
ಹುಬ್ಬಳ್ಳಿಯ ಕಟಕರ ಓಣಿಯಲ್ಲಿ ಮಲಿಕ್ ಬೇಪಾರಿ ಎಂಬ ವ್ಯಕ್ತಿ ತನ್ನ ಹೆಂಡತಿಯ ಬರ್ಬರ ಕೊಲೆ ಮಾಡಿ ತಾನು ಸಹ ನೇಣು ಬಿಗಿದುಕೊಂಡು ಸಾವನ್ನಪ್ಪಿರುವ ಘಟನೆ ನಡೆದಿದೆ.
ಹೆಂಡತಿ ದಿನವಿಡೀ ಕಿರಿಕಿರಿ ಮಾಡುತ್ತಿರುವ ನಿಟ್ಟಿನಲ್ಲಿ ಈತನು ಹೆಂಡತಿಯ ಕೊಲೆಯನ್ನು ಮಾಡಿದ್ದಾನೆ ಎಂದು ಬೆಳಕಿಗೆ ಬಂದಿದೆ.
ಪತ್ನಿ ಶಾಯಿಸ್ತಾಬಾನು ದುಡಿಮೆ ಮಾಡು ಎಂದು ಒತ್ತಾಯಿಸುತ್ತಿದ್ದಳು. ಮಲಿಕ್ ಯಾವುದೇ ಕೆಲಸ ಮಾಡದೆ ಉಂಡಾಡಿ ತಿರುಗುತ್ತಿದ್ದನು. ಇದು ಮಲಿಕ್ ಗೆ ಕಿರಿಕಿರಿ ಅನಿಸಿ ಪತ್ನಿಯ ಜೊತೆ ವಾಗ್ವಾದ ಶುರು ಮಾಡಿ ಕೊಲೆಗೆ ಅಂತ್ಯವಾಗಿದೆ.
ಮೊದಲ ಪತಿಯಿಂದ ಶೈಸ್ತಾಬಾನು ಎರಡು ಗಂಡು ಮಕ್ಕಳಿಗೆ ಜನ್ಮ ನೀಡಿದ್ದಳು. ಮೊದಲನೆಯ ಗಂಡ ತೀರಿಕೊಂಡ ನಂತರ ವಿಧವೆಯಾದ್ ಶೈಸ್ತಾಭಾನು ಜೊತೆ ಮಲಿಕ್ ಎಂಬ ವ್ಯಕ್ತಿಗೆ ಮದುವೆ ಮಾಡಿಕೊಟ್ಟಿದ್ದರು. ಮದುವೆಯಾಗಿ ಒಂದು ವರ್ಷವಾದರೂ ಯಾವುದೇ ದುಡಿಮೆ ಇಲ್ಲದೆ ಓಡಾಡುತ್ತಿದ್ದ. ಜಗಳ ವಿಕೋಪಕ್ಕೆ ತಿರುಗಿ ಕೊಲೆಯಾಗಿ ಅಂತ್ಯವಾಗಿದೆ.
ನಂತರ ಹೆಂಡತಿಯ ಹೊಟ್ಟೆಯಿಂದ ರಕ್ತಸ್ರಾವ ನೋಡಿ ತಾನು ಅದೇ ಜಾಗದಲ್ಲಿ ತನ್ನ ಹೆಂಡತಿಯ ಸೀರೆಯಿಂದ ನೇಣು ಬಿಗಿದು ಕೊನೆಯ ಉಸಿರುಳಿದಿದ್ದಾನೆ.
