ಇದು ನೋಡಿ ಬಂಥು ಅಂಜುಮನ್ ಎಲೆಕ್ಷನ್, ಜಿದ್ದಾ ಜಿದ್ದಿಯ ಆಟ್.. ನಾ ಮುಂದೆ ನಿ ಮುಂದೆ, ನಾ ಒಳ್ಳೆನು ನಾ ಕೆಟ್ಟೋನು ಅಲ್ಲಾ, ಎಂದು ಸಾಬೀತು ಪಡಿಸೋ ಅಧಿಕಾರಕ್ಕೆ, ಜನರನ್ನ ಆಳಕ್ಕೆ ಹೊರಟಿರುವ ಜನ ದಣಿಗಳೂ.. ಅಧಿಕಾರದ್ ಹುಚ್ಚು ಎಷ್ಟರ ಮಟ್ಟಿಗೆ ಅಂದರೆ ಅಂಜುಮನ್ ಸಂಸ್ಥೆಗೆ ಹೊಸ ಸದಸ್ಯರು ಕೂಡ ಸೇರಿಸಿ ಕೊಡಲಿಲ್ಲ, ಹೊಸಬರಿಗೆ ಅವಕಾಶ ಕಲ್ಪಿಸಿ ಕೊಡಲೂ ಹೆದರಿಕೆ ಇಂದ ಹೊಸಬರ ಸದಸ್ಯತ್ವ ರದ್ದಗೊಳಿಸಲಾಯಿತು. ಯಾಕೆ ಹೀಗೆ? ಹೇಳ್ತೇನೆ ಬನ್ನಿ! ಜೈಲು ಪಾಲ ಆಗಿರುವ ಮಕ್ಕಳು ಹೊರಗೆ ಬರ್ಲಿಲ್ಲಿಲ್, ಹಳೇ ಅಧಿಕಾರ ದಲ್ಲಿ ಇದ್ದವರು ಅಂಜುಮನ್ ಸಂಸ್ಥೆಯನ್ನ ಉದ್ಧರ್ ಮಾಡೋ ನಿಟ್ಟಿನಲ್ಲಿ ಯಾವುದೇ ಡೆವಲಪ್ಮೆಂಟ್ ಆಗಲಿಲ್ಲ. ಮತ್ತೆ ಅಧಿಕಾರ ಕೊಡಿ ನಾನು ಮೆಡಿಕಲ್ ಕಾಲೇಜು ಕಟ್ಟುತ್ತೇನೆ, ಜೈಲು ಸೇರಿದ ಮಕ್ಕಳನ್ನ ಹೊರಗೆ ತರುತ್ತೇನೆ, ನನ್ನ ಜನರ ಒಳಿತಿಗಾಗಿ ಕೆಲಸ ಮಾಡುತ್ತೇನೆ ಎಂದು ಸದಸ್ಯರ ಮನವೊಲಿಸಲು ಹರ್ ಸಾಹಸ ಪಡುತ್ತಿದ್ದಾರೆ. ಅಧಿಕಾರ ದಲ್ಲೀ ಇದ್ದಾಗ ಯಾಕೆ ಮಾಡಿಲ್ಲ ಕೇಳಿದರೆ ಕೋರೋನ ರೋಗದ್ ನೆಪ್ ಹೇಳಿ ಬೇರೇನೇ ಉತ್ತರ ಕೊಡುತ್ತಾರೆ. ಇನ್ನೂ ಕೆಲವರು ಅಧಿಕಾರ ಸಿಕ್ಕಾಗ ಜನರ ಬಗ್ಗೆ ಕಾಳಜಿ ವಹಿಸದೆ ಮಿನಿಸ್ಟರ್, ಎಂಎಲ್ಎ ಪದವಿ ಪಡೆದು ಈಗ ಅಂಜುಮನ್ ಸಂಸ್ಥೆಯ ಅಧಿಕಾರ ಪಡೆಯಲೂ ಮುಂದಾಗುತಿದ್ದಾರೆ, ಯಾಕೆ ನಿಮ್ಮ ಗ್ರೂಪ್ ನಲ್ಲಿ ಒಳ್ಳೆ ಕ್ಯಾಂಡಿಡೇಟ್ ಇಲ್ವಾ? ಹೊಸಬರಿಗೆ ಅವಕಾಶ ಕಲ್ಪಿಸಿ ಅವರಿಗೆ ಸರಿಯಾದ ಮಾರ್ಗದರ್ಶನ ಕೊಟ್ಟು ಅಧಿಕಾರ ಕೊಡಿಸ್ ಬಹೂದು ಅಲ್ವಾ? ಯಾಕೆ ಮಾಡುತ್ತಿಲ್ಲ? ಇವರಿಗೆ ತಮ್ಮ ಜನರ ಮೇಲೆ ನಂಬಿಕೆ ಇಲ್ವಾ?
ಇನ್ನೂ ಕೆಲವರು ಸದಸ್ಯರನ್ನ ದಾರಿ ತಪ್ಪಿಸಿ ಅವ್ನು ಹೀಗೆ ಇವನು ಹೀಗೆ ಎಂದು ದಾರಿ ತಪ್ಪಿಸುವ ಮೂಲಕ ಜನರಿಗೆ ಗೊಂದಲ ಸೃಷ್ಟಿ ಮಾಡಿ ಬೇರೇನೇ ವಾತಾವರಣ್ ನಿರ್ಮಿಸುತ್ತಿದ್ದಾರೆ. ಈ ಗೊಂದಲ ಯಾಕೆ? ಆಶ್ವಾಸನೆ ಕೊಡುತ್ತಿರುವ ಅಧಿಕಾರಿಗಳು ಗೆದ್ದು ಬಂದ ನಂತರ ಮಾಡುವುದು ಬೇರೇನೇ. ಅಧಿಕಾರ ಪಡೆಯಲು ಜನರ ಆಶ್ವಾಸನೆ ಜೊತೆ ಆಟವಾಡೋಡು ನಿಲ್ಲಿಸ ಬೇಕು? ಅಧಿಕಾರ ದಲ್ಲಿ ಇಲ್ಲದಂತ ಕಾಳಜಿ ಮತ್ತೆ ಅಧಿಕಾರ ಪಡೆಯಲು ಕಾಳಜಿ ವಹಿಸುತ್ತಿದ್ದಾರೆ. ಈ ತರ ಸಾಕಷ್ಟು ಗೊಂದಲಗಳನ್ನು ಹಬ್ಬಿಸಿ ಮತ ಬೇಟೆ ನಡೆಯುತ್ತಿದೆ. ಹಾಗಾದರೆ ಇದರ ಪರಿಹಾರವೇನು? ಎಂತಹ ಅಧಿಕಾರಿ ಅಂಜುಮನ್ ಸಂಸ್ಥೆಗೆ ಬೇಕು? ಇದನ್ನ ಮತ ಹಾಕುವ ಮುನ್ನ ಯೋಚಿಸಿ. ನಿಮ್ಮ ಒಂದು ಮತ ನಿಮ್ಮ ಮನೆಯ ಮಕ್ಕಳ ಭವಿಷ್ಯದ ಸಲುವಾಗಿ ತೆಗೆದುಕೊಂಡು ಅಂತಹ ಉತ್ತಮ ಕ್ರಮ ಆಗಿರಬೇಕು. ಅಧಿಕಾರ ಬೇಕು ಎಂದು ಜನರ ಹಿಂದೆ ಬಿದ್ದಿರುವ ಅಧಿಕಾರಿಯನ್ನ ಪ್ರಶ್ನಿಸಿ, ಲಿಖಿತದಲ್ಲಿ ಅವರ ಆಶ್ವಾಸನೆಯನ್ನು ಬರೆದುಕೊಳ್ಳಿ. ಜನರ ಒಳಿತಿಗಾಗಿ ಅರ್ಧ ರಾತ್ರಿಯಲ್ಲಿ ಬಂದು ನಿಲ್ಲುವಂತಹ ಅಧಿಕಾರಿಯನ್ನು ಆಯ್ಕೆ ಮಾಡಿ. ಅಂಜುಮನ್ ಸಂಸ್ಥೆಯಿಂದ ಗೆದ್ದು ಬಂದಂತಹ ಅಧಿಕಾರಿ ಮುಂಬರುವ ಎಂಪಿ ಎಲೆಕ್ಷನ್ ಆಸೆ ಇಟ್ಟುಕೊಂಡಿದ್ದಾನೆ ತಿಳಿದುಕೊಳ್ಳಿ. ಅಂಥವರ ಸಹವಾಸದಿಂದ ದೂರವಿರಿ ಯಾಕೆ ಎಂದರೆ ಅಧಿಕಾರದ ಹುಚ್ಚು ಜನರ ಒಳಿತಿಗಾಗಿ ಇರಬೇಕು ಹೊರತು ಜನರ ಭುಜದ ಮೇಲೆ ಕಾಲು ಇಟ್ಟು ಮೇಲೆ ಇರುವ ಅಧಿಕಾರಿಯನ್ನು ಆಯ್ಕೆ ಮಾಡಬೇಡಿ. ನಿಮ್ಮ ಒಂದು ಮತ ನಿಮ್ಮ ಜೀವನ ಶೈಲಿ, ನಿಮ್ಮ ಮಕ್ಕಳ ಶಿಕ್ಷಣ, ಸರ್ಕಾರದಿಂದ ಬರುವಂತಹ ಯೋಜನೆಗಳು ನಿಮ್ಮ ವರಿಗೆ ತಲುಪಿಸುವಂತಹ ಕೆಲಸ ಮಾಡುವಂತಹ ವ್ಯಕ್ತಿಯನ್ನು ಆಯ್ಕೆ ಮಾಡಿ. ಮುಂದಿನ ಸಂಚಿಕೆಯಲ್ಲಿ ಇನ್ನು ವಿಸ್ತಾರವಾಗಿ ನಿಮ್ಮ ಮುಂದೆ ಮಾಹಿತಿಯನ್ನು ತರುತ್ತೇವೆ ಸ್ಟಾರ್ ಟಿವಿ ನ್ಯೂಸ್ ಹುಬ್ಬಳ್ಳಿ.
