ಹುಬ್ಬಳ್ಳಿ: ರೀಲ್ ಸ್ಟಾರ್ ಅಲ್ಲ ಮತ್ತು ರಿಯಲ್ ಸ್ಟಾರ್ ಶ್ರೀ ಅಶೋಕ್ ಚಿಲ್ಲಣವರ್.!
ಉಣಕಲ್ ಗ್ರಾಮದ ರಿಯಲ್ ದಂಗಲ್ ಸ್ಟಾರ್ ಶ್ರೀ ಅಶೋಕ್ ಚಿಲ್ಲಣವರ್, ಉಣಕಲ್ ನಲ್ಲಿ ತನ್ನ ಸ್ವಂತ ಗರಡಿ ಮನೆ ಯಲ್ಲಿ ಸಾಕಷ್ಟು ಮಕ್ಕಳನ್ನು ತರಬೇತಿ ನೀಡುತ್ತಿದ್ದಾರೆ. ದೇಶಕ್ಕೆ ಹೆಚ್ಚಿನ ಕೀರ್ತಿ ತರಲು ಸಾಕಷ್ಟು ಮಕ್ಕಳಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.
ಹೌದು ಮಿತ್ರರೇ ನಮ್ಮ ಹುಬ್ಬಳ್ಳಿ ಶಹರದ ಉಣಕಲ್ ಗ್ರಾಮದ ನಿವಾಸಿಯಾದ್ ಶ್ರೀ ಅಶೋಕ್ ಚಿಲ್ಲಣವರ್ ತನ್ನ 4 ಮಕ್ಕಳಲ್ಲಿ ತನ್ನ ಸುಪುತ್ರಿ ಸರೋಜ ಅಶೋಕ್ ಚಿಲ್ಲಣವರ್ ಇವತ್ತು ದೆಹಲಿ ಸ್ಪೋರ್ಟ್ಸ್ ಯೂನಿವರ್ಸಿಟಿ ಗೆ ಸೆಲೆಕ್ಷನ್ ಆಗಿದ್ದಾರೆ. ನಮ್ಮ ಹುಬ್ಬಳ್ಳಿಯ್ ಕೀರ್ತಿ ಹೆಚ್ಚಿಸಿದ್ದಾರೆ.

ಇವರು ಕ್ರೀಡೆ ಯಲ್ಲಿ ಮುಂದೆ ವರೆದು ತನ್ನ ಹೆಚ್ಚಿನ ಅಭ್ಯಾಸಕ್ಕಾಗಿ ದೆಹಲಿ ಪ್ರಯಾಣ ಬೆಳೆಸುತ್ತಿದ್ದಾರೆ. ಇವರ ಪ್ರಯಾಣ ಒಳ್ಳೆದಾಗಲಿ ಹಾಗೂ ಭಾರತ್ ದೇಶಕ್ಕೆ ಚಿನ್ನ ಗೆದ್ದು ತಂದು ಕೊಡಲಿ ಎಂದು ಆಶಿಸುತ್ತೇವೆ.
ಇವತ್ತು ವಾಯು ಪುತ್ರ ಸ್ಪೋರ್ಟ್ಸ ಫೌಂಡೇಶನ್ ವತಿಯಿಂದ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಸಮಯದಲ್ಲಿ ಭಾಗವಹಿಸಿದ್ ಬಂದು-ಬಳಗ ಮಿತ್ರರು, ಉಣಕಲ್ ಗ್ರಾಮದವರು ಹಾಗೂ ಸಹೋದರರು ಆಶೀರ್ವದಿಸಿದರು.
ಒಲಂಪಿಕ್ ಗೋಲ್ಡ್ ಗೆಲ್ಲಲ್ಲಿ ಎಂದು ತಂದೆ ಶ್ರೀ ಅಶೋಕ್ ಚಿಲ್ಲಣವರ್ ಆಸೆ ಇಟ್ಟು ಕೊಂಡಿದ್ದಾರೆ ಆಶೀರ್ವಾದದೊಂದಿಗೆ ಕುಮಾರಿ ಸರೋಜಾ ಅವರಿಗೆ ಶುಭ ಕೋರಿದ್ದಾರೆ ಹಾಗೂ ಎಲ್ಲಾ ಪೋಷಕರು ತಮ್ಮ ಮಕ್ಕಳ ಬಗ್ಗೆ ಕ್ರೀಡೆ ಬಗ್ಗೆನೂ ಹೆಚ್ಚಿನ ಆಸಕ್ತಿ ಹೆಚ್ಚಿಸಿ ಪ್ರೋತ್ಸಾಹ ನೀಡ್ಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

