ಕರ್ನಾಟಕ ರಾಜ್ಯ ಮೋಟಾರ್ ಸಾರಿಗೆ ಹಾಗೂ ಇತರೆ ಸಂಬಂಧಿತ ಕಾರ್ಮಿಕರ ಸಾಮಾಜಿಕ ಬದ್ಧತೆ ಮತ್ತು ಕ್ಷೇಮಾಭಿವೃದ್ಧಿ ಮಂಡಳಿ, ಅಸಂಘಟಿತ ವರ್ಗದ ಕಾರ್ಮಿಕರಲ್ಲಿ ಖಾಸಗಿ ವಾಣಿಜ್ಯ ಸಾರಿಗೆ ಹಾಗೂ ಇತರೆ ಸಂಬಂಧಿತ ಕಾರ್ಮಿಕರು ಬಹು ಸಂಖ್ಯೆಯಲ್ಲಿದ್ದು, ಅವರಿಗೆ ಸಾಮಾಜಿಕ ಬದ್ಧತೆ ಹಾಗೂ ಕಲ್ಯಾಣ ಸೌಲಭ್ಯಗಳನ್ನು ಒದಗಿಸುವ ಉದ್ದೇಶದಿಂದ, ಕರ್ನಾಟಕ ರಾಜ್ಯ ಸರ್ಕಾರವು, ಕರ್ನಾಟಕ ಮೋಟಾರ್ ಸಾರಿಗೆ ಮತ್ತು ಇತರೆ ಸಂಬಂಧಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮತ್ತು ಕಲ್ಯಾಣ ಯೋಜನೆಯನ್ನು ರೂಪಿಸಿದ್ದು, ಕರ್ನಾಟಕ ರಾಜ್ಯ ಮೋಟಾರ್ ಸಾರಿಗೆ ಹಾಗೂ ಇತರೆ ಸಂಬಂಧಿತ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ ಮಂಡಳಿಯ ಮೂಲಕ ಜಾರಿಗೊಳಿಸಲಾಗುತಿದ್ದೆ.
ನೊಂದಣಿ ಮತ್ತು ಸ್ಮಾರ್ಟ್ ಕಾರ್ಡ್ ವಿತರಣೆ ವಿವರ ಹೀಗಿದೆ:
ksuwssb.karnataka.gov.in ಪೋರ್ಟಲ್ನ ನಲ್ಲಿ ಅಗತ್ಯ ದಾಖಲೆಗಳೊಂದಿಗೆ ನೋಂದಣಿ ಮಾಡಿಕೊಳ್ಳ ಬಹುದು.
ಈ ಯೋಜನೆಯ ಕರ್ನಾಟಕ ರಾಜ್ಯಕ್ಕೆ ಮಾತ್ರ ಅನ್ವಯಿಸುತ್ತದೆ.
ವಯೋಮಿತಿ 18 ರಿಂದ 60 ವರ್ಷ.
ಆದಾಯ ತೇರಿಗೆ ಪಾವತಿದಾರರಾಗಿರಬಾರದು.
ಇಎಸ್ಐ ಮತ್ತು ಇ ಪಿ ಎಫ್ ಸೌಲಭ್ಯ ಹೊಂದಿರಬಾರದು.
ಯೋಜನೆಯ ಸೌಲಭ್ಯಗಳು ಕರ್ತವ್ಯದಲ್ಲಿ ಇರುವಾಗ ಹಾಗೂ ಇಲ್ಲದಿರುವಾಗಲೂ ಸಹ ಲಭ್ಯವಾಗುತ್ತದೆ.
ಷರತ್ತುಗಳು: ನೋಂದಣಿ ಶುಲ್ಕ ಮೂರು ವರ್ಷಗಳ ಅವಧಿ ರೂ.50/-.
ಅಪಘಾತ ಪರಿಹಾರ ಸೌಲಭ್ಯ:
ಅಪಘಾತದಿಂದ ಫಲಾನುಭವಿಗಳು ನಿಧನರಾದಲ್ಲಿ, 5 ಲಕ್ಷ ಪರಿಹಾರ.
ಅಪಘಾತದಿಂದ ಶಾಶ್ವತ ದುರ್ಬಲತೆ ಹೊಂದಿದಾಗ, ಫಲಾನುಭಾವಿಗೆ ದುರ್ಬಲತೆಯ ಪ್ರಮಾಣಕ್ಕೆ ಅನುಗುಣವಾಗಿ ಎರಡು ಲಕ್ಷದವರೆಗೆ ಪರಿಹಾರ.
ಸಹಜ ಮರಣ ಹೊಂದಿದ ಫಲಾನುಭವಿಗಳ ಅವಲಂಬಿತರಿಗೆ ಅಂತ್ಯಸಸ್ಕಾರದ ವೆಚ್ಚವು ಸೇರಿದಂತೆ 25,000 ಗಳ ಪರಿಹಾರ.
ಶೈಕ್ಷಣಿಕ ಧನಸಹಾಯ:
ನೊಂದಾಯಿತ ಫಲಾನುಭವಿಯ ಗರಿಷ್ಠ ಇಬ್ಬರು ಮಕ್ಕಳಿಗೆ 12ನೇ ತರಗತಿ ಅಥವಾ ತತ್ಸಮಾನ ವಾರ್ಷಿಕ ತಲಾ 3000/-.
ಪದವಿ ಅಥವಾ ತತ್ಸಮಾನ ವಾರ್ಷಿಕ ತಲಾ 5500/-.
ಇಂಜಿನಿಯರಿಂಗ್ ಹಾಗೂ ವೈದ್ಯಕೀಯ ಶಿಕ್ಷಣ ವಾರ್ಷಿಕ ತಲಾ 8000/-.
ಪದವಿ ವಾರ್ಷಿಕ ತಲಾ 11000/-.
ಹೆರಿಗೆ ಭತ್ಯೆ:
ಭಾನುಭವಿಯ ಮೊದಲ ಎರಡು ಹೇರಿಗೆಗಳಿಗೆ ಮಾತ್ರ ಸೀಮಿತಗೊಂಡಂತೆ ತಲಾ 10,000/-.
ನೋಂದಣಿ ಕ್ಷೇಮ ಇನ್ನಿತರ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ವಿಳಾಸಗಳು👇
2ನೇ ಮಹಡಿ, ಬಿ ಡಿ ಪೀ ಪ್ಲಾಜಾ, ಕಾಟನ್ ಮಾರ್ಕೆಟ್ ಹುಬ್ಬಳ್ಳಿ.
ಲಾರಿ ಚಾಲಕರು ಹಾಗೂ ಸಂಬಂಧಪಟ್ಟಂತಹ ಎಲ್ಲಾ ಕಾರ್ಮಿಕರ ಸುರಕ್ಷತೆಯೇ ನಮ್ಮ ಗುರಿ ಎಂದು ಕರ್ನಾಟಕ ಲಾರಿ ಅಸೋಸಿಯೇಷನ್ ವೈಸ್ ಪ್ರೆಸಿಡೆಂಟ್ ಶ್ರೀ ಗಿರೀಶ್ ಮಲ್ನಾಡ್ ಅವರು ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.
