವತಿಸುವಂತೆ ಹಾಗೂ ಸಂಘಕ್ಕೆ ಕೊಠಡಿ ನೀಡುವಂತೆ, ವ್ಯತ್ಯಾಸದ ಬಾಕಿ ಮೊತ್ತಗಳನ್ನು ಪಾವತಿಸುವಂತೆ ಆಗ್ರಹಿಸಿ ಕಳೆದ 7 ದಿನಗಳಿಂದ ಅನಿರ್ದಿಷ್ಟ ಅಹೋರಾತ್ರಿ ಧರಣಿ ಸತ್ಯಾಗ್ರಹ ಆಮರಣ ಉಪವಾಸ ಹೋರಾಟವನ್ನು ನಡೆಸಿದ್ದೇವೆ ಜಿಲ್ಲಾಧಿಕಾರಿಗಳು , ಪಾಲಿಕೆ ಆಯುಕ್ತರು, ಸಹಾಯಕ ಕಾರ್ಮಿಕ ಆಯುಕ್ತರು, ಜಂಟಿ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಧರಣಿ ನಿರತ ಪೌರಕಾರ್ಮಿಕರ ಅಹವಾಲುಗಳನ್ನು ಸ್ವೀಕರಿಸದೆ ದಲಿತ ಕಾರ್ಮಿಕ ವಿರೋಧಿ ನೀತಿಯನ್ನು ಅನುಸರಿಸುತ್ತಿರುವುದು ಖಂಡನಿಯ
ಕಾರ್ಮಿಕ ಸಚಿವರ ತವರು ಜಿಲ್ಲೆಯಲ್ಲಿ ಕಾರ್ಮಿಕರಿಗೆ ರಕ್ಷಣೆ ಇಲ್ಲದಿರುವುದು ದುರಂತ ಕಳೆದ 7 ದಿನಗಳಿಂದ ಪೌರಕಾರ್ಮಿಕರು ನಡೆಯುತ್ತಿರುವ ಹೋರಾಟದ ಬಗ್ಗೆ ಕಾರ್ಮಿಕ ಸಚಿವರು ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್ ಲಾಡ ಅವರಿಗೆ ಮಾಹಿತಿ ಇಲ್ಲವೇ ಯಾರ ಒತ್ತಡಕ್ಕೆ ಮಣಿದು ಸರ್ಕಾರದ ಆದೇಶ ಅನುಷ್ಠಾನಕ್ಕೆ ಅಡ್ಡಿಯಾಗಿದ್ದಾರೆ ದಲಿತ ಕಾರ್ಮಿಕರ ಹಕ್ಕುಗಳು ಸೌಲಭ್ಯಗಳಿಗೆ ಕಡಿವಾಣ ಹಾಕುತ್ತಾ ಶೋಷಣೆ ಮಾಡುತಿದ್ದಾರೆ
ಸರ್ಕಾರದ ಆದೇಶಗಳು, ಆಯೋಗದ ನಿರ್ದೇಶನಗಳು, ಜಿಲ್ಲಾಧಿಕಾರಿಗಳ ನಿರ್ದೇಶನಗಳು ಹಾಗೂ ಪಾಲಿಕೆ ಸಾಮಾನ್ಯ ಸಭೆಯ ಠರಾವುಗಳನ್ನು ಮತ್ತು ಸರ್ಕಾರದ ಕಾರ್ಯದರ್ಶಿ ಶ್ರೀಮತಿ ದೀಪ ಚೋಳನ್ ಅವರು ಕಳೆದ ತಿಂಗಳು ಆಯುಕ್ತರಿಗೆ ನೀಡಿದ ನಿರ್ದೇಶನಗಳನ್ನು ಉಲ್ಲಂಘಿಸುವ ಮೂಲಕ ಪಾಲಿಕೆ ಆಯುಕ್ತರು ಸರ್ವಾಧಿಕಾರಿ ದೋರಣೆ ಅನುಸರಿಸುತಿದ್ದಾರೆ ಪೌರಕಾರ್ಮಿಕರ ಯಾವುದೇ ಬೇಡಿಕೆಗಳಿಗೆ ಸ್ಪಂದಿಸದೆ ನಕಾರಾತ್ಮಕ ದಮನಕಾರಿ ನೀತಿ ಹೋರಾಟವನ್ನು ಹತ್ತಿಕುವ ಶಡ್ಯಂತ್ರ ನಡೆಸಿದ್ದಾರೆ ಸ್ಥಳೀಯ ಶಾಸಕನ ತಾಳಕ್ಕೆ ತಕ್ಕಂತೆ ಕುಣಿಯುತಿದಾರೆ ಈ ಮೂಲಕ ಪೌರಾಕಾರ್ಮಿಕರ ಅಮಾನವೀಯ ಶೋಷಣೆ ಮುಂದುವರಿಸಿದ್ದಾರೆ
ಕಳೆದ ಜೂಲೈ ತಿಂಗಳಿನಲ್ಲಿ ಪೌರಕಾರ್ಮಿಕರ ಧರಣಿ ನಿರತ ಸ್ಥಳಕ್ಕೆ ಬಂದು 15 ದಿನಗಳಲ್ಲಿ 134 ಪೌರಕಾರ್ಮಿಕರ ನೇರ ನೇಮಕಾತಿ ಆದೇಶ ಪತ್ರ ನೀಡುವುದಾಗಿ ಹಾಗೂ 799 ಗುತ್ತಿಗೆ ಪೌರಕಾರ್ಮಿಕರಿಗೆ ನೇರ ವೇತನ ಪಾವತಿಸಲು ಅನುಮೋದನೆ ಪಡೆಯುವುದಾಗಿ ವಿವಿಧ ಬೇಡಿಕೆಗಳನ್ನು ಈಡೇರಿಸುತ್ತೆನೆ ಧರಣಿ ವಾಪಸ ಪಡೆಯಿರಿ ಎಂದು ಭರವಸೆ ನೀಡಿದ್ದರು ದಿನಾಂಕ 11-12-2024 ರಿಂದ ಅನಿರ್ದಿಷ್ಟ ಹೋರಾಟ ನಡೆಸುತಿದ್ದೇವೆ ಆದರೆ ಕಳೆದ 7 ದಿನಗಳಿಂದ ಪಾಲಿಕೆ ಆಯುಕ್ತರು ಕಾಣೆಯಾಗಿದ್ದಾರೆ ಅವರನ್ನು ಹುಡುಕಿಕೊಡುವಂತೆ ಉಪನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದೇವೆ
ನಮ್ಮ ಬೇಡಿಕೆಗಳನ್ನು ಕಡೆಗಣಿಸುತ್ತಿರುವ ಪಾಲಿಕೆ ಆಯುಕ್ತರ ಜಾತಿವಾದಿ ಮನಸ್ಥಿತಿಯನ್ನು ಖಂಡಿಸಿ ನೂರಾರು ಪೌರಕಾರ್ಮಿಕರು ಸಾರ್ವಜನಿಕ ಬೂಟು ಪಾಲಿಶ್ ಮಾಡುವ ಮೂಲಕ ಸರ್ಕಾರ ಜಿಲ್ಲಾಡಳಿತ ಪಾಲಿಕೆ ಆಯುಕ್ತರು ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ಹೊರಹಾಕಿದರು ಜಿಲ್ಲಾ ಉಸ್ತುವಾರಿ ಸಚಿವರು ಕೂಡಲೇ ಧರಣಿ ನಿರತ ಸ್ಥಳಕ್ಕೆ ಬರುವಂತೆ ಈ ಮೂಲಕ ಆಗ್ರಹಿಸುತೇವೆ
ಪ್ರತಿಭಟನೆಯಲ್ಲಿ ಸಂಘದ ಧಾರವಾಡ ಜಿಲ್ಲಾ ಅಧ್ಯಕ್ಷರಾದ ಡಾ. ವಿಜಯ ಗುಂಟ್ರಾಳ, ಗಂಗಮ್ಮ ಸಿದ್ರಾಮಪುರ, ಗಾಳೆಪ್ಪಾ ದ್ವಾಸಾಲಕೇರಿ, ಶಿವಮ್ಮ ಬೇವಿನಮರದ ಕಮಲವ್ವ ಕಲಕ್ಕನವರ, ನಿಂಗಮ್ಮ ಕಂದಳ್ಳಿ, ತಾಯಪ್ಪ ಕಣೆಕಲ್, ಪದ್ಮ ಚಿಕ್ಕಣವರ ರಮೇಶ ಗೊಲ್ಲರ, ಮಂಜುನಾಥ್ ಬೆಂಗಳೂರು ಬಸವರಾಜ ರಾಮ್ಮಯ್ಯನವರ, ಉಮಾ ದೊಡ್ಡಮನಿ, ಶೇಟವ್ವ ದೇವರಮನಿ, ನೀಲವ್ವ ಬೆಳವಟಗಿ ಲಷ್ಮಿ ತುರಿಹಳ ಲಾಲೆಮ್ಮಾ ಆಪುಸಪೇಟ್, ದೊಡ್ಡಪ್ಪ ವಂದಾಲ ಬಸವ್ವ ಮದರಿ, ಇನ್ನು ಮುಂತಾದ ನೂರಾರು ಪೌರಕಾರ್ಮಿಕರು ಉಪಸ್ಥಿತರಿದ್ದರು
